ಜಾಲಗಿರಿ ಓಓಓ ಜಾಲಗಿರಿ

ಊರ ಗಡಿ! ಬಿಡಿ! ತೆಂಕದಾರಿ ಹಿಡಿಯಿರಿ! ಇರ್‍ಇ ಗಿರಿ!
ಅಡಿಯಲಿ! ಬರೆ ಪರಿಮಳ ಕರೆ! ಕರಿ ಗಿರಿ ಅರೆ
-ನಡುವಲಿ ಇರುತಿಹ ಹಿರಿಮರ ಜಾಲಗಿರಿ! ಓಓಓ-

ಓಓಓ! ಜಾಲಗಿರಿ! ವರುಷಕೊಮ್ಮೆ ಪುಷ್ಯದಲ್ಲಿ-
ಚಿಗುರ ಉಡಿಗೆ! ಹೂವು ಮುಡಿಗೆ! ಪಡೆದು ನಗುತಿಹೆ-
ಮಂಜರೀ! ಓಓಓ! ಮಂಜರೀ! ಜಾಲಗಿರೀ ಮಂಜರೀ!

ಕೊತ್ತಳ ಕೋಟೆ! ಬತೇರಿ ಬುರುಜು ತೊಡಿಸಿ ಗಿರಿಗೆ
ನಾಡ ಪೂಜೆ ಮಾಡಿ ನಿಂತ ಹಿರಿ ಅಜ್ಜ ಅಜ್ಜಿ ನೂತು
ನೇದ ಶ್ರೀ ಯ ನೆನಹ ಜೇನು ಹುಟ್ಟಿ ಯಿಟ್ಟ-ರೀತಿ ಸುಧೆ
-ಸುರಿಸಿ ಹರಿಸಿ ಧರೆಯ ದುಃಖ ತೇಲಿತೋಹೋ! ಜಾಲಗಿರಿ!ಓಓಓ-

ಜಾಲಗಿರಿ ಓಓಓ! ಮಂಜರಿ! ದೇವಗಿರೀ ಮಂಜರೀ-
ಜಾಲಗಿರೀ! ಹೂವಝರೀ! ಸಿರಿ ಮಧು ಮೇಳ ಝರೀ!
ರಜತಝರೀ! ಜೋತಿ ಝರೀ! ಮಧುಗಿರಿ ಭುಜದಲಿ-

ಪೂಧೂಳೊಳೊಡಿ ಚಂದ್ರ ಮಧು ಹೀರಿ ದಾರಿ ಮೀರಿ
ಗಂಧಮಧುಗಿರಿ ಶಿರ ಬಿಡದಿರುತಿಹ-ಹೊ ಹೊ ಹೋ!
ಊರಮಡಿಲು ಮುಡಿಯಲೆಲ್ಲ ಅಗೋ ಸಿರಿ ಜಾಲಗಿರಿ!
ಜಾಲಗಿರೀ! ಹೂವ ಝರೀ! ಸಿರಿ ಮಧು ಮೇಳ ಝರೀ!

ಓಓಓ! ಜಾಲಗಿರೀ! ಜಾಲಗಿರೀ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೩
Next post ನವಿಲುಗರಿ – ೧೬

ಸಣ್ಣ ಕತೆ