ಮರುಭೂಮಿಗೆ ಬಾಯಾರಿಕೆ ಇಲ್ಲ ಮೋಡ ಮಳೆಗೆ ವಸಂತವಾದೀತೆಂದುಕೊಂಡಿದ್ದೆ- ಉಗ್ರ ಸೂರ್ಯನ ಹಪಹಪಿಗೆ ಮಳೆ ಇಳಿದು ಹಳ್ಳ ಹೊಳೆಯಾಗಿ ಹರಿದು ತೃಷೆ ಹಿಂಗಿಸಬಹುದೆಂದುಕೊಂಡಿದ್ದೆ- ಕೆರೆ ಹಳ್ಳ ಪಳ್ಳ ಕೊಳ್ಳಗಳಲ್ಲಿ ಒಂಟೆಗಳು ಖುಷಿಯಾಗಿ ರಾಡಿಯಲಿ ಮಿಜಿ ಮಿಜಿ ...

ಭೌತಿಕ ದೇಹದೊಳಗೆ ಜೀವಹೊತ್ತ ಮಾನವನಿಗೆ ಯಾವುದೇ ಕೆಲಸ ನಿರ್ವಹಿಸಲು ತನ್ನದೇ ಆದ ಸಮಯದ ಮಿತಿ ಇರುತ್ತದೆ. ತನ್ನ ಶಕ್ತಿಗೆ ಮೀರಿ ಕೆಲಸಗಳನ್ನು ನಿರ್ವಹಿಸಿದರೆ ಅನಾರೋಗ್ಯ ಕಾಡಿ ಕೊನೆಗೊಂದು ದಿನ ಅವಸಾನವೂ ಆಗಬಹುದು. ಒಬ್ಬ ವ್ಯಕ್ತಿಮಾಡಬಲ್ಲ ಕಠಿಣ ಕೆ...

ಶತ ಶತಮಾನಗಳಿಂದ ಅದೇ ದಡ ಅದೇ ಕಡಲು ಕಡಲ ಸಿಟ್ಟಿಗೆ ಮತ್ತೆ ಮತ್ತೆ ಹಲ್ಲೆಗೊಳಗಾಗುವ ದಡದ ಒಡಲು. ಕಬಂಧ ಬಾಹುಗಳ ಚಾಚಿ ದಡವನೇ ಬಾಚಿ ನುಂಗುವ ಹುನ್ನಾರ ಕಡಲಿನದು ದೈತ್ಯ ಕಡಲಲೆ ಎಷ್ಟಾದರೂ ತಟ್ಟಲಿ ಹೇಗಾದರೂ ಮುಟ್ಟಲಿ ಮತ್ತೆ ಮತ್ತೆ ಬೆನ್ನಟ್ಟಲಿ ಒಂದ...

“ಅನು, ಅನು” ಹೊರಗಿನಿಂದಲೇ ಕೂಗುತ್ತ ಒಳಬಂದ ಸದಾನಂದ ಏದುಸಿರು ಬಿಡುತ್ತ ಅನುವನ್ನು ಹುಡುಕಿಕೊಂಡು ಹಿತ್ತಿಲಿನವರೆಗೂ ಬಂದ. ಬಟ್ಟೆ ತೆಗೆಯುತ್ತಿದ್ದವಳನ್ನು ಕಂಡವನೇ “ಅನು ಕೇಳಿದ್ಯಾ, ಚಂದ್ರು ಅಮ್ಮನ್ನ ನಾಲಿಗೇನಾ ಯಾರೋ ಕತ್ತ...

ಒಬ್ಬ ಹೆಂಡತಿಯನ್ನು ಕರೆದುಕೊಂಡು ಸ್ಪೆಷಲಿಷ್ಟ್ ಬಳಿಗೆ ಹೋದ. “ಅವಳು ಬಾಯಿಗೆ ಬಂದಂತೆ ಬೈಯುತ್ತಿರುತ್ತಾಳೆ. ನನಗೆ ಅವಳು ಏನು ಬೈಯುತ್ತಿದ್ದಾಳೆ ಎನ್ನುವುದು ಕೇಳಿಸುವುದೇ ಇಲ್ಲ. ಈಗ ಯಾರಿಗೆ ಚಿಕಿತ್ಸೆ ಅಗತ್ಯ ಎಂಬುದನ್ನು ನೀವು ತಿಳಿದು ಹೇ...

ನಲ್ಲೆ ನಮ್ಮ ಪ್ರೀತಿಗೇಕೆ ಇಂಥ ಪಾಡು ಈ ನೆಲೆ? ಆಯಿತೇಕೆ ಬಾಳು ಹೀಗೆ ಗಾಳಿಗೆದ್ದ ತರಗೆಲೆ? ನೀ ಉತ್ತರ ನಾ ದಕ್ಷಿಣ ಸೇರಲಾರದಂತರ, ತಾಳಿ ಹೇಗೆ ಬಾಳಿಯೇವು ವಿರಹವನು ನಿರಂತರ? ಇಲ್ಲಿ ಒಲುಮೆಗೆಲ್ಲಿ ಬೆಲೆ ಕಲೆಯಗೊಡದ ಜಗವಿದು, ಕನಸೊಂದೇ ದಾರಿ ನಮಗೆ ಮ...

ಕೆಂಪು ಸಮುದ್ರದ ಕನ್ಯೆ ಸೂರ್ಯನಿಗೆ ಪ್ರಾರ್ಥಿಸಿಕೊಂಡಾಗ ಕನಸಿನ ಮುತ್ತುಗಳು ಮಾಲೆಯಾಗಿ ಜೇನು ಹೊಳೆಯಾಗಿ ಕಾಮನ ಬಿಲ್ಲಾಗಿ ಬೆಳದಿಂಗಳಾಗಿ ಬಿಸಿಯುಸಿರಿನಲಿ ಕೆನ್ನೆ ಕಚ್ಚಿದ ಕೆಂಪು ಕೆನ್ನೆ ಅರಳಿಕೊಂಡು ಮತ್ತೇರಿದಾಗ ಕನ್ಯೆಯ ಒಡಲಾಳದಲ್ಲಿ ಮುಂಜಾವಿನ...

ಬ್ಯಾಂಕುಗಳಲ್ಲಿ ಅಥವಾ ದೊಡ್ಡ ವ್ಯಾಪಾರಿ ಕಂಪನಿಗಳಲ್ಲಿ ಲಕ್ಷ ಲಕ್ಷ ಕೋಟಿ ಹಣವನ್ನು ಅತಿಬೇಗನೆ ಎಣಿಸಬೇಕಾಗುತ್ತದೆ. ಮನುಷ್ಯನ ಎಣಿಸುವಿಕೆಯ ವೇಗದಲ್ಲಿ ಸ್ವಲ್ಪ ನೆನಪು ಹುಸಿಯಾದರೂ ಎಣಿಕೆ ತಪ್ಪಾಗಿ ಮುಂದೆ ಅನೇಕ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದ...

ಪ್ರತಿಯೊಂದು ರಸ್ತೆಯ ಎದೆಗೂಡು ಒಂದೊಂದು ನೋವಿನ ಮಡು ರಸ್ತೆ ತನ್ನ ನೋವು ಹೇಳುವುದಿಲ್ಲ ಬಿಡಿ ನಾವು ಕೇಳುವುದೂ ಇಲ್ಲ!   ರಸ್ತೆಗಳ ಗರ್ಭದೊಳಗೆ ಅದೆಷ್ಟೊಂದು ಗುಟ್ಟುಗಳಿವೆಯಲ್ಲಾ ವಿಪರ್ಯಾಸವೆಂದರೆ ರಸ್ತೆಗಳು ಮಾತನಾಡುವುದಿಲ್ಲ ಮಾತನಾಡಬಾರದಲ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....