ಗುಡ್ಡ ಯೋಚಿಸಿತು – “ಬೆಟ್ಟದ ಒಂದೊಂದು ಕಲ್ಲು ಬಂಡೆ ಕದ್ದರೆ ನಾನು ದೊಡ್ಡ ಬೆಟ್ಟ ವೆನಿಸಿಕೊಳುವೆ” ಎಂದು ಕೊಳ್ಳುತ್ತಾ ರಾತ್ರಿ ಮಲಗಿತು. ಬೆಳಗಾಗೆ ಸೂರ್ಯ ಕಿರಣ ಮೈಗೆ ತಗುಲಿದಾಗ ಅದಕ್ಕೆ ಮತ್ತೊಂದು ಯೋಚನೆ ಬಂದಿತು. “ಕದಿಯುವುದು ಅಪರಾಧ, ಅಲ್ಲದೆ ಕಷ್ಟ ಸಾಧ್ಯ ಇವೆಲ್ಲಾ ಏಕೆ ಬೇಕು? ಸುಮ್ಮನೆ ಬೆಟ್ಟದ ಪಾದದ ಅಡಿ ಬಿದ್ದು ಬೆಟ್ಟ ದೊಡನೆ ಒಂದಾದರೆ ನಾನು ಹಿರಿಯ ಬೆಟ್ಟವೆನಿಸಿಕೊಳುವೆ” ಎಂದು ಕೊಂಡಿತು. “ನನ್ನ ತನ ತೊರೆದು ಸಮಷ್ಟಿಯಲ್ಲಿ ಒಂದಾದಾಗ ಅದೆಷ್ಟು ಸಂತಸ” ಎಂದು ಕೊಂಡಿತು.
*****