ಬುದ್ಧನ ದಾರಿಯ ಹಿಡಿದೇವು….
ನಮಗೆ ನಾವು ಬೆಳಕಾದೇವು…. //ಪ//
ಮತ ಮೌಢ್ಯಗಳ ಅಡೆತಡೆಯಿಲ್ಲ….
ಧರ್ಮದಫೀಮಿನ ನಿಶೆ ಇಲ್ಲಿಲ್ಲ….
ಶಾಸ್ತ್ರದ ಕಂತೆ ಪುರಾಣ ಬೊಂತೆ
ಇಲ್ಲ ಇವು ನಮಗೆಂದಿಗೂ ಇಲ್ಲ
ನಮಗೆ ನಾವು ಬೆಳಕಾದೇವು….
ಬುದ್ಧನಲ್ಲೆ ನಿಜ ಕಂಡೇವು
ಜಾತಿ ಅನಿಷ್ಠದ ಕಳೆ ಕಿತ್ತೇವು….
ದೇವರಿಲ್ಲದ ನೊಗ ಹೊತ್ತೇವು….
ಮೇಲು ಕೀಳಿನ ಕುಂಟೆಯ ಹೊಡೆದು
ನವ ಸಮೃದ್ಧಿಯ ಬೆಳೆ ಬೆಳೆದೇವು
ನಮಗೆ ನಾವು ಬೆಳಕಾದೇವು. . . .
ಬುದ್ಧನಲ್ಲೆ ನಿಜ ತೋರೇವು
ನಡೆದ ದಾರಿ ಹೇಗಾದರು ಇರಲಿ….
ಕಮರಿದ ಕನಸು ಸಾವಿರ ಇರಲಿ….
ಬುದ್ಧನ ಪಂಜನು ಹಿಡಿದ ನಾವು
ಹೊಸ ಹಾದಿಯನು ಹಿಡಿದೇವು
ನಮಗೆ ನಾವು ಬೆಳಕಾದೇವು….
ಬೆಳಕಿನ ಭಾಷ್ಯವ ಬರೆದೇವು
*****



















