ಹೃದಯವೆ ದೇವಾಲಯವಿಲ್ಲಿ

ಹೃದಯವೆ ದೇವಾಲಯವಿಲ್ಲಿ
ದೇವರು ಒಬ್ಬರೂ ಇಲ್ಲಿಲ್ಲ
ಇರುವುದು ದೇವತೆ ಮಾತ್ರ-ಆ
ದೇವಿಗೆ ಭಕ್ತ ನಾ ಮಾತ್ರ /ಪ//

ಎದೆ ಬಡಿತವೆ ಘಂಟಾನಾದ
ಕಣ್ಣೋಟದಲೆ ಆರತಿ
ತುಟಿ ಮಿಡಿತವೆ ಮಂಗಳಸ್ತೋತ್ರ
ಇದಕ್ಕೆ ಪ್ರಸನ್ನ ಮೂರುತಿ

ಹೊರಟರೆ ಅವಳು ಮೆರವಣಿಗೆ
ಎದೆಯಲಿ ಬೀದಿ ಮೂಡುವುದು
ತೆರೆದರೆ ಕಣ್ಣು ಕರುಣೆಯಲಿ
ಬದುಕಲಿ ಸುಗ್ಗಿ ಕಾಣುವುದು

ನನ್ನ ದೇವಿಗೆ ನಾ ಭಕ್ತ
ಎಲ್ಲಾ ವರಗಳಿಗೂ ಶಕ್ತ
ಇದರ ಪ್ರಕಟಣೆ ಬೇಕಿಲ್ಲ
ನಿಜ ಮುಕ್ತಿಗೆ ಇದು ಸಾಕಲ್ಲ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹದಿನಾರರ ಹರೆಯ
Next post ಅಧ್ಯಾಪಕರಿಲ್ಲ, ಜಾಗ್ರತೆ!

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…