ಒರೆಸಿಬಿಡು ಬೇಕಾದರೆ ಗೋಳಿಡುವ ಈ ದುರ್ಬಲ ಬದುಕನ್ನು,
ಬೋರ್ಡಿನ ಮೇಲೆ ಬರೆದ ಅಲ್ಪಾಯುಷಿ ಅಕ್ಷರಗಳನ್ನು
ಡಸ್ಟರು ಸುಮ್ಮನೆ ಒರೆಸಿಬಿಡುವಂತೆ.
ನಿನ್ನವರ್‍ತುಲಕ್ಕೆ ಮತ್ತೆ ಹೆಜ್ಜೆ ಇಡಲು ಕಾದಿದ್ದೇನೆ
ನಾನು ಹೆಜ್ಜೆ ಇಟ್ಟು ನಡೆದು ಬಳಲಿದ
ಹಾದಿಗಳೆಲ್ಲ ನಿನ್ನಲ್ಲಿ ತಲುಪಿ ನೆಲೆಗೊಳ್ಳಲಿ ಬಿಡು.
ನಡೆ ನಡೆಯುತ್ತ ನನ್ನ ನಿಜ ದಂದುಗ
ಮರೆವೆಗೆ ಸಂದಿತ್ತು-ನಾನಿಲ್ಲಿಗೆ ಮತ್ತೆ ಬಂದಿರುವುದೇ ಸಾಕ್ಷಿ.
ನನ್ನ ಮಾತು ವಚನವಾಗದೆ ಬರಿಯ ರಚನೆಯಾಗಿತ್ತು.
ದಡಕ್ಕೊಮ್ಮೆ ಬಡಿದು ಉಲಿಯುವ ನಿನ್ನ ಅಲೆದನಿ
ಕೇಳಿದಾಗ ಒಮ್ಮೊಮ್ಮೆ, ಮರೆತ ತನ್ನೂರನ್ನು ನೆನೆವ
ಅಳಿಮನದವನಂತೆ ನನ್ನೆದೆ ತಳಮಳಗೊಳ್ಳುತ್ತಿತ್ತು.
ನೀಲವಿಸ್ತಾರಕ್ಕೆ ಎದೆತೆರೆದೊಡ್ಡಿ ಹರಡಿರುವ ನಿನ್ನ ಬಯಲ ಸೌಂದಯರ್‍ಯಕ್ಕಿಂತ
ನಟ್ಟ ನಡುಹಗಲ ಬಿಸಿಲುರಿಯಲ್ಲಿ, ನಿರ್ಜನ ದಡದಲ್ಲಿ,
ಕೇಳುವ ನಿನ್ನ ಅಲೆಗಳ ಸದ್ದಿರದ ಏದುಬ್ಬಸದ ದನಿ
ಪಾಠ ಕಲಿಸಿದೆ ನನಗೆ ಶರಣು ಶರಣು ನಿನಗೆ.
ಬೆಳಕಿನ ಕಿರಣದೊಂದು ಅಣುವು ಮಾತ್ರ ನಾನು.
ಉರಿವುದೊಂದು ಬಿಟ್ಟು ಇನ್ಯಾವ ಅರ್ಥವೂ ಇಲ್ಲ ನನಗೆ.
*****
ಮೂಲ: ಯೂಜೀನ್ ಮಾಂಟೇಲ್ / Eugenio Montale
Related Post
ಸಣ್ಣ ಕತೆ
-
ಅಜ್ಜಿ-ಮೊಮ್ಮಗ
ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…
-
ಎರಡು ರೆಕ್ಕೆಗಳು
ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…
-
ಅಮ್ಮ
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…
-
ಡಿಪೋದೊಳಗಣ ಕಿಚ್ಚು…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…
-
ದೊಡ್ಡವರು
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…