ಇರುಳ ಸಂಜೆಯಲಿ

ಇರುಳ ಸಂಜೆಯಲಿ
ಚಿಲಿಪಿಲಿನಾದವು
ಕೇಳಲು ಸಂಗೀತ ||

ಮೌನವು ತುಂಬಿದ
ಇಳೆಯಲಿ ಹರಿಸಿತು
ಮೋದದ ಸಂಗೀತ ||

ಬಿದಿಗೆ ಚಂದಮನ
ಬೆಳದಿಂಗಳ ಸಿಂಚನ
ಹೃದಯ ಮಿಡಿಯಲು ಸಂಕೇತ ||

ಸ್ನೇಹ ಭಾವದಲಿ
ಬೀಸುವ ತಂಗಾಳಿ
ನಗುಮೊಗದ ಸಂದೇಶ ||

ಹಕ್ಕಿ ಗೂಡಲ್ಲಿ
ಹೊಸತು ಗಾನವದು
ಪ್ರಣಯದ ಸಂಗೀತ ||

ಸಪ್ತಸ್ವರ ತುಂಬಿದ
ಹಾಡಿಗೆ ಮೃದು
ವಚನದ ಅಭಿಷೇಕ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಡುನೀರಿನಲ್ಲಿ
Next post ಬುದ್ಧನ ದಾರಿಯ ಹಿಡಿದೇವು

ಸಣ್ಣ ಕತೆ