ಈ ಮಾತು ಕೇಳರಿ ಐಸುರ
ಮೊಹರಮ್ ರಿವಾಯತೋ || ಪ ||

ರಾಚಾಧಿರಾಜ ಸಮರ ಭೂಮಿ
ಕಂದಿ ಕುಂದಿತೋ || ೧ ||

ಮದೀನ ಮಕ್ಕಾ ಶಾರದಿ
ಮಹಾ ಕೌತುಕಾದೀತೋ
ಆ ದಿನದ ಕತ್ತಲ ಕಾಳಗ
ಕರ್ಬಲ ಶಹಾದತೋ || ೨ ||

ಕಿಲ್ಲೆಸುತ್ತವಾದಲಾವಿ
ಡೋಲಿ ಮೇಲಕೆದ್ದಿತೋ
ಭೂತಳದಿ ಭಾನುಕಿರಣಕೆ
ಧೂಮಕೇತು ಮೂಡಿತೋ || ೩ ||

ಕಸವಿಸಿಗೆ ಸೂರ್ಯಮಂಡಲ
ಹಸರಂಗಿ ತೊಟ್ಟಿತೋ
ಹೆಸರಾದ ಏಸುಕ್ರಿಸ್ತರಿಗೆ
ಪಟ್ಟಗಟ್ಟಿತೋ || ೪ ||

ಭೂನಾಥ ಶಿಶುವಿನಾಳಧೀಶಗೆ
ತಾನೇ ತೋರಿತೋ
ಶುಭನಾಮ ಸಂವತ್ಸರಾ
ಸೂಚನೆಗೆ ಸಾರಿತೋ || ೫ ||

*****