ಒಮ್ಮೆ ಸಂಸಾರದಲ್ಲಿ ಬೇಸತ್ತ ಗೃಹಸ್ಥ, ಒಬ್ಬ ಸಾಧು ಹತ್ತಿರ ಬಂದು ಕೇಳಿದ- “ದೈವ ನಮಗೇಕೆ ಕಾಣುವುದಿಲ್ಲ?” ಎಂದು. ಸಾಧು-ಹೇಳಿದ “ನಿನಗೆ ಆಕಾಶದಲ್ಲಿ ತೇಲುವ ಕರಿಮೋಡದಲ್ಲಿ ನೀರು ಕಾಣುತ್ತದಯೇ?” ಎಂದು. “ಇಲ್ಲಾ” ಎಂದ ಗೃಹಸ್ಥ, “ನಿನಗೆ ಅದು ಮಳೆಯಾಗಿ ಸುರಿಯುವಾಗಲಾದರು ಕಾಣುತ್ತದೆಯೇ?” ಎಂದ. “ಕಾಣುತ್ತದೆ” ಎಂದ. ಹಾಗೆಯೆ ದೈವ ಕಾಣದಂತೆ ಇದ್ದರು, ದೈವ ಕೃಪೆಯ ಅರಿವು ನಮಗಾಗುವುದಿಲ್ಲವೇ? ಎಂದ ಸಾಧು. “ಕಣ್ಣಿನಿಂದ ದೈವ ಕಾಣದಿದ್ದರು, ದೈವ ಕೃಪೆಯಲ್ಲಿ ದೈವ ಕಂಡಿದ್ದೇನೆ” ಎಂದ ಗೃಹಸ್ಥ ತೃಪ್ತಿಯಿಂದ.
*****