ಫಣೆಗೆ ಚಂದಿರ ರೇಖೆ
ಆಣಿಯಾಗಿ ತಿದ್ದಿಟ್ಟು!
ಮಣಿರಮಣಿ ತಾರೆಯೊಲು
ಮಿಣುಗು ದೀಪವನಿಟ್ಟು
ಕ್ಷಣಗಳನ್ನು ವರಸತಿಯು
ಎಣಿಸುತಲಿ ಕುಳಿತಿರಲು!

* * *

ಘನ ಘನೋಪಾಧಿಗಳ!
ತನ ಬುದ್ಧಿಯಿಂ ಪಡೆದ
ಘನಶ್ರೇಷ್ಠ ಪಂಡಿತನು
ತನಿಗಬ್ಬ! ಓದುತಲಿ!
ಮಣಿ ರಶಿಕಮಣಿಯವನು
ತನುವ ತಾ ಮರೆತಿಹನು!
ಮನವ ತಾ ಮರೆತಿಹನು!
*****

Latest posts by ಹೊಯಿಸಳ (see all)