ಒಂದೇ ಒಂದು ಬಿಳಿಯ ಕೂದಲು

ಒಂದೇ ಒಂದು ಬಿಳಿಯ ಕೂದಲು
ಬಂದಿತೆಂದು ಏಕಿಷ್ಟು
ಬೇಜಾರ ಮಾಡಿಕೂಳ್ಳುವೆ?|
ನನಗೆ ನೀ ಇನ್ನೂ ಹದಿನಾರರ ಚೆಲುವೆ
ಪ್ರೇಮದಲಿ ಕಾಣಿಸುವುದೇ ವಯಸ್ಸು?||

ನಿನ್ನ ಒಲವು ನಿನ್ನ ಚೆಲುವಿಗಿಂತ
ದಿನೇದಿನೇ ಎತ್ತರೆತ್ತರಕ್ಕೆ ಬೆಳೆಯುತಿದೆ|
ನಿನ್ನ ಸೌಂದರ್ಯ ತರುಲತೆಯಂತೆ ಚಿಗುರಿ
ನನ್ನ ಮನಕೆ ಮುದವ ನೀಡುತಿದೆ
ಬಿಡು ಚಿಂತೆಮಾಡುವುದ ನೀನು||

ಮುಪ್ಪು ದೇಹಕೆನೇ ಹೊರತು
ಮನಸಿಗಂತು ಅಲ್ಲವೇ ಅಲ್ಲ|
ಒಲಿದ ಹೃದಯಗಳಿಗೆ
ಪ್ರೀತಿ ಪ್ರೇಮ ಸದಾ ಹೊಸದು|
ಬಣ್ಣ ಬಣ್ಣದೋಕಳಿಯ ಹಾಗೆ
ನವನವೀನ ವರ್ಣಮಯ|
ಹೂ ದುಂಬಿಯೆರಡು ಹೂಬನದಿ
ಮಧು ಜೇನ ಹೀರಿದಂತೆ
ಜೀವನ ಸವಿಯ ಸವಿಯೋಣ||

ಬಂದರೆ ಬರಲಿಬಿಡು
ಒಂದೆರಡು ಬೆಳ್ಳಿ ಬಿಳಿ ಕೂದಲು|
ಹಾಗೆ ಒಂದೆರಡು ಕೆನ್ನೆ ಮೇಲೆ ಸುಕ್ಕು
ಕಣ್ಣ ಕಾಡಿಗೆ ಸುತ್ತ ಒಂದಿಷ್ಟು ಕಪ್ಪು|
ಮಗನಿಗೆ ಬರುತಲಿದೆ ಕುಡಿಮೀಸೆ
ನನಗೂ ಬಿಳಿಯಾಗುತಿದೆ ಹಳೇ ಮೀಸೆ
ಜೊತೆ ಜೊತೆಗೆ ಬೊಳಾಗುತಿದೆ ತಲೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆ ಬಾಂಬು ದುರಂತ…
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೭

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…