ನಾವು ಮುದ್ರಣ ಯಂತ್ರಗಳಲ್ಲಿ ಹೊಸ ಆವಿಷ್ಕಾರಗಳನ್ನು ಕಾಣುತ್ತೇವೆ. ವಿದ್ಯುತ್‌ಯಂತ್ರದಿಂದ ಕಂಪ್ಯೂಟರ್ ಪ್ರಿಂಟರ್‌ವರೆಗೆ ಹೀಗೆ ಹೊಸ ಮೂನೆಗಳನ್ನು ಕಂಡಿದ್ದೇವೆ. ಹೊಸ ಸಂಶೋಧನೆಗಳಿಗೆ ಹೆಸರಾದ ಜಪಾನ್ ದೇಶದ ಸಿಟಿಜನ್ ವಾಚ್ ಕಂಪನಿಯು ಅತ್ಯಂತ ಸಣ್ಣಮು...

ಕ್ಯಾತೆ ತೆಗೆದಿತ್ತು ಜೀವನ ಸಾವ ಜೊತೆಗೆ ಶ್ರೇಷ್ಠರಾರು ? ಪ್ರಶ್ನೆಯೆತ್ತಿಕೊಂಡು ತುಸು ಗಂಭೀರವಾಗಿಯೇ ! ಜೀವನ, ನಾನು ಮೊದಲು ! ಜೀವ-ಜೀವಕ್ಕೆ, ಜಡ-ಜಡಕ್ಕೆ, ಕಾಲ-ಕಾಲಕ್ಕೆ ಭಿನ್ನ! ಭಿನ್ನ! ರಂಗು! ರಂಗು! ಬೆಳಕು; ಸಂತಸ. ಕರುಣಿಸುವೆನು ಅಂಗಳದಿ ಸ...

ಚೆಲುವಿನ ನಾಡು ಕರುನಾಡು-ಹೊಯ್ ಅದರೊಳಗೊಂದು ಒಳನಾಡು ಅದನು ಕರೆವರು ತುಳುನಾಡು-ಅದ ಕಣ್ಣನು ತುಂಬಿಸಿ ಪದ ಹಾಡು /ಪ// ಪಶ್ಚಿಮ ಸಾಗರ ತೀರದಲಿ-ತುಸು ಪಕ್ಕದ ಬೆಟ್ಟದ ಸಾಲಿನಲಿ ಹಸಿರನು ಹಾಸಿದ ತಾಣದಲಿ-ಗಿಳಿ ಕಾಜಾಣಗಳು ಹಾಡುವಲಿ ನಿಂತ ನಾಡದು ತುಳುನಾ...

ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ ಮಾಡಿಕೊಂಡು ಹೊಡೆಯಲು ಹೋಗುತ್ತಿದ್ದಳು. ಅವನ...

ಅಯ್ಯೋ…. ಮುಟ್ಟುವ ತನಕ ಗೊತ್ತೇ ಆಗಲಿಲ್ಲ. ನನ್ನಂತೆಯೇ ಅವನೂ ಮನುಷ್ಯನೆಂದು! ಅಪ್ಪಿಕೊಂಡ ಮೇಲೆ ಅರಿವಾಯಿತು ನಾನೂ ಅವನೂ ಒಂದೇ ಎಂದು! ಕೇಡಿಗೆ ವಶವಾಗಿ ಹಲ್ಲುಗಳ ಮಸೆದಿದ್ದೆವು ಹುಡಿಯಾಗುವ ತನಕ ಕಲ್ಲುಗಳನೆತ್ತೆತ್ತಿ ಒಗೆದಿದ್ದೆವು ಪುಡಿಯಾ...

ಆ ದಿನದಿಂದ ಸುಮಾರು ಒಂದೂವರೆ ತಿಂಗಳು ಯಾವ ವಿಶೇಷ ಘಟನೆಯೂ ನಡೆಯದೇ ಉರುಳಿಹೋಯಿತು ಕಾಲ. ಬಂಡೇರಹಳ್ಳಿಯ ಆಸ್ಪತ್ರೆ ಸರಿಯಾದ ಸಮಯಕ್ಕೆ ತೆಗೆಯುತ್ತಿತ್ತು. ಅಲ್ಲಿಗೆ ಬಂದ ಹೊಸ ಡಾಕ್ಟರ್ ಯಾವ ಲಂಚದ ಆಮಿಷವೂ ಇಲ್ಲದೇ ಅಲ್ಲಿಯವರ ಚಿಕಿತ್ಸೆ ಮಾಡುತ್ತಿದ್...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...