ಸಾಕಾಗದೆ ಇನ್ನ್ಯಾಕ ಐಸುರಭೋ ||ಪ||

ನಾಲ್ಕು ಲೋಕಪತಿ ಮರ್ತ್ಯಜ ಸುತರಿಗೆ
ಬೇಕಿಲ್ಲದೆ ವಾಕರಿಸಿತು ಮೊಹರಮ್ ||೧||

ಹಿಂದು ಮುಸಲ್ಮಾನ ಹದಿನೆಂಟು ಜಾತಿಗೆ
ಕುಂದನಿಡಿಸಿ ಕುಣಿದಾಡುವ ಮೊಹರಮ್ || ೨ ||

ರೂಢಿಪ ಶಿಶುನಾಳಧೀಶಗ ಸಲ್ಲದ
ಖೋಡಿ ರಿವಾಯಿತ ಹಾಡುವ ಮೊಹರಮ್ ||೩ ||
*****