ಗುಡಿ ಬೇಡ, ದೈವ ಬೇಡ ಅಪ್ಪ ಅಮ್ಮ ದೇವರು! ಮಡಿಬೇಡ, ಪೂಜೆ ಬೇಡ ದುಡಿಮೆ ನಮ್ಮ ಪೂಜೆ. ೧ ಆಸ್ತಿ ಬೇಡ, ಆಸೆ ಬೇಡ ದೇಶ ನಮ್ಮ ಆಸ್ತಿ. ದ್ವೇಷ ಬೇಡ, ಕೋಪ ಬೇಡ ಶಾಂತಿ ನಮ್ಮ ಮಂತ್ರ. ೨ ಸತ್ಯ ಶಾಂತಿ, ತ್ಯಾಗ ಮೂರ್ತಿ ಗಾಂಧಿ ನಮ್ಮ ತಾತ. ಬುದ್ಧ, ಬಸವ, ಸ...

ಅವಳ ಮೈಗೆ ಮಣ್ಣ ಬಣ್ಣ, ಮನಕ್ಕೂ ಮಣ್ಣ ಸತ್ವ, ಅವಳು, ಆಗಾಗ ಹರಿಸುತ್ತಾಳೆ ನಲ್ಮೆಯ ನಗುವನ್ನು, ಮೈತುಂಬಿಕೊಂಡ ತೊರೆಯನ್ನು. ಕೆಲವು ದಿನ ಎಲುಬು ಮೈಯಲ್ಲಿ ನರನರ ಬರಲಾದ ಮರದಂತಿರುತ್ತಾಳೆ, ‘ಎಷ್ಟು ಸೊರಗಿರುವಿಯಲ್ಲೇ ತಾಯಿ’ ಎಂದರೆ ಅಯ್ಯೋ ಬಿಡಪ್ಪಾ ...

ರುಚಿಗೂ, ಮೂಗಿಗೂ ಸಂಬಂಧವಿದೆಯೆಂಬುದು ಎಂದೋ ವಿಜ್ಞಾನಿಗಳು ಕಂಡ ಮಾತಾಗಿದೆ.  ಅಲ್ಲದೆ, ಕಿವಿಗೂ ರುಚಿಗೂ ಸಂಬಂಧವುಂಟೆಂದು ಡನ್ಮಾರ್ಕಿನ ವಿಜ್ಞಾನಿ ಡಾ|| ಕ್ರಿಶ್ಚನ್ ಹೋಲ್ಟ್ ಹ್ಯಾನ್‌ಸನ್ನರು ಎಂದೋ ಪ್ರತಿಪಾದಿಸಿದ್ದಾರೆ.  ವಿಶಿಷ್ಠ ನಾದಗಳು ಕಿವಿ...

ಹರಕುಬಟ್ಟೆ ತಲೆತುಂಬ ಹೇನುಗಳು ಮಕ್ಕಳಿಗೆ ಅಪ್ಪ ಯಾರೋ ಗೊತ್ತಿದ್ದರೂ ಗೊತ್ತಿಲ್ಲದಿದ್ದರೂ ಅವುಗಳ ಹೊಟ್ಟೆಗೆ ಗಂಜಿಹಾಕಲು ದೈನ್ಯವಾಗಿ ಬೇಡಿಕೊಳ್ಳುವ ಭಿಕ್ಷುಕಿಯರಿಗೋ! ಭಕ್ತಿಯ ಮುಖವಾಡ ಎದೆಗೆ ಅಡ್ಡದಾರ ಮೈ ಮೇಲೆ ವಿಭೂತಿ ನಾಲಿಗೆಯ ಮೇಲೆ ಮಂತ್ರ ದೀ...

೧ ಇರುಳ ಆಕಾಶದ ತುಂಬಾ ಕಪ್ಪನೆಯ ಮೋಡಗಳು ಮಳೆ ಸುರಿದಿದೆ ಧಾರಾಕಾರ ಮೈ ಕೊರೆವ ಚಳಿಯಲ್ಲಿ?! ೨ ಒಂದು ಕಾಲವಿತ್ತು ಈ ನೆಲದ ಮೂಲೆ ಮೂಲೆಯ ಮೇಲೆ ಆ ದೇವನ ಪ್ರೀತಿ ಜಿನುಗಿತ್ತು ಹನಿ ಹನಿ ಅಮೃತವಾಗಿ ಆಗಿನ್ನು ಅವನಿಗೆ ಹಸರಿರಲಿಲ್ಲ ಮಾತು ಬದುಕಾಗಿತ್ತು ...

ಹೊತ್ತವರಾರೀ ಸೃಷ್ಟಿಯ ಭಾರ, ಎಳೆಯುವರಾರೀ ವಿಶ್ವದ ತೇರ, ಯಾವುದು ಕಾಣದೆ ಕುಣಿಸುವ ದಾರ? ಯಾರದು ಈ ಹುನ್ನಾರ? ಯಾರೋ ಜಗಕಾಧಾರ? ತಣ್ಣಗೆ ಬೀಸುವ ಗಾಳಿಯ ಮೇಲೆ ಬಣ್ಣದ ಹಗಲಿನ ಬೆಳಕಿನ ಮೇಲೆ ಸುಮ್ಮನೆ ಓಡುವ ತೊರೆಗಳ ಮೇಲೆ ಯಾರದು ಅಧಿಕಾರ? ಯಾರದು ಅಧಿ...

1...3334353637...73

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...