Hoysala

#ಕವಿತೆ

ಚಿಟ್ಟೆ

0
Latest posts by ಹೊಯಿಸಳ (see all)

ನಿತ್ಯ ನಿತ್ಯ ಪಾರಿಜಾತ ಚಂಪ ಮಂದಾರವು ಮರವು ಗಿಡವು ಬೇರ ಬಳಿಗೆ ಸುಮವ ಸಲಿಸಲು ಭೂಮಿ ತಾಯಿ ಬಣ್ಣ ಬಣ್ಣ ದರಳ ನಿವುಗಳ ಮಾಲೆಯೆತ್ತಿ ಪ್ರೇಮದಿಂದ ಮೇಲೆ ಎಸೆವಳು. ವ್ಯೋಮವದನು ಎತ್ತಿ ಜಗಕೆ ನೋಡಿರೆನುವನು || ಇಲ್ಲಿ ನೋಡಿ ಕಾಮಹಾರವೆಂದು ತೋರ್ಪನು || ದೇವನದನು ಪ್ರೇಮಹಾರ ಕೊರಳಲಿಡುವನು! ಬಣ್ಣ ಬಣ್ಣ ಹೂವ ಬಿಡಿಸಿ ಜೋಡಿ ಮಾಡುವ. […]

#ಕೋಲಾಟ

ಸುಗ್ಗಿಯ ಕುಣಿತದ ಕೋಲಾಟ

0
Latest posts by ಹೊಯಿಸಳ (see all)

ಟಗರನು ಕೂಡಲು ಗೂಳಿಯು ಬಂದು ಚಿಗುರಿದ ಬೇವಿಗೆ ಬೆಲ್ಲವು ಸಂದು ಸಾಗಿತು ಕರಗವು ಕಬ್ಬಿನ ಗಾಣ ಈಗೀಗ ಹೊರಟಿವೆ ಹುಬ್ಬಿನ ಕಂಪು ಭುಯ್ಯೋ, ಭುಯ್ಯೋ, ಭಂಭರ ಭುಯ್ಯೋ || ಹುಯ್ಯೋ ಹುಯ್ಯೋ, ಹುವ್ವಿನ ಕೋಲ | ಅವಳಿಯ ಕೂಟವ ನಳ್ಳಿಯು ನೋಡೆ ಜವದೊಳು ಬಂದಿತು ವಡ್ಡಂತಿಯೂಟ ಧಾವತಿಯಿತ್ತವು ಬಿತ್ತನೆ ಬೇಗೆ ಭಾವಿಸಿ ಬಂದಿತು ಮುಂಗಾರ ಮಿಂಚು […]

#ಕವಿತೆ

ಶಿಲ್ಪಿ

0
Latest posts by ಹೊಯಿಸಳ (see all)

ಕೆಂಪು ವಜ್ರ ನೀಲ ಪುಷ್ಯ ರಾಗ ವೈಡೂರ್ಯವು ಚಂಪರಾಗ ಚಂದ್ರಕಾಂತ ನಾಗ ಗೋಮೇಧಿಕ ಇಂತು ನೋಡಿ ಒಡೆದು ಕಡೆದು ತಿಕ್ಕಿ ನಾಸಿಕ್ಕಿದೆ ಚಿಂತೆಯಲ್ಲಿ ಸಾಣೆಯಿಟ್ಟು ಮಿಕ್ಕುವನ್ನಿಕ್ಕಿದೆ ಇಡಲು ಕಳಸ ಗೋಪುರಾದಿ ರತುನ ಮಂದಿರಕೆನೆ ನುಡಿಯ ಗಣಿಗಳಿಂದ ತೆಗೆದೆ ರತುನ ಗಲ್ಲೆಂಬಿವ ಹೂಡಿ ನೋಡಿ ತೋರಣಾದಿ ಅಕ್ಷರಾಲಯಕನೆ ಜೋಡಿಸಿಹೆನು ರೂಢಿಯೊಳಗೆ ಅಕ್ಷರಾಲಯವಿದ ಕಣ್ಣಿವೆಂದು ಉಣ್ಣದಂಥ ರೂಪ ಸೌಂದಯ್ಯವು! […]

#ಕವಿತೆ

ಹೊಳಲು

0
Latest posts by ಹೊಯಿಸಳ (see all)

ಚಂದಿರನು ನಡುಗಗನ ವೊಂದಿರಲು ಮೌಕ್ತಿಕದ ಅಂದಣವದೆತ್ತಿರಲು ಅಂದವೆನೆ ಪರರೆಲ್ಲ ಹಿಂದಣಾ ದಿನಕಿಂತ ಸಂಧಿಸಿದ ಈ ರಜನಿ ಭಾರತದಿ ಬಂತು ಹೊಳಲು ಚಂದಿರನು ತಂಬೆಳಕ ನಗುವಿಡಲು ಅಪಹಾಸ ದಂದಣವನೆತ್ತಿರಲು ಲಗುಬಿಗಿಯ ಪರರಾಳು ಮಂದಿಗಳು ತಿಳಿದೇಳಲಗೊ! ಯೋಗಿ ಕರೆಯುತಿರೆ ಬಾರೆನುತ ಬಂತು ಹೊಳಲು ಕೀಳಕೀಳಲಿ ಪುಟ್ಟಿ ಮೇಲೆ ಮೇಲೇರುತಲಿ ಆಳುತಲಿ ಜನಮನವ ಶೂಲಕೊಡ್ಡುತ ಸುರಿಸಿ ಬಾಳ ಜೀವನ ಜಲವನಾಲಿಯರಿಯದಲಳಿಯೆ […]

#ಕವಿತೆ

ಸಂತಂಮಣ್ಣ

0
Latest posts by ಹೊಯಿಸಳ (see all)

ಕಲ್ಯಾಣಸೇವೆ ಜೇಬಿನ ಬುಡದಲಿ ಪುಟ್ಟಾಣಿ ಪುರಿಯು ಮೇಲೊಂದಿಷ್ಟು ಗೋಲೀ ಬಳಪ ಮತ್ತೊಂದಿಷ್ಟು ಬಂದ ಬಂದ ಸಣ್ಣತಮ್ಮಣ್ಣ ಪರಾಸು ಪೆಟ್ಲು ಒಳ ಜೇಬಲ್ಲಿ ಕಾಸಿನ ಸಾಲು ಕಳ್ಳ ಜೇಬಲ್ಲಿ ಚಂಡು ದಾಂಡು ಎಡ ಬಲದಲ್ಲಿ ಬಂದ ಬಂದ ಸಂತಂಮಣ್ಣ ಅಮ್ಮನ ಹಾರ ಉಬ್ಬಿದ ಎದೆಗೆ ಬಿದಿರಿನ ಕೊಳಲು ಗೆಜ್ಜೆಯ ವಳಗೆ ಹದ್ದಿನ ರೆಕ್ಕೆ ಎತ್ತಿದ ತಲೆಗೆ ಬಂದ […]

#ಕವಿತೆ

ಮೂರ್ಛೆ ಬಂದಿತ್ತು

0
Latest posts by ಹೊಯಿಸಳ (see all)

ಮೂರ್ಛೆ ಬಂದಿತ್ತು! ಮೂರ್ಛೆ ಬಂದಿತ್ತು! ಕಾಂಪೋಂಡು ಬಂಗ್ಲಿ ಕಂಕಮ್ಮಂಗೆ ಮೂರ್ಛೆ ಬಂದಿತ್ತು ಮದಿವೊ ಏನೋ ಆಗುತಿತ್ತಂತೆ ಚಪ್ಪರ ಕಂಬ ವರಗಿದ್ದರಂತೆ ಮದವಣಗನ್ನೇ ನೋಡುತಿದ್ದರಂತೆ ಯಾಕೋ ಏನೋ ಬಂದವರಂತೆ ಯಾರೋ ಏನೋ ಉಸಿರಿದರಂತೆ ಕೂತಿದ್ದ ಹಾಗೇ ಕನಕಂನೋರು ಇದ್ದಿದ್ದ ಹಾಗೇ ನಿಟ್ಟುಸಿರಿಟ್ಟು ಕಂಬ ಬಿಟ್ಟು ಜಾರಿದರಂತೆ ಕಂಕಂಮ್ಮ ಕಾಂಪೋಂಡು ಬಂಗ್ಲಿ ಕಂಕಂಮ್ಮ ಏಕಾ ಏಕೀ ಉಸಿರೇ ನಿಂತು […]

#ಕವಿತೆ

ಪಂಡಿತ

0
Latest posts by ಹೊಯಿಸಳ (see all)

ಫಣೆಗೆ ಚಂದಿರ ರೇಖೆ ಆಣಿಯಾಗಿ ತಿದ್ದಿಟ್ಟು! ಮಣಿರಮಣಿ ತಾರೆಯೊಲು ಮಿಣುಗು ದೀಪವನಿಟ್ಟು ಕ್ಷಣಗಳನ್ನು ವರಸತಿಯು ಎಣಿಸುತಲಿ ಕುಳಿತಿರಲು! * * * ಘನ ಘನೋಪಾಧಿಗಳ! ತನ ಬುದ್ಧಿಯಿಂ ಪಡೆದ ಘನಶ್ರೇಷ್ಠ ಪಂಡಿತನು ತನಿಗಬ್ಬ! ಓದುತಲಿ! ಮಣಿ ರಶಿಕಮಣಿಯವನು ತನುವ ತಾ ಮರೆತಿಹನು! ಮನವ ತಾ ಮರೆತಿಹನು! *****

#ಕವಿತೆ

ಕಿಡಿ

0
Latest posts by ಹೊಯಿಸಳ (see all)

ಕಿಡಿಯೊಂದನಡಗಿಸೆ ನುಡಿಬಲೆ ಹೂಡಿ ಗುಡುಗಾಡಿ ಜಗವೆಲ್ಲ ಸುತ್ತಿತು ಹಾಡು ಸಿಡಿಯುತ ನುಡಿಗಳು ಸುಳಿರಾಗವುಗುಳೆ ಒಡಲುರಿಯೆಂದಿತು ಧರಣಿಯು ಹೊರಳಿ ಚಿಗಿಯಿತಿದಾಶೆಯ ಕಿಚ್ಚಿದು ಕಿಚ್ಚು ಚಿಗಿಯಿತು ಕವಿಮನದಾಶೆಯ ಕಿಚ್ಚು ಇನ್ನೊಂದು ಕಿಡಿಯಿಟ್ಟೆ ರೇಖೆ ಬಣ್ಣದಲಿ ಮುನ್ನದ ಮೋಹಿಸಿ ಮಹಿಯು ಮೈ ಮರೆಯೆ ವನ್ಹಿ ರೂಪೋತ್ಕರ ಜ್ವಾಲೆಯು ಹರಿಯೆ ಎನ್ನೊಡಲಾಶೆಯು ದಹಿಸಿತು ಧರೆಯ ಚಿಗಿಯಿತಿದಾಶೆಯ ಕಿಚ್ಚಿದು ಕಿಚ್ಚು! ಸೊಗಸಿತು ಕಿಚ್ಚಿದು! […]

#ಕವಿತೆ

ಕನ್ನಡಿ

0
Latest posts by ಹೊಯಿಸಳ (see all)

ಕಳವಳವು ಕನಸಿಂದ ಬೆಳಗಾಗಿ ಬಲುಕಾಲ ಕಳೆದು ಹೋಯ್ತೆನುತಾಗ ತಿಳಿವಿನಾ ರಾಣಿತಾ ನಿಳಿದು ಮಂಚವ ಬೇಗ ತಿಳಿನೀರ ಮಿಂದೆದ್ದು ಬಿಳಿ ಮಡಿಯ ಶೆಳೆದುಡುತಲೆ ತರಣಿಗರ್ಘ್ಯವನಿತ್ತು ಅರಿವಿನಾರಾಣಿ ಜಪ ಸರವ ಪಿಡಿದಾಗ ಕುಳಿತಿರುತಲರ ಘಳಿಗೆಯುರು ತರದ ಶಾಂತಿಯ ಸವಿದು ತೆರೆದು ಕಂಗಳ ದೇವಿ ಸರಸತಿಯು ನಸು ನಗುತಲೆ ಪದುಮ ಪೀಠವನಿಳಿದು ಇದುಗೊ ಸಿಂಗರವಾಗಿ ಮುದದಿ ಮನದಿನಿಯನಡಿಗೆರಗಿ ಬರುವೆ ಹದಿನೆಂಟು […]

#ಕವಿತೆ

ಉಘೇ

0
Latest posts by ಹೊಯಿಸಳ (see all)

ಉಘೇ ಉಘೇ ಉಘೇ ಹಿಂದು ದೇಶ ಹಿಂದು ಹೃದಯ ಸಿಂಧು ಗೋದೆ ಗಂಗೆಯು ಅಂದಿಗಿಂದಿಗೆಲ್ಲ ಒಂದೆ ಹಿಂದು ಜನ ಸ್ವತಂತ್ರರು ಉಘೇ ಉಘೇ ಉಘೇ ಮುಳಿಗಿ ಸೂರ್ಯ ಬೆಳಗಿ ಸೂರ್ಯ ಮುಳುಗಿ ಪರರು ಮೇಗಡೆ ಕಳೆದು ನನ್ನ ನಿನ್ನ ಬಂಧ ತಿಳಿಯೊ ನಾವ್ ಸ್ವತಂತ್ರರು ಸಾಗಿ ವರ್ಷ ಮಾಗಿ ಪುಣ್ಯ ಸಾಗಿ ಬಂತು ಸುಗ್ಗಿಯು ತ್ಯಾಗದಲ್ಲಿ […]