ಸೇದಿದಿಯಾ ಬತ್ತಿ ನೀ ಸೇದಿದಿಯಾ ||ಪ|| ಸೇದಿ ಬತ್ತಿಯ ಹೊಗಿ ಊದಿ ಊರ್ಧ್ವಕೆ ನಿಂತು ನಾದ ಬ್ರಹ್ಮದ ಗುರುಪಾದವ ಭಜಿಸಿ ||೧|| ವಿಷಯವನೆಲ್ಲವ ಬಿಟ್ಟು ವ್ಯಸನಕಗ್ನಿಯ ಕೊಟ್ಟು ಹಸನಾದ ಹಸರು ತಂಬಾಕದ ಬತ್ತಿಯ ||೨|| ಸಧ್ಯಕ್ಕೆ ಶಿಶುನಾಳ ಸದ್ಗುರು ದಯದಿ...

ಹದಿನಾಲ್ಕು ವರುಷಗಳ ಮೇಲೆ ಸವಿನೆನಪುಗಳ ಬುತ್ತಿಯಲಿ ಏನೇನೊ ಹಲವು ಕನಸನೆ ಹೊತ್ತು ಮಣ್ಣ ವಾಸನೆ ಅರಸುತ ಹಳ್ಳಿಗೆ ನಡೆದೆ ಕರಿಮಣ್ಣಿನ ಏರೆಹೊಲದ ದಿಬ್ಬದಿ ನನ್ನೂರು ಕಾಣುವ ತವಕದಿ ಹೆಜ್ಜೆಯ ಮೇಲೆ ಹೆಜ್ಜೆಯಿಡುತ ಇಳಿದಾಗ ಜುಳು… ಜುಳು… ...

ಬಾ ಬಾ ಸಿರಿಯೆ ಈ ಅಂತರ ಸರಿಯೆ ಬದುಕಿಗೆ ಬಣ್ಣದ ಲಾಸ್ಯವ ಸುರಿಯೆ ದುಂಬಿಯ ಝೇಂಕಾರದ ಮೋಹಕತೆ ಭ್ರಮಿಸಲು ನಿಂತರಳಿದೆ ಪುಷ್ಪಲತೆ ಎಲ್ಲಿಯೆ ನೋಡಲಿ ಕಣ್‌ಮನ ತಂಪು ಕುಹು ಕೋಗಿಲೆಯೆ ಸುರಿ ನೀರಿನಿಂಪು ಗಿರಿಕಂದರಗಳ ಭೂರಮೆ ತೊಡುಗೆ ಬೀಸುವ ತಂಗಾಳಿಯ ಬಳು...

ಬೆಟ್ಟವನ್ನೇರುತ್ತೇರುತ್ತ ಕೆಳಗಿನ ದಾರಿಯನ್ನು ನೋಡಿ, `ಅದು ಯಾವ ದಾರಿ?’ ಎಂದು ಗೆಳೆಯನನ್ನು ಕೇಳುತ್ತೇನೆ; `ನಾವು (ನಡೆದು) ಬಂದ ದಾರಿ ಅದೇ ಅಲ್ಲವೇ?’ ನಗುತ್ತಾ ಉತ್ತರಿಸುತ್ತಾನೆ. ಹೌದು, ನಾವೆಲ್ಲರೂ ಅಪರಾಧ ಮತ್ತು ಒಳ್ಳೆಯತನಗಳಲ...

ಸಂಜೆ ಐದರ ನಂತರದ ರೈಲುಗಾಡಿ ಬಂದು ನಿಂತಿದೆ. ಇನ್ನೇನು ಹೊರಡುತ್ತದೆ; ಬೋಗಿಗಳು ಅದಲು ಬದಲಾಗಬೇಕಷ್ಟೇ. ಸೆಪ್ಟೆಂಬರ್‍ ತಿಂಗಳ ಮಳೆಗಾಲದ ನಡುಮಧ್ಯಾಹ್ನ ಅವರೆಲ್ಲರೂ ಬಂದು ನೆಲೆ ನಿಂತರು. ಆ ಮರಗಿಡಗಳು ಬೆಳೆಯುತ್ತಲೇ ಇವೆ. ಕೆಲವರು ನಗಲು ಪ್ರಾರಂಭಿಸ...

ಮೂರ್ತಿಯು ಸಂಜೆ ಕಛೇರಿ ಮುಗಿಸಿ ಮನೆಗೆ ವಾಪಾಸಾಗುವಾಗ ದಾರಿಯಲ್ಲಿ ಆ ನಾಯಿಮರಿಯನ್ನು ಕಂಡನು. ಅದು ಹಸಿವು ಬಾಯಾರಿಕೆಗಳಿಂದ ಕಂಗೆಟ್ಟು ಸರಿ ಒಡಾಡಲೂ ಆಗದೆ ದೈನಾವಸ್ಥೆಯಲ್ಲಿ ಜೋಲು ಮೋರೆ ಹಾಕಿ ಕೂತಿತ್ತು. ಇನ್ನೇನು ಯಾವುದಾದರೂ ಕಾರು, ಆಟೋ, ಬಸ್ಸಿ...

ಗೋಡೆ ಮೇಲಿನ ದೊಡ್ಡ ಗಾತ್ರದ ಎಲೆಗಳ ಹೂಬಳ್ಳಿ ಸ್ತಬ್ಧ ಚಿತ್ರವಾಗಿಯಷ್ಟೇ ಉಳಿದಿದೆ.  ಎಂದೋ ಉದುರಿದ ಎಲೆಗಳು ನೆಲ ಬಗೆದು ಬೂಮಿಯೊಡಲು ಸೇರಿ, ಗೆದ್ದಲಿಡಿದು ಎಲುಬು ತಿಂದ ಮನುಷ್ಯನಂತೇ ಆಗಿಹೋಗಿವೆಯೇನೊ. ಬುದ್ಧಿ ಬಂದಾಗ ಮೂಲೆ ಸೇರಿದ ಪ್ರಜ್ಞಾಹೀನ ಇ...

ಕರುಣಿಕರು ಕೊಟ್ಟ ಅರಪಾವ ಜೋಳದಿಂದ ಹೊಟ್ಟೆ ಬರ ಹಿಂಗುವುದ್ಯಾಂಗಲೋ ಮನಸೇ ||ಪ|| ಸ್ಥಿರವಲ್ಲ ಸಂಸಾರ ಕೆರವಿನಟ್ಟಿಯ ಸರಿ ಬರಿದೆ ಆಸೇಕ ಬಿದ್ದೆಲ್ಲೋ ಮನಸೇ ||ಅ.ಪ.|| ನೇಮಿಸಿ ದೇಶಪಾಂಡೆ ಭೀಮರಾಯನೆಂಬೊ ನಾಮವನು ಕೇಳಿ ಬಂದೆಲ್ಲೋ ಮನಸೇ ಇವನ್ನು ಕೊಡುತ...

ದಾರಿ ತೋರುವವರಾರು ನಿನಗೆ ಚಿನ್ಮಯಾನಂದದ ಶಿವ ಬೆಳಕಿನೆಡೆಗೆ || ವೀಧಿ ಬೀಧಿ ಹಾದಿಯಲ್ಲು ಕಲ್ಲು ಮುಳ್ಳಿನ ಕಂದರ ಪೊಳ್ಳು-ಜೊಳ್ಳು ಭರವಸೆ ಗೋಪುರ ಹೆಜ್ಜೆ-ಹೆಜ್ಜೆಗೂ ಮುಖವಾಡ ಬಿಂಬವು ಹಗಲುಗನಸಿನ ಡಂಗುರ || ಎನು ನೆಚ್ಚುವೆ ಯಾರ ಮೆಚ್ಚುವೆ ಹುಚ್ಚು-...

ಮುತ್ತಿಡುತ ನೀಲಾಗಸಕೆ ಜಗವ ಬೆರಗುಗೊಳಿಸಿ ನದಿ-ತೊರೆಗಳ-ಧಾಮ ಹಸಿರ ಸಿರಿಯ ವೈಯ್ಯಾರದ ನಿತ್ಯೋತ್ಸವದ ಪಶ್ಚಿಮಘಟ್ಟ ತುಂಬಿದ ಮಾಲೆಗಳಲ್ಲಿ ಬೆಟ್ಟಗಳ ಸಾಲು ಬೆಸೆದು ಹೊದ್ದ ನಿತ್ಯ ಹರಿದ್ವರ್ಣ ವಾತ್ಸಲ್ಯದ ಮಡಿಲು ಮಾದಾಯಿ ಮಾತೃ ಒಡಲ ಅಪ್ಪುಗೆಯಲಿ ಜಲಧಾ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...