ನಡುನೀರಿನಲ್ಲಿ

ದೀಪ ಹಚ್ಚಿ
ಹೃದಯ ಬಿಚ್ಚಿ
ದೈವದ ಪಾದಕ್ಕೆ ಹಣೆ ಹಣೆ ಚಚ್ಚಿ ಬೇಡಿದೆವು ಅಂದು :
ಇವಗೊದಗಲಿ ಹಿರಿತನ
ಮೇಲೇಳಲಿ ಮನೆತನ
ಮೈ ತುಂಬಲಿ ಕ್ಷೀಣಿಸಿದ ಮನೆಭಾಗ್ಯ ಎಂದು.
* * *

ನೀ ಬಂದೆ
ನಮ್ಮ ನಡುವೆ ನಿಂದೆ
ಏನೇನೋ ನಿರೀಕ್ಷೆ ತಂದೆ.
ನೀ ನಿಂತ ನೆಲ ಬೆಳೆ ಚಿಮ್ಮುವ ಹೊಲವಾಗಿ
ನೀ ಸೋಕಿದ ಮರಕ್ಕೆ ಮೈತುಂಬ ಫಲವಾಗಿ
ಬತ್ತಿದ ಜಲಗಳೆಲ್ಲ ಮತ್ತೆ ಕಾಣಿಸಿಕೊಂಡು
ಬಣ್ಣದ ಚಿತ್ತಾರವಾದೀತು ಬ್ಳು ಬದುಕು ಎಂದು
ತುದಿಗಾಲಿನಲಿ ನಿಂತು ಎರಡು ಬದಿಗೆ
ಕಾದೆಉ ದಿನಾ ಅಂಥ ಸಿರಿಗಳಿಗೆಗೆ.
* * *

ಹರಿದ ಕಾಗದದಂಥ ಬಿಳಿ ಮುಗಿಲ ಚೂರು
ಎಲ್ಲೊ ಐದಾರು ಬಾನಿನಲ್ಲಿ
ಯಾವಾಗ ಆದುವೋ ಕರಿಯ ಕಂಬಳಿ ಚೂರು
ನೂರು ಸಾವಿರ ಈಗ ಮಾಯದಲ್ಲಿ.
ಎಲ್ಲ ಒಂದಕ್ಕೊಂದು ಸೇರಿಕೊಂಡು
ದಟ್ಟವಾಗಿ, ನೀರ ಬೆಟ್ಟವಾಗಿ
ಸಾಗಿಬಂದವು ಮಾರಿಗಾಲಲ್ಲಿ ಜೋರಲ್ಲಿ
ಕಾಳವರ್ಷಿಣಿ ಕೂಗು ಹಾಕಿಕೊಂಡು.
ಬೆನ್ನ ಚಪ್ಪರಿಸಿ ಛೂ ಬಿಟ್ಟಿತೆಲ್ಲಿಂದಲೋ
ಮೇಲೆದ್ದು ಬಂದ ಮನೆಮುರುಕ ಗಾಳಿ
ಬಂತು ಬಂತೋ ಬಂತು ನಗುವ ನೆಲದೆದೆಗೆ
ಪ್ರಳಯ ಕಾಲದ ಮೊದಲ ಕಂತು ಎನುವಂತೆ
ಜಲದ ದಾಳಿ!
* * *

ಹಿಂದೆ ಇಷ್ಟಾದರೂ ಹಸಿರಿದ್ದ ನೆಲವೆ ಇದು?
ಕಾಲಿಟ್ಟ ಕಡೆಯೆಲ್ಲ ಕೆಸರು,
ಹರಿದ ಛಾವಣಿ ಮುರಿದುಬಿದ್ದ ಗಿಡಗಂಟಿ
ಒಡೆದ ಸೂರು.
ಬೀದಿ ಮನೆ ಅಂಗಡಿ ಚರಂಡಿ ಡೈನೇಜುಗಳ
ಒಂದುಗೂಡಿಸಿ ನಿತ ಹೊಲಸು ನೀರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಗಜ್ಯೋತಿ
Next post ಇರುಳ ಸಂಜೆಯಲಿ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…