ಹದಿನಾರರ ಹರೆಯ

ಹದಿನಾರರ ಹರೆಯ ಬೆಡಗಿ
ನೀನು ಮಾನಸಕಂಡ ಗೆಳತಿ
ನಿನ್ನ ಮನದ ಪಯಣವೆಲ್ಲಿಗೆ?

ನಾಲ್ಕು ದಿಕ್ಕು ನಾಲ್ಕು ದೋಣಿ
ಬದುಕಿದು ಮಹಾಸಾಗರ
ಯಾವ ದಿಕ್ಕು ಯಾವ ದೋಣಿ
ಎತ್ತ ನೋಡೆ ಸುಂದರ ||

ಕನಸು ಕಟ್ಟಿ ಹೊರಟೆ ಏನು
ದಡವ ಹೇಗೆ ಮುಟ್ಟುವೆ
ಮೊರೆವ ಶರಧಿ ಮನದಿ ಕಷ್ಟ
ಅದನು ಹೇಗೆ ಅರಿಯುವೆ ||

ಶರದಿಯಲ್ಲಿ ಕಾಯುತಿಹವು
ಹಲವಾರು ಜೀವಿಗಳು
ಎಚ್ಚರವಿರಲಿ ಪಯಣ ಬೆಳೆಸು
ಹೊಂಚುತಿಹುದು ಅವುಗಳು ||

ನಿನ್ನ ದೋಣಿ ಭದ್ರವಿರಲಿ
ಪಯಣ ಬಹಳ ದೂರವು
ದಡವು ಸೇರಿ ಮೆರೆವನೆಂಬ
ಲೆಕ್ಕ ಛಲವು ಸುಲಭವು ||

ಇಡುವ ಹೆಜ್ಜೆ ಹೆಜ್ಜೆಗಳಲಿ
ಇರಲೆಚ್ಚರ ಗೆಳತಿ ನಿನಗೆ
ಕಾಣದಂಥ ಕಲ್ಲು ಮುಳ್ಳು
ಅಡಗಿರುವವು ಅಲ್ಲಿಯೇ ||

ದೂರ ಬೆಟ್ಟ ಬಹು ಸುಂದರ
ಕಾಣುತಿಹುದು ಕಣ್ಣಿಗೆ
ಕಾಡು ಮೃಗಗಳು ಇವು
ಹೊಂಚುತಿಹುವು ಮೆಲ್ಲಗೆ ||

ಹದಿನಾರರ ಶೋಡಷಿ ನಿನಗೆ
ಜಗವೆಲ್ಲವು ಸುಂದರ
ಬಲು ಸುಂದರತೆಯ ಖಣಿ
ನಿನ್ನ ಹಿಡಿವ ಪಂಜರ ||

ಹೆಜ್ಜೆ ಇಡುವ ಮುನ್ನ ನಿನಗೆ
ಬುದ್ಧಿ ಇರಲಿ ಎಚ್ಚರ
ತಗ್ಗು ದಿಣ್ಣೆ ಇಹವು ನೂರು
ಬೇಡ ನಿನಗೆ ಆತುರ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವನ
Next post ಹೃದಯವೆ ದೇವಾಲಯವಿಲ್ಲಿ

ಸಣ್ಣ ಕತೆ