ನಾವು ಇದನ್ನೂ ಹೇಳಬೇಕೆಂದು ನಿಜ ಒತ್ತಾಯ ಮಾಡುತ್ತದೆ : ‘ಬದುಕು ಸಾಗುತ್ತದೆ.’ ಕ್ಯಾನೆ, ಬೊರೊಡಿನೋಗಳಲ್ಲಿ ಕೊಸೊವೊ ಪೊಲ್ಯೆ, ಗುರೆನಿಕಾಗಳಲ್ಲಿ ಬದುಕು ಸಾಗುತ್ತದೆ. ಜೆರಿಕೋದ ಪುಟ್ಟ ಸರ್ಕಲ್ಲಿನಲ್ಲಿ ಒಂದು ಪೆಟ್ರೋಲ್ ಬಂಕಿದೆ, ಬಿಲಾಹೊರಾದ ಪಾರ್ಕ...

ಇದೊ! ಹಾ! ಬಾಂದಳದೊಳ್‌ ವಿರಾಜಿಸುದುದೈ ಚಂದ್ರೋದಯಂ. ಮೋಡಮಿ- ಲ್ಲದ ಬಾಂಬಟ್ಟೆಯೊಳೊಯ್ಯನೊಯ್ಯನೆ ಶಶಾಂಕಂ ಪಚ್ಚೆ ವೋದಂ, ಮುಳುಂ ಗಿದುದೆಲ್ಲ ಕದಿರೊಳ್‌ ನೆಲಂ; ತೊರೆದುದೈ ನಿಮ್ನೋನ್ನತಾವಸ್ಥೆಯಂ, ಸುದೆಯಿಂಮಿಂದವೊಲೀಗಳೀ ಪ್ರಕೃತಿ ಮೌನಂಗೊಂಡು ಸಂಶೋಭ...

ಮೊನ್ನೆತನಕ ಎಲ್ಲ ಚೆನ್ನಾಗಿತ್ತು ಗೆಳೆಯ ಸರಳ ಸಮರ್‍ಪಕ ಸೂತ್ರಬದ್ಧ ಇದ್ದಕ್ಕಿದ್ದಂತೆ ದನಿಯೊಡೆದೆ ಈಗ ಕನ್ನೆಮಾಡದ ಕನಸಮುಗ್ಧ ಹಸಿರು ಹಾವು ಅಸಂಖ್ಯ ಉಸಿರುಗಟ್ಟಿಸುವಂತೆ ಹರಿದುಬಂದವು ಹತ್ತುದಿಕ್ಕಿನಿಂದ ಕುಡಿದು ಮಲಗಿದ್ದವನ ಕಡಿದು ಹೋದವು ಸತ್ತು ...

ಹುಡುಕ್ಕೊಂಡ್ ಹೋಯ್ತೋ ಹಕ್ಕಿ ಹುಡುಕ್ಕೊಂಡ್ ಹೋಯ್ತೋ ಹಕ್ಕಿ ಹಾರಾಡ್ಕೊಂಡ್ ಹೋಯ್ತೋ || ಆ ಮರ ಈ ಮರ ನೆಲ ಮರ ಶಾಶ್ವತವಲ್ಲದ ಮರ ರೆಂಬೆಕೊಂಬೆಗಳ ಗೂಡುಗಳ ತೂರಿ ಹಾರ್‌ಕೊಂಡ್ ಹೋಯ್ತೊ || ಯಾವ ಜೀವ ಜೀವಿಗಳ ದಾಹದಲ್ಲಿ ಮಾಡಿದ ಕರ್‍ಮ ಅಂಗಸಂಗಗಳ ಬೆಸೆದ...

ಈಚೆಗೆ ನಾನು, ನನ್ನ ಹೆಂಡತಿ, ಮತ್ತು ಕೊನೆಯ ಮಗಳು ಬೆಂಗಳೂರಿಂದ ಹೈದರಾಬಾದಿಗೆ ಟ್ರೇನಿನಲ್ಲಿ ಬಂದಿಳಿದೆವು. ಟ್ರೇನ ಕಾಚಿಗುಡ ನಿಲ್ದಾಣದಲ್ಲಿ ನಿಂತಿತು. ಇದೇ ಕೊನೆಯ ನಿಲ್ದಾಣ. ನಸುಕಿನ ಸಮಯ. ಗಾಡಿ ಸ್ವಲ್ಪ ಬೇಗನೇ ಬಂದುಬಿಟ್ಟಿತ್ತು. ಅಲ್ಲಿಂದ ನಾ...

ಅದೊಂದು ಯುದ್ದ ರಂಗ, ಸೇನನಾಯಕ ಶತ್ರುಗಳ ಮೇಲೆ ಹೋರಾಡಿ ವಿಜಯಗಳಿಸಿದ. ಸಾವಿರಾರು ಜೀವಗಳು ಹೆಣವಾಗಿ ಉರುಳಿದವು, ರಕ್ತ ಕೋಡಿಯಾಗಿ ಹರೆಯಿತು. ರಾಜ್ಯ ಕೋಶವು ಇವನದಾಯಿತು. ಆದರೆ ಇವು ಇವನ ಹಸಿವನ್ನು ತಣಿಸಲಿಲ್ಲ. ದಾಹವನ್ನು ದಹಿಸಲಿಲ್ಲ. ಮರದಲ್ಲಿ ಬ...

ಹಸಿವಿನ ಸಂತೆಯಲಿ ಬಿಕರಿಗೆ ಬಿದ್ದಿದೆ ರೊಟ್ಟಿ ವಿಧವಿಧದ ರೊಟ್ಟಿಗೆ ವಿಭಿನ್ನ ಬೆಲೆ. ಕೊಳ್ಳುವುದು ಅವರವರ ಅರ್ಹತೆ. ರೊಟ್ಟಿ ಬೆಲೆಯುಳ್ಳ ನಿರ್ಜೀವ ಸಾಮಗ್ರಿ *****...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...