ಬಣ್ಣ ಬಣ್ಣ ನೂರೆಂಟು
ಬಣ್ಣ ಬೆಡಗಿ ನಿನ್ನಲ್ಲಿ
ಸುತ್ತಿ ಸುಳಿದು ಎದೆಯ
ಗೂಡಲ್ಲಿ ಕುಳಿತಾಗ||

ಮಾಗಿಯ ಕನಸು
ಮಾಗದ ಮನಸು
ಮಾವು ತೋರಣ
ಕಟ್ಟಾವು ನಿನ ಮನೆಯಾಗ||

ಬೆಳ್ಳಂ ಬೆಳದಿಂಗಳು
ನಿನ್ನ ಮೊಗದಾಗ
ಮೂಡಿ ವಸಂತನ
ಒಲವಿಗೆ ಸುಳಿದಾವು||

ಚೆಂದುಳ್ಳಿ ಚೆಲುವೆ
ಬಿಂಕದ ನಗುವೆ
ಬೆಳ್ಳಕ್ಕಿ ನಿನ್ನ ಹಾಡಿಗೆ
ತಂಗಾಳಿ ಕೂಗ್ಯಾವು||

ಬಣ್ಣ ಬಣ್ಣ ನೂರೆಂಟು
ಹೊಕ್ಕಿರಲು ಮನದಾಗ
ಮೇಘದ ಸಂದೇಶ
ಕಣ್ ಸೆಳೆದ್ಯಾವು||
*****