ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ ಎಲ್ಲಿರುವೆ ಹೇಳು ನೀ ನಿಜವೆ ನೆರಳೇ? ಮಂಜು ನೇಯುವ ಸಂಜೆಗನಸಿನಂತೆ ಸಂಜೆ ಬಿಸಿಲಿನ ಮಳೆಯ ಮನಸಿನಂತೆ ನಿಂತ ಎದೆಗೊಳದಲ್ಲಿ ಚಿಂತೆ ಬರೆಯಲು ಯಾರೊ ಎಸೆದ ಕೋಗಿಲೆಯ ದನಿಹರಳಿನಂತೆ- ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ...

ಕಪಿಲಳ್ಳಿಯಲ್ಲಿ ಎಲ್ಲರೂ ಅವರನ್ನು ಕರೆಯುವುದು ಶಿಕಾರಿ ಭಟ್ಟರೆಂದು. ಅವರ ನಿಜ ಹೆಸರು ಅವರಿಗೇ ನೆನಪಿದೆಯೋ ಇಲ್ಲವೊ? ಸುಮಾರು ಐದೂ ಕಾಲಡಿ ಎತ್ತರದ ಸಣಕಲು ಆಳು. ಯಾವಾಗಲೂ ಬಾಯಿಯಲ್ಲಿ ತಾಂಬೂಲ. ಮಾತು ಮಾತಿಗೆ ಶ್ಲೋಕಗಳನ್ನು ಉದುರಿಸುತ್ತಾ, ಸಂದರ್ಭ...

ಕೋಟಾಕಿದಂತೆ ಕೂತಿದ್ದರು ಟೆರ್ರಾ ಕೋಟಾ ಬುದ್ಧರು ಒಂದು ಎರಡು ಮೂರು ನಾಲಕು ಐದು ಆರು ಏಳು ಎಂಟು ಒಂಭತ್ತು ಹತ್ತು ಮತ್ತು ಇನ್ನೂ ಇರಬೇಕು ಮೂವತ್ತು ಎಷ್ಟೇ ಲೆಕ್ಕವ ಮಾಡಿದರೂ ಲೆಕ್ಕಕೆ ಸಿಗದೆ ಅವರಿದ್ದರು ಒಬ್ಬರೊಬ್ಬರ ಮೋರೆಯ ನೋಡಿ ಸದ್ದಿಲ್ಲದೆ ನಗ...

ಬಂಧನವು ಬಿಗಿದಿರಲಿ ಮಂದಿ ಹುಯ್ಲೆಬ್ಬಿಸಲಿ ರಾಮ ರಾವಣ ಯುದ್ಧ ನಡೆಯುತಿರಲಿ ಮರ್ಮಗಳು ಅಡಗಿರಲಿ ಕರ್ಮಗಳ ಕಾದಿರಲಿ ಬ್ರಹ್ಮನಿಯಮದ ಸೂತ್ರವಾಡುತಿರಲಿ ಅಕ್ಕರೆಯ ಕರೆ ಬರಲಿ ಉಕ್ಕಿರಲಿ ಆನಂದ ದಿಕ್ಕುದಿಕ್ಕಿಗು ಡಮರು ಮೊಳಗುತಿರಲಿ ಬಾಸಿಗವು ಕಟ್ಟಿರಲಿ ಬ...

ಜೇನು ನಾವು ನೋವು ನಾವು ಕೈಗೆ ಸಿಕ್ಕರೆ ಒಸಗಿ ಹಾಕುವಿರೆಂಬಾ ಶಂಕೆ! ಊದಿದಾ ಶಂಕು ಊದೂತ್ತಾ ಗಿಳಿ ಪಾಠ ಒಪ್ಪಿಸುತ್ತಾ ನಿತ್ಯ ಜಿಗಿ, ಜಿಗಿದು, ಕುಣಿ, ಕುಣಿದು, ಹಾರುತ್ತಾ ಏಳು ಕೆರೆ, ನೀರು ಕುಡಿದು ಹೂವಿಂದಾ ಹೂವಿಗೇ ಹಾರಿ, ನಿಮ್ಮ ಕಾಲ ಬಳಿ ಸಾರಿ...

ನಿನಗೆ ಸೂರ್ಯನಷ್ಟೆ ಮರ್ಯಾದೆ ಬೇಕೂ ಅಂದ್ರೆ ಹದಿನೈದು ದಿವಸ ಹಾಗೇ ಹದಿನೈದು ದಿವಸ ಹೀಗೆ ಹುಣ್ಣಿಮೆಗೊಂದು ದಿನ ಹಸನ್ಮುಖ ಅಮಾವಾಸ್ಯೆಗೆ ಮಂಗಮಾಯ ಇದೆಲ್ಲಾ ಚಾಳೀ ಮೊದಲು ಬಿಟ್ಟುಬಿಡಬೇಕೂ ಚಂದ್ರ. *****...

ಅದು ಅಳುತ್ತಲೇ ಇದೆ ಅಳುವೇ ಹುಟ್ಟಿ ಅಳು ಹೊಳೆಯಾಗಿ ಹರಿದಿದೆ, ಅದು ನಕ್ಕರೂ ಅತ್ತಂತೆಯೇ ಇರುತ್ತದೆ ಅದರ ಅಳುವು ನೋಡಿದವರಿಗೆ ಅಳು ಬರುವುದಿಲ್ಲ. ಮನೆ ತುಂಬ ಮಂದಿ, ಉಂಡುಡಲು ಬೇಕಾದಷ್ಟು ತುಂಬಿದ್ದರೂ ಅದು ಅಳುತ್ತಲೇ ಇದೆ, ಕೈಕಾಲು ಬಡಿದು, ಬಿದ್ದ...

1...4546474849...73

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...