ನೋವಿಗೆ ಸಾವಿಗೆ ಆಯಾಸಪಡಬ್ಯಾಡ ದೇವಗಂಗಾಧರ ಭಾವದೊಳಿರಲು ||೧|| ಮನಸ್ಸಿನ ಇಚ್ಛೆಗೆ ಘನ ವಿಪರೀತ ಮಾಡಿ ದಿನ ಬಳಲ್ವದು ಇದು ಏನು ||೨|| ವಸುಧಿಯೊಳು ಶಿಶುನಾಳಧೀಶನ ಹಸುಳನಾಗಿ ಈ ಪರಿ ಕಸವಿಸಿಪಡುವದು ಹಸನವಲ್ಲ ||೩|| *****  ...

ಕರುಣಾಮೃತ ರಸ ರುಚಿಕರದೋಗರ ಸುರಿದುಂಬುವಗಾಗುವದೇ ಮುಕುತಿ ? ||ಪ|| ಬೇಗನೆ ತನುನಿನ ಭೋಗವ ನೀಗದೆ ಯೋಗಮಾರ್ಗ ಸಾಗುವದೇ ಮನುಜಾ? ||ಅ.ಪ|| ಮಂಗಗೆ ಮಾಣಿಕ ತೋರಲು ಗಿಡಗಳ ಟೊಂಗಿಗೆ ಹಾರದೆ ಬಿಡುತಿಹುದೆ ? ಅಂಗಜರಾಜ ಹೆದರುವ ತಪಶ್ವಿಗೆ ಹೆಂಗಸರಾಸೆಯು ಹ...

-ರವಿ ಕೋಟಾರಗಸ್ತಿ ಮಾತು ಮೌನವಾಗುತ್ತಿದೆ ದಿನ.. ದಿನವು ಕ್ಷಣ.. ಕ್ಷಣವು ಜಗದೆಲ್ಲೆಡೆ ಬಾಯಿ ಚಾಚುತಿಹ ಕೋಮು-ಮತೀಯ ವಿಷ ಜಂತುವಿನ ಉದ್ದನೆಯ ಕರಿ ನಾಲಗೆಯ ಕಂಡು… ಮಾತು ಮೌನವಾಗುತ್ತಿದೆ ನಾಡಿನ ಉದ್ದಗಲು… ಶಾಂತಿ… ಸೌಹಾರ್ದತೆ...

ಹರಿವ ನದಿಗೆ ಹಾದಿ ಯಾವುದೆಂಬ ನಿಯತಿಯಲದೆಲ್ಲಿದೆ? ಮೊಳೆವ ಪ್ರೀತಿ-ಪ್ರೇಮಕೆಲ್ಲಿ ಭಿನ್ನ-ಭೇದವೆಣಿಸಬೇಕಿದೆ? ಬೀಸುಗಾಳಿಗೆ ಹೂವು ಅರಳಲು ಸುಮದ ಕಂಪಿನ ಘಮ….. ಘಮ….. ಹಾರಿಬರುವ ದುಂಬಿ ಮನದಲಿ ಬಗೆ ಬಗೆಯ ಸಂಭ್ರಮ….. || ಬೆಸೆದ...

ಎಸ್.ಜಿ.ಸಿದ್ದರಾಮಯ್ಯನವರ ಕಾವ್ಯ ಹುಟ್ಟುವುದು ದೇಸಿದಿಬ್ಬದಲ್ಲಿ. ಅದು ಉಸಿರಾಡುವುದು ಅಲ್ಲಿನ ಗಾಳಿಯನ್ನೆ. ಹೀಗೆ ನೆಲಮೂಲವನ್ನು ನೆಚ್ಚಿಕೊಂಡು ಬರೆಯುವ ಕವಿ ಅವರಾಗಿರುವುದರಿಂದ ತಮ್ಮ ಸಮಕಾಲೀನರಿಗಿಂತ ಭಿನ್ನರಾಗಿ ಕಾಣುತ್ತಾರೆ.  ಮೇಲುನೋಟಕ್ಕೆ ಅ...

ಶಿಕ್ಷಕ… ನೀ… ರಕ್ಷಕ ಭವ್ಯ ಭಾರತದ… ಅರಳುವ ಕುಡಿಗಳ ಆರಾಧಕ ನಿನ್ನ ರಕ್ಷೆಯಲಿ ಮಕ್ಕಳು ಅರಿತು ಬೆರೆತು ವಿದ್ಯೆಯ ಕಲಿತು ನುರಿತರೆ ಬೆಳೆಯುವದು ಬಾನೆತ್ತರಕೆ… ಪ್ರೀತಿ ವಾತ್ಸಲ್ಯ ಮಕ್ಕಳೊಡನೆ ಹಂಚಿಕೊಳ್ಳುತ ನೀರುಣಿಸಿ ಪ...

ಈ ಮೂಗು ಚಂದ ಈ ಬಾಯಿ ಚಂದ ಈ ಕಣ್ಣು ಈ ಕಾಲು ಈ ಕೈಯ್ಯಿ ಈ ಮೈಯ್ಯಿ ಚಂದ ನಿನ್ನ ನಗೆ ಚಂದ ನೀನತ್ತ ಅಳುವೂ ಚಂದ ನೀನೇ ಚಂದ ಸ್ವಚ್ಚಂದ ನೀನೇನಾಗಲಿದ್ದಿಯಾ? ನನಗೆ ಗೊತ್ತಿಲ್ಲ ಆದರೆ ಇದು ಖಾತ್ರಿ ಈ ಪುಟ್ಟ ಶರೀರ ಇಷ್ಟುದ್ದ ಬೆಳೆಯುತ್ತದೆ ಈ ಬತ್ತಲೆ ಶ...

ಮಧ್ಯಾಹ್ನ ಬಿಯರ್ ಕುಡಿದದ್ದು ತಲೆ ಸುತ್ತುತ್ತಿದೆ; ಈಗ ನನ್ನೊಂದಿಗಿಲ್ಲದ, ಮಠಕ್ಕೆ ಓದಲು ಬರುವ ಅವರ ನೆನಪು ಜೀವ ಹಿಂಡುತ್ತಿದೆ. ಹೆಣ ತಿನ್ನುವ ರಾತ್ರೆಯ ಹುಳುಗಳು ಸುಳಿದಾಡಲಾರಂಭಿಸಿವೆ. ಅವರ ಮುಗ್ಧತೆ, ಸೆಡವು, ಕುಗ್ರಾಮದ ಲಾವಣಿಗಳು- ಒಂದರಿಂದೊ...

ಮಧ್ಯಾಹ್ನ ಎರಡು ಘಂಟೆಗೆ ಐದು ನಿಮಿಷ ಬಾಕಿ ಇತ್ತು. ನ್ಯೂಸ್ ಕೇಳೋಣವೆಂದು ಟಿ.ವಿ. ತಿರುಗಿಸಿದೆ. ಕಾಲಿಂಗ್ ಬೆಲ್ ಬಾರಿಸಿತು. ಇದೊಂದು `ನ್ಯೂಸೆನ್ಸ್’ ಆಯಿತಲ್ಲಾ ಎಂದುಕೊಂಡು ಬಾಗಿಲು ತೆರೆದೆ. ಐದಾರು ಹುಡುಗರು ನಾಯಿ ನಮ್ಮ ಮನೆಯಲ್ಲಿ ಇಲ್ಲ...

ಸುಳಿವ ಗಾಳಿಗೆ ತಳಿರು ತೂಗಲು ಹಕ್ಕಿಗೊರಳಲಿ ಇನಿದನಿ…… ಉದಯ ಕಿರಣವು ಮುದದಿ ಹೊಮ್ಮಲು ಲತೆಗಳಲ್ಹರಳು ಸುಮದನಿ ಮಣ್ಣನಿ ಯಾವ ಕೈಗಳು ಬೆಸೆದ ಮಾಯೆಯೋ ಲೋಕ ಜೀವಯಾನಕೆ ಮುನ್ನುಡಿ ಇಂದು ನಿನ್ನೆಗು ಮುನ್ನ ನಾಳೆಗೂ ಸಾಗಿ ಬಂದಿದೆ ಜೇನ್ನುಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....