ಆಲದ ಮರದಂತೆ ಕ್ರಿಯಾಶೀಲ ಬಾಹುಗಳ ಆಕಾಶದೆತ್ತರಕೆ ಭೂಮಿಯುದ್ದಗಲಕೆ ಬೀಸಿದ ಸಿದ್ಧಪ್ಪ ಹೊಲ, ಮನೆ ಸಂಪಾದಿಸಿ ಒಪ್ಪವಾಗಿ ಸಂಸಾರ ನಡೆಸಿ ಹೆಂಡತಿ ಮಕ್ಕಳನ್ನು ತುಪ್ಪದಲಿ ಕೈಯ ತೊಳೆಸಿದನು. ಅಪ್ಪಿಕೊಳ್ಳುವ ಭಾವದಲಿ ನಿಲುವಿನಲಿ ಊರಲಿ, ನೆರೆಯಲಿ, ಬಂಧು ...

‘ಅಗದೀ ಹರಕತ್ತ ಐತಿ, ನಿಮ್ಮಣ್ಣಗ ಕೇಳಿ ಒಂದೈದು ಸಾವಿರ ಇಸ್ಕೊಂಬಾ’ – ಎಂದು ನನ್ನ ಗಂಡ ತವರಿಗೆ ಕಳಿಸಾಕ ಮೊದಲ ವರಾತ ಹಚ್ಚಿದ್ದರು. ಮತ್ತ ಮತ್ತ ಒತ್ತಾಯಿಸೋ ಗಂಡನ ಹಿಂಥಾ ಮಾತು ಬಿಸೇ ತುಪ್ಪ ಆಗಿತ್ತು. ಅವರ ಹರಕತ್ತು ಏನೂಂತ ನಂಗ ಗೊತ್ತಿಲ್...

ಮುಂದೆ ಸಾಗುವ ಮುನ್ನ ಹಿಂದೆ ನೋಡಬಾರದೆ ಒಮ್ಮೆ ನದಿಯಲ್ಲವೇ ನಾನು ತುದಿಯಲ್ಲಿರುವೆ ನೀನು ನಿಲ್ಲು ನಿಲ್ಲು ನೀ ನನ್ನ ಮಗಳೆ… ಹಿಟ್ಟು-ರೊಟ್ಟಿಯ ಸುಡುತ ಹರಕೆ-ಮುಡಿಪುಗಳನಿಡುತ ತಿಳಿದ ಹಾಡುಗಳ ಹಾಡಿ ನೂರು ದೇವರ ಕಾಡಿ ನಿನ್ನ ಪಡೆದೆ ಉಟ್ಟ ಸೀರ...

ಸೂರ್ಯ ಕೆಳಗಿಳಿದು ಕತ್ತಲಾವರಿಸಲಾರಂಭಿಸಿತ್ತು. ಆ ಬೆಳಕು ಕತ್ತಲುಗಳ ಆಟ ಕಾಡಿಗೆ ತನ್ನದೇ ಆದ ಪ್ರಕೃತಿ ಸೌಂದರ್ಯವನ್ನು ಒದಗಿಸಿದ್ದವು. ಪಕ್ಷಿಗಳು ತಮ್ಮ ತಮ್ಮ ಗೂಡಿಗೆ ಸೇರುವ ಸದ್ದೇ ಮೌನವನ್ನು ಕದಡಲು ಯತ್ನಿಸುತ್ತಿತ್ತು. ಆ ಸದ್ದನ್ನು ಹತ್ತಿಕ್ಕ...

ಬಾಗಿದರೆ ಬಾಳೆ ಗೊನೆಯಂತೆ ಬಾಗಿ ಬಾಳಬೇಕು ನಿಗಿದು ನಿಂತರೆ ತೆಂಗಿನಂತೆ ಎತ್ತರದಿ ಆಕಾಶ ಮುಟ್ಟ ಬೇಕು ತೂಗಿದರೆ ಹೂ ಗೊಂಚಲಂತೆ ಗಾಳಿಯಲಿ ಗಂಧ ತೂರಬೇಕು. *****...

ಕನ್ನಡ ಸಾಹಿತ್ಯ ಪರಿಷತ್ತು ವ್ಯವಸ್ಥೆಗೊಳಿಸುವ ‘ಕನ್ನಡ ಸಾಹಿತ್ಯ ಸಮ್ಮೇಳನ’ಗಳ ಬಗ್ಗೆ ಒಂದಲ್ಲ ಒಂದು ವಿವಾದವೇಳುವುದು ಇತ್ತೀಚೆಗೆ ಸಹಜ ಕ್ರಿಯೆಯೆಂಬಂತಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಬಿಂಬಿಸಿರುವು...

ಕರುನಾಡು ಸ್ವರ್ಗವೇನೆ ಕನ್ನಡವು ಜೇನು ತಾನೆ ಇಂಥ ಮಣ್ಣಲ್ಲಿ ಪಡೆದ ಕಣ್ಣಲ್ಲಿ ಏನಿಲ್ಲ ಹೇಳು ನೀನೆ! ನೂರಾರು ಕವಿಗಳಿಲ್ಲಿ ಸಾವಿರದ ಪದಗಳಲ್ಲಿ ಬೆಳೆದ ಹಸಿರಲಿ ಪಡೆದ ಉಸಿರಲಿ ಚಿರವಾಯ್ತು ಕಲ್ಪವಲ್ಲಿ; ಕರಿಮಣ್ಣ ಒಡಲಿನಲ್ಲಿ ನೂರಾರು ರಾಗ ಇಲ್ಲಿ ದಣಿ...

ದೀಪದಿಂದ ದೀಪ ಹಚ್ಚು ಬೆಳಗಲಿ ಬಾಳದೀವಿಗೆ ಕಳೆದು ತಿಮಿರ ಬೆಳಕು ಬರಲಿ ನಿತ್ಯ ನಮ್ಮ ಬಾಳಿಗೆ || ದೈವನಿತ್ತ ಪ್ರಕೃತಿ ನಮಗೆ ಅದುವೆ ನಮಗೆ ತಾಯಿಯು ಜೀವವುಳಿಸಿ ಬಾಳು ಕೊಡುವ ಅದಕೆ ನಮಿಸು ನಿತ್ಯವು || ಸೂರ್ಯ ಚಂದ್ರ ತಾರಾಗಣವು ನೋಡಲೆಷ್ಟು ಸುಂದರ ಬ...

1...1112131415...111

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...