ಇಷ್ಟು ದೊಡ್ಡ ಮನೆ ಯಾರು ಸಂಭಾಳಿಸುವರು? ಇಷ್ಟು ಚಂದದ ತೋಟ ಯಾರು ನೋಡಿಕೊಳ್ಳುವವರು? ಒಡವೆ ವಸ್ತು ಸೀರೆ ಯಾರುಟ್ಟು ನಲಿವರು? ಆಶೆಯಿಂದ ಹೊಂದಿರುವ ಚಿಕ್ಕಪುಟ್ಟ ವಸ್ತುಗಳು ಅಕ್ಕರೆಯ ಗಂಡ ಮುದ್ದಾದ ಮಕ್ಕಳು ಸ್ನೇಹಿತರು-ಸಂಬಂಧಿಗಳು ಸುತ್ತಿಕೊಂಡಿವೆ...
ಚಿನ್ನುವನ್ನು ಆದಷ್ಟು ಬೇಗ ತಮ್ಮ ಘನತೆಗೆ ತಕ್ಕಂತವರಿಗೆ ಮದುವೆ ಮಾಡಿಕೊಟ್ಟು ಅವಳ ಪ್ರೇಮ ಪ್ರಲಾಪವು ಹಳ್ಳಿಗರ ಪಾಲಿಗೆ ರಸಗವಳವಾಗುವ ಮುನ್ನವೆ ಸಿಟಿಗೆ ಸಾಗುಹಾಕಬೇಕೆಂದು ಉಗ್ರಪ್ಪ ಒಳಗೆ ತಹತಹಿಸುತ್ತಲಿದ್ದ. ಮೈಲಾರಿ ನೆಂಟರಿಷ್ಟರ ಪಟ್ಟಿಮಾಡಿಕೊಂಡು ಚಿನ್ನು ಜಾತಕ...