ಹೊತ್ತವರಾರೀ ಸೃಷ್ಟಿಯ ಭಾರ?

ಹೊತ್ತವರಾರೀ ಸೃಷ್ಟಿಯ ಭಾರ,
ಎಳೆಯುವರಾರೀ ವಿಶ್ವದ ತೇರ,
ಯಾವುದು ಕಾಣದೆ ಕುಣಿಸುವ ದಾರ?
ಯಾರದು ಈ ಹುನ್ನಾರ?
ಯಾರೋ ಜಗಕಾಧಾರ?

ತಣ್ಣಗೆ ಬೀಸುವ ಗಾಳಿಯ ಮೇಲೆ
ಬಣ್ಣದ ಹಗಲಿನ ಬೆಳಕಿನ ಮೇಲೆ
ಸುಮ್ಮನೆ ಓಡುವ ತೊರೆಗಳ ಮೇಲೆ
ಯಾರದು ಅಧಿಕಾರ?
ಯಾರದು ಅಧಿಕಾರ?

ಯಾರು ನೇಯ್ದರೋ ಹಸಿರಿನ ಶಾಲು?
ರೆಂಬೆ ರೆಂಬೆಯೂ ಬಣ್ಣದ ಕೋಲು;
ಇರುಳಿಗೆ ಹರಿಸಲು ಹುಣ್ಣಿಮೆ ಹಾಲು
ಯಾರಿಗೆ ಅಧಿಕಾರ?
ಅದಾರಿಗೆ ಅಧಿಕಾರ?

ಕಡಲು ಬರೆಯುತಿದೆ ಮುಗಿಲಿನ ಕವನ,
ತೇಲುವ ಮುಗಿಲೋ ಬಣ್ಣದ ಭವನ,
ಯಾರ ಆಜ್ಞೆ ಈ ಸೃಷ್ಟಿಯ ಚಲನ?
ಯಾರದು ಹುನ್ನಾರ? ಇದೆಲ್ಲ
ಯಾರ ಕಾರಭಾರ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೨೮
Next post ಒಡೆದ ಗುಮ್ಮಟದ ತುಂಬಾ

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…