ಬೇವು ಬೆಲ್ಲದ ಮಾವು ಚಿಗುರಿನ ಹೊಸ ವರುಷ ಹೊನಲು || ಹೊಸ ಹೊಸ ತನುವು ದಿಕ್ಕು ದಿಕ್ಕಿನ ನೆಲೆಯಲಿ ಋತು ಮಿಲನದ ಹಾಡು || ಚೈತ್ರದ ಚಿಗುರಿನ ಜೊನ್ನ ಜೇನಿನ ದುಂಬಿ ಉಲಿದ ಹಾಡು || ದಣಿದಿಹ ಮನಕೆ ಚೈತನ್ಯ ತುಂಬಿದ ಅಗಣಿತ ಮಧುರ ಹಾಡು || ಯುಗ ಯುಗಾದಿಯ...

ಅರೆ ನಿದ್ದ ಅರೆ ಅರಿವು, ಮಂಪರು ದಾರಿ ಹಿಡಿದು ತೆವಳಿ ಹೋದರೆ ಕೆಳಗೆ ಬೆದರಿಸುವ ಪಾತಾಳ; ತರ್ಕದ ಸೊಕ್ಕು ಮುರಿದು ಗಣಿತವನೆ ಮಣಿಸಿರುವ ಜನ ತಿಕ್ಕಲು ಕುಣಿತ; ಏನೇನೊ ನೋಡಿ ಏನೇನೊ ಹಾಡುವ ಕನಸ ಕೈಗಾರಿಕಾಶಾಲೆ; ಕಂಡದ್ದ ಕಲೆಸಿ ಕಾಣದ್ದ ಕಣ್ಣಿಗೆ ತೆರ...

ಅಣ್ಣ ಬಾರೊ ಬಸವಣ್ಣ ಬಾರೊ ಈ ಜನರ ಕಣ್ಣ ತೆರೆಯೋ ಬಣ್ಣ ಬಾಳು ಬರಿ ಹಾಳು ಹಾಳು ಈ ಕಣ್ಣ ಪೊರೆಯ ಹರಿಯೋ || ೧ || ಕೊಳೆತು ನಿಂತು ನೀರಾದ ಭೇದ ನೂರಾರು ತಳೆದ ಜನರ ಕೆರಳಿ ಗದ್ದರಿಸಿ ತಿಳಿಸಿ ಉದ್ಧರಿಸಿ ಕಾಯ್ದೆ ಅಂದು ಅವರ || ೨ || ಬ್ರಾಹ್ಮಣಾಗಿ ನೀ ...

ಯನ್ನ ತಲೆಯನ್ನ ಸೋರೆ ಮಾಡಿ ಯನ್ನ ನರಗಳ ತಂತಿಮಾಡಿ ನಿನ್ನ ಸ್ವರವನ್ನ ಯನ್ನಿಂದ ಧ್ವನಿಸಿ ಗೊಂಬೆಯಾಟವಯ್ಯಾ ಎಂದು ಕುಣಿಸಿ ಮಣಿಸಿ ದಣಿಸಿ ದಾಸರ ದಾಸ ಚಪ್ರಾಸಿ ಮಾಡ್ಕೊ ತಲೆಮೇಲೆ ಕೂತ್ಕೊ ಯನ್ನ ನೆತ್ತರು ಕುದಿಸಿ ದಾಮರು ಮಾಡ್ಕೊ ರೋಡಿಗೆ ಹಾಕ್ಕೊ ಓಡ್...

ಸಂಪದ್ಭರಿತವಾದ ಪಾಂಡ್ಯ ದೇಶದ ಶ್ರೀವಿಲ್ಲಿ ಪುತ್ತೂರಿನಲ್ಲಿ ಶ್ರೀಮಹಾವಿಷ್ಣುವು ವಟಪತ್ರಶಾಯಿ ಎಂಬ ಹೆಸರಿನಿಂದ ನೆಲೆಸಿ ಭಕ್ತಾದಿಗಳಿಗೆ ದರ್ಶನವೀಯುತ್ತಿದ್ದನು. ಆ ಊರಿನ ಭಕ್ತರಲ್ಲಿ ಮುಖ್ಯರಾದವರು ಶ್ರೀವಿಷ್ಣುಚಿತ್ತರು. ಇವರು ವಯೋವೃದ್ಧರೂ, ಜ್ಞಾ...

ಸರ್‍ದಾರ ಟ್ಯಾಕ್ಸಿ ಡ್ರೈವರ್‍ಗೆ ಕೇಳಿದ – ಸಿದ್ದಿವಿನಾಯಕ ದೇವಸ್ತಾನಕ್ಕೆ ಹೋಗ್ತೀರಾ? ಟ್ಯಾಕ್ಸಿ ಡ್ರೈವರ್‍ : ಹೋಗ್ತಿನಿ ಸಾರ್ ಸರ್‍ದಾರ : ಓಕೆ. ಹಾಗೇ ಬರುವಾಗ ನನಗೆ ಪ್ರಸಾದ ತನ್ನಿ *****...

ಇನ್ನು ಸಾಕು ನಿಲ್ಲು ಹೋಗು ಕಲಹ ಕಲಿಯ ಕಾಲನೆ ಇನ್ನು ತಡೆದ ರಾಣೆ ಹರನೆ ಬರಲಿ ರಾಮ ದೇವನ ||೧|| ಕಥೆಯ ಮೇಲೆ ಕಥೆಯು ಹತ್ತಿ ವ್ಯಥೆಯ ಬಣವೆ ಉರಿದಿದೆ ಉರಿಯ ಮೇಲೆ ಉರಿಯು ಹತ್ತಿ ಕಡೆಯ ತೇರು ಸರಿದಿದೆ ||೨|| ಸಕ್ರಿಗಿಂತ ರುಚಿಯು ರಕ್ತ ರಕ್ತದಾಹ ಕೂಗ...

“ನನ್ನ ತಲೆಯ ಮೇಲೆ ಕೈ ಇಟ್ಟು ಹೇಳಿ, ನಿಮಗೆ ಅವಳಿಗೆ ಏನು ಸಂಬಂಧ?” ಎಂದಳು ಹೆಂಡತಿ. “ಅವಳು ನನ್ನ ತಂಗಿಯ ಹಾಗೆ” ಎಂದರೆ ನೀನು ನಂಬುವುದಿಲ್ಲ. “ಅವಳು ನನ್ನ ಸ್ನೇಹಿತೆಯ ಹಾಗೆ” ಎಂದರೆ ನೀನು ಯಾಕೆ ಹಾಗೆ...

ಹುಟ್ಟಿದ್ದು ಉರಿಬಿಸಿಲ ಒಡಲಲ್ಲಿ ಬೆಳೆದದ್ದು ಬೆಳದಿಂಗಳ ಕನಸಿನಲ್ಲಿ ಬದುಕಿದ್ದು ನಿರೀಕ್ಷೆಗಳ ನೆರಳಲ್ಲಿ; ನಮಗೆ ಭೋಗವೃಕ್ಷವೂ ಬೇಡ ಬೋಧಿವೃಕ್ಷವೂ ಬೇಡ; ಬಾಳ ಉರಿಯಲ್ಲಿ, ಸಂಕಟದ ಸಿರಿಯಲ್ಲಿ ಜೊತೆಯಾಗಿ ಉಂಡಿದ್ದೇವೆ ಜೊತೆಯಾಗಿ ಕಂಡಿದ್ದೇವೆ ಮಕ್ಕಳ...

ಗೆಲುವಾಗಲಿ ನಮ್ಮ ಕನ್ನಡದ ತಾಯ್ನುಡಿಗೆ| ಗೆಲುವಾಗಲಿ ನಮ್ಮ ಕನ್ನಡದ ತಾಯ್ನಾಡಿಗೆ|| ಗೆಲುವಾಗಲಿ ನಮ್ಮ ಶಾಂತಿಯ ತವರೂರಿಗೆ| ಗೆಲುವಾಗಲಿ ನಮ್ಮ ಚೆಲುವ ಕನ್ನಡ ನಾಡಿಗೆ| ಗೆಲುವಾಗಲಿ ಹಿಂದುದೇಶವನು ಪ್ರತಿಬಿಂಬಿಸಿದ ಈ ಕರುನಾಡಿಗೆ| ಗೆಲುವಾಗಲಿ ಸ್ನೇಹ...

1...1415161718...111

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...