ಮಾನವ ನಿರ್ಮಿಸಿದ ಅತಿಮಾನವ ಯಂತ್ರ ರೋಬಟ್

ಭೌತಿಕ ದೇಹದೊಳಗೆ ಜೀವಹೊತ್ತ ಮಾನವನಿಗೆ ಯಾವುದೇ ಕೆಲಸ ನಿರ್ವಹಿಸಲು ತನ್ನದೇ ಆದ ಸಮಯದ ಮಿತಿ ಇರುತ್ತದೆ. ತನ್ನ ಶಕ್ತಿಗೆ ಮೀರಿ ಕೆಲಸಗಳನ್ನು ನಿರ್ವಹಿಸಿದರೆ ಅನಾರೋಗ್ಯ ಕಾಡಿ ಕೊನೆಗೊಂದು ದಿನ ಅವಸಾನವೂ ಆಗಬಹುದು. ಒಬ್ಬ ವ್ಯಕ್ತಿಮಾಡಬಲ್ಲ ಕಠಿಣ ಕೆಲಸಗಳಿಗಿಂತಲೂ ನೂರುಪಟ್ಟು ಹೆಚ್ಚು ಮಾಡಿ ಆಯಾಸವೇ ಇಲ್ಲದೆ ಕಾರ್ಯ ನಿರ್ವಹಿಸುವ ಶಕ್ತಿ ಈ ಮಾನವನೇ ನಿರ್ಮಿಸಿದ ಯಂತ್ರಮಾನವನಿಗಿದೆ. ಏನೆಲ್ಲ ವೈಜ್ಞಾನಿಕ
ವಿಸ್ಮಯಗಳಿಗೆ ಜನ್ಮವಿತ್ತ ಈ ಮಾನವ ತನ್ನಂತಲ್ಲದಿದ್ದರೂ ತನಗಿಂತಲೂ ಹೆಚ್ಚು ಸಾಮರ್ಥ್ಯ ಹೊಂದಿದ ಯಂತ್ರವನ್ನು ಸೃಷ್ಟಿಸಿದ ನಂತರ ಬೃಹದಾಕಾರದ ಕೆಲಸಗಳು ಆಗಿಂದಾಗ್ಗೆ ಮುಗಿದು ಬೆಟ್ಟವನ್ನೇ ಕಡಿದು ಹಾಕಬಲ್ಲ ಯಂತ್ರಮಾನವನನ್ನು ಸೃಷ್ಟಿಸಿದ ಮೇಲೆ ಈ ಜಗತ್ತು ದಿಢೀರನೆ ನಾಗಾಲೋಟಕ್ಕೆ ಏರಿತು.

ಈ ರೋಬಟ್ ಎಂಬ ಪದವು ೧೯೧೭ ರಲ್ಲಿಯೇ ಜೆಕ್ ನಾಟಕಕಾರ ಕೆಲಲ್ ಕಾಪೆಲ್ ಒಂದರಲ್ಲಿ ಬಳಸಿದ. ಈ ರೋಬಟ್ ‘ಜೆಕ್’ ಪದದಿಂದ ಬಂದಿದ್ದು ಇದರರ್ಥ ‘ಬಲವಂತಕೂಲ’ ಅಥವಾ ‘ಗುಲಾಮ’ ಎಂದಾಗುತ್ತದೆ. ಆದ್ದದಿಂದ ಇವುಗಳನ್ನು ಮಾನವ ಜನಾಂಗದ ಗುಲಾಮರೆಂಬಂತೆ ಕೆಲಸ ತೆಗೆಯಿಸಲಾಗುತ್ತಿದೆ. ೧೯೧೩ ರಲ್ಲಿ ಅಮೇರಿಕಾದ ಸಂಯುಕ್ತ ಸಂಸ್ಥಾನ ಸ್ಪೆರ್ರಿ ಗೈರೋಸ್ಕೋಪ್ ಕಂಪನಿಯಿಂದ ಪರಿಚಯಿಸಲ್ಪಟ್ಟ ಸ್ವಯಂಚಾಲಿತ ವಿಮಾನ ಚಾಲಕವಾಗಿದೆ. ೧೯೪೦ರ ದಶಕದಲ್ಲಿ ರೇಡಿಯೋ ವಿಕಿರಣ ವಸ್ತುಗಳನ್ನು ನಿರ್ವಹಿಸುವುದಕ್ಕೆ ಅಣುಶಕ್ತಿ ಕೈಗಾರಿಕೆಗಳಲ್ಲಿ ರೋಬಟ್‌ನ ಸಾಧನೆಗಳು ಉಪಯೋಗಕ್ಕೆ ಬಂದವು. ೧೯೬೨ರಲ್ಲಿ ‘ಯೂನಿಮೇಷನ್’ ಎಂಬ ಅಮೇರಿಕಾದ ಕಂಪನಿಯು ಮೊದಲನೆ ಪ್ರಾಚೀನ ಕೈಗಾರಿಕೆಯ ರೋಬಟ್‌ಗಳನ್ನು ಮಾರಿತು. “ಇದರಲ್ಲಿ ಆಯ್ದುಕೋ ಸ್ಥಳದಲ್ಲಿಡು” ವಿಭಾಗಗಳು ಮಾತ್ರ ಇದ್ದವು. ನಂತರ ೧೯೭೦ರ ದಶಕದಲ್ಲಿ ಅತ್ಯಂತ ಹೆಚ್ಚು ಮಣಿಯುವ ರೋಬಟ್‌ಗಳು ಕಾರಿನ ಮೈಯನ್ನು ಸ್ಥಳದಲ್ಲಿಯೇ ಬೆಸೆಯಲು ಪ್ರಾರಂಭಿಸಿ ಬಣ್ಣಗಳಿಂದ ಅವುಗಳನ್ನು ಸಿಂಪಡಿಸಿದವು. ೧೯೮೦ರ ಅಂತ್ಯದ ಹೊತ್ತಿಗೆ ಪ್ರಪಂಚದಲ್ಲಿ ೮,೦೦೦ ಸುಧಾರಿತ ರೋಬಟ್‌ಗಳಿದ್ದು ಅವುಗಳನ್ನು ಗಣಕ ಯಂತ್ರಗಳಿಂದ ನಿಯಂತ್ರಿಸಿದ್ದು ಅವುಗಳಿಗೆ ಸೂಚನೆಗಳನ್ನು ಒಪ್ಪಿಕೊಳ್ಳುವ ಮತ್ತು ಜ್ಞಾಪಕ ಇಟ್ಟುಕೊಳ್ಳುವ ಸಾಮರ್ಥ್ಯವಿದ್ದಿತು. ಕಳೆದ ಕೆಲವು ವರ್ಷಗಳಲ್ಲಿ ನೋಡುವ, ಮಾತನಾಡುವ, ಕೇಳುವ ಮತ್ತು ಸ್ಪರ್ಶ ಹೊಂದುವ ‘ರೋಬಾಟ್’ಗಳನ್ನು ಕಂಡುಹಿಡಿಯಲಾಗಿದೆ.

೧೯೯೦ ಹೊತ್ತಿಗೆ ಜಪಾನ್ ೭೦,೦೦೦ ರೋಬಾಟ್ಗಳನ್ನು ಅಮೇರಿಕ ಸಂಯುಕ್ತ ಸಂಸ್ಥಾನವು ೬೦,೦೦೦, ಬ್ರಿಟನ್ ೨೫,೦೦೦, ಫ್ರಾನ್ಸ್ ೨೫,೦೦೦ ರೋಬಟ್‌ಗಳನ್ನು
ಹೊಂದಿರುತ್ತವೆಂದು ಒಂದು ಮಾಹಿತಿ ತಿಳಿಸುತ್ತಿದೆ. ಕಮ್ಯುನಿಸ್ಟ್ ದೇಶಗಳಲ್ಲಿ ೨೦೦,೦೦೦ ರೋಬಟ್‌ಗಳನ್ನು ಹೊಂದಿವೆ ಎಂದರೆ ಇದರ ವ್ಯಾಪಕ ಪ್ರಯೋಜನದ ಅರಿವಾಗುತ್ತದೆ. ಕೈಗಾರಿಕೆ, ಅಣುಸ್ಥಾವರ, ಆಸ್ಪತ್ರೆ, ಸಮುದ್ರಶೋಧನೆ, ಮತ್ತು ಇತರ ಕ್ಷೇತ್ರಗಳಲ್ಲಿ ಇವುಗಳನ್ನು ಬಳಸಿಕೊಳ್ಳಲಾಗುತ್ತದೆ. ‘ರೋಬಟ್’ ಎಂಬುವುದು ಒಂದು ಸ್ವಯಂ ಚಾಲಿತ ಯಂತ್ರವಾಗಿದ್ದು ಇದರ ಕೆಲಸಗಳನ್ನು ಗಣಕ ಯಂತ್ರವು ನಿಯಂತ್ರಿಸುತ್ತದೆ. ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ ಮತು ಗಣಕ ಯಂತ್ರಗಳ ಮಿಶ್ರವಿದ್ಯೆಯಾಗಿದೆ. ಒಂದು ತೋಳು, ಹಸ್ತ, ಬೆರಳುಗಳು, ಕಾಲುಗಳು, ಜ್ಞಾನೇಂದ್ರಿಯಗಳು ಮುಂತಾದವುಗಳು ಒಂದು ಗಣಕ ಯಂತ್ರ ಮತ್ತು ವಿದ್ಯುತ್ ಶಕ್ತಿಯ ಒಂದು ಮೂಲ. ಇವುಗಳನ್ನು ರೋಬಟ್ ಹೊಂದಿರುತ್ತದೆ.

ಮಾನವ ಶರೀರದ ಅಂಗಗಳ ಹೋಲಿಕೆ: ರೋಬಟ್‌ನ ಶರೀರವು ಮಾಂಸ ಮತ್ತು ಮೂಳೆಗಳ ಬದಲಾಗಿ ಕಬ್ಬಿಣ, ಉಕ್ಕು, ಪ್ಲಾಸ್ಟಿಕ್‌ಗಳಿಂದ ಮಾಡಲ್ಪಟ್ಟಿದೆ. ಶಬ್ದತರಂಗಗಳನ್ನು ವಿದ್ಯುತ್ ಪ್ರಚೋದನೆಗಳಿಗೆ ಬದಲಾಯಿಸುವ ಒಂದು ಸೂಕ್ಷ್ಮ ಸಂವೇದಿ ಧ್ವನಿವರ್ಧಕವನ್ನು
ಮನುಷ್ಯನ ಕಿವಿಗೆ ಹೋಲಿಸಬಹುದು. ರೋಬಟ್‌ನಲ್ಲಿರುವ ಧ್ವನಿವರ್ಧಕವು ಮಾತನಾಡುವ ಕೆಲಸ ಮಾಡುವುದರಿಂದ ಇದನ್ನು ಗಂಟಲಿಗೆ ಹೋಲಿಸಬಹದು. ಒಂದು ಫೋಟೋ ಕೋಶ ಅಥವಾ ದೂರದರ್ಶನ ಕ್ಯಾಮರವು ವಸ್ತುವಿನ ಬಿಂಬವನ್ನು ವಿದ್ಯುತ್‌ಮಿಡಿತಗಳಾಗಿ ಬದಲಾಯಿಸುತ್ತಲಿರುವದರಿಂದ ಇದನ್ನು ಮನುಷ್ಯನ ಕಣ್ಣುಗಳಿಗೆ ಹೋಲಿಸಬಹುದು. ಇವುಗಳ ಕೈಗಳು ಸ್ವತಂತ್ರ ಚಲನೆಯನ್ನು ಹೊಂದಿರುತ್ತವೆ. ಕೆಲವು ಸುಧಾರಿತ ರೋಬಟ್‌ಗಳ ಕೈಗಳಿಗೆ
ಬಾಗುವ ಬೆರಳುಗಳನ್ನು ಮಾಡಿದ್ದು ಇವುಗಳು ಜ್ಞಾನೇಂದ್ರಿಯಗಳನ್ನು ಹೊಂದಿದ್ದು ಅವುಗಳಿಗೆ ಸ್ಪರ್ಶಜ್ಞಾನವನ್ನು ಕೊಡಲಾಗಿದೆ. ಕೈಗಳ ಚಲನೆಗೆ ಅನೇಕ ವಿಧವಾದ ಮೋಟಾರುಗಳನ್ನು ಉಪಯೋಗಿಸಲಾಗಿದೆ. ಕೈಗಳು ಮೇಲಕ್ಕೆ ಮತ್ತು ಕೆಳಕ್ಕೆ, ಹೊರಕ್ಕೆ, ಒಳಕ್ಕೆ ಮತ್ತು ಪಕ್ಕದಿಂದ ಪಕ್ಕಕ್ಕೆ ಚಲಿಸುವಂತೆ ಮಾಡಲಾಗಿರುತ್ತದೆ. ತೋಳಿನ ಮೇಲಿರುವ ಹಸ್ತವು ತಿರುಗಲು ಹಾಗೂ ಮೇಲೆ ಕೆಳಗೆ ಮತ್ತು ಪಕ್ಕದಿಂದ ಪಕ್ಕಕ್ಕೆ ಚಲಿಸುವ ವಿದ್ಯುತ್ ಮೋಟಾರುಗಳನ್ನು ಉಪಯೋಗಿಸಲಾಗಿದೆ. ವಿಧ ವಿಧವಾದ ಚಲನೆಗಳಿಗೆ ಸಂಕುಚಿತ ವಾಯು ಅಥವಾ ಜಲಾಧಾರಿತ ಶಕ್ತಿಯನ್ನು ಉಪಯೋಗಿಸಲಾಗಿರುತ್ತದೆ. ಮೂರು ಕಾಲು, ನಾಲ್ಕು ಕಾಲುಗಳ ಕ್ರಮವನ್ನು ಅಭಿವೃದ್ದಿ ಪಡಿಸಲಾಗಿದೆ. ನೋಡುವ, ಕೇಳುವ, ಮಾತನಾಡುವ ಮತ್ತು ಸ್ಪರ್ಶದ ಅನುಭವಗಳನ್ನು ಪಡೆಯುವ ಕಾರ್ಯಗಳನ್ನು ನಡೆಸಲು ವಿವಿಧ ಬಗೆಯ ಜ್ಞಾನೇಂದ್ರಿಯಗಳನ್ನು ಜೋಡಿಸಲಾಗಿದೆ. ಗಣಕಯಂತ್ರವೇ ರೋಬಟಿನ ಮೆದುಳಾಗಿದೆ. ಮನುಷ್ಯನೀಡಿದ ಮಾರ್ಗದರ್ಶನ ದಂತೆ ಈ ಗಣಕ ಯಂತ್ರವು ಸಂವೇದಿಸುತ್ತ ರೋಬಟ್ಗಳನ್ನು ಚಲನಶೀಲ ಗೊಳಿಸುತ್ತದೆ.

ಇಂತಹ ರೋಬಟ್‌ಗಳಲ್ಲಿ ೧) ದೂರದಿಂದ ನಿಯಂತ್ರಿಸುವ ರೋಬಟ್‌ಗಳು ೨)ಕಾರ್ಯವನ್ನು ರೂಪಿಸುವ ರೋಬಟ್‌ಗಳು, ೩) ಜ್ಞಾನೇಂದ್ರಿಯ ನಿಯಂತ್ರಿಸುವ ರೋಬಟ್‌ಗಳು, ೪) ಕೈಗಾರಿಕಾ ರೋಬಟ್‌ಗಳು, ೫) ಗೃಹ ರೋಬಟ್‌ಗಳು, ೬) ವೈದ್ಯಕೀಯರೋಬಟ್‌ಗಳು, ೭) ಕುರಿಯ ಉಣ್ಣೆ ಕತ್ತರಿಸುವ ರೋಬಟ್‌ಗಳು ಹೀಗೆ ನಾನಾವಿಧವಾದ ರೋಬಟ್‌ಗಳು ವಿವಿಧ ಕ್ಷೇತ್ರಗಳಿಗನುಸರಿಸಿ ಸೂಚಿತವಾದ ಗಣಕಯಂತ್ರದ ಕ್ರಿಯೆಗಳಂತೆ ಚಾಲನೆಗೊಳ್ಳುತ್ತದೆ.

ದೆಹಲಿಯ ಐ.ಟಿ.ಐ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಮುಂಬೈಯ ಬಾಬಾ ಅಣು ಸಂಶೋಧವಾ ಕೇಂದ್ರ, ಜಾಧವಪುರ ವಿಶ್ವವಿದ್ಯಾನಿಲಯ ಹೈದರಾಬಾದಿನ ವಿಜ್ಞಾನ ಸಂಘ, ಚನ್ನೈ ಮತ್ತು ಖರಗ್‌ಪುರದ ಐ.ಟಿ.ಐ ಗಳು ಮುಂತಾದ ಸಂಸ್ಥೆಗಳು ಅನೇಕ ವಿಧವಾದ ರೋಬಟ್‌ಗಳನ್ನು ಅಭಿವೃದ್ಧಿಪಡಿಸಿವೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸ ಬೆಳಗು
Next post ಧಗೆ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…