ಹಸಿವನರಿಯದ ರೊಟ್ಟಿ
ರೊಟ್ಟಿಯರಿಯದ ಹಸಿವು
ಎರಡರದೂ ತಪ್ಪಲ್ಲ.
ಪರಸ್ಪರ ಪರಿಭಾವಿಸುವ
ಮೂಲ ಕ್ರಮವೇ ತಪ್ಪು.
ಅರಿವೂ ಹದಗೊಳ್ಳದಿದ್ದರೆ
ತಪ್ಪಿನಿಂದ ತಪ್ಪಿನ ಸರಮಾಲೆ.
*****