ಒಮ್ಮೆ ಎರಡು ಬುಗ್ಗೆಗಳು ಚಿರಕಾಲ ಬದುಕಲು ಬಯಸಿದವು. ಒಂದು ಬುಗ್ಗೆ “ನಾನು ಪವನನ ಗೆಳೆತನ ಮಾಡಿ ಮೈತುಂಬಿ ಬಾಳುವೆ” ಎಂದು ಕೊಂಡಿತು. ಮತ್ತೊಂದು ಬುಗ್ಗೆ “ನಾನು ಹೂವಿನ ಮೆತ್ತನೆಯ ಹಾಸಿಗೆಯಲ್ಲಿ ಬಾಳನ್ನು ಕಳೆದು ಬಹಳ ಕಾಲ ಬಾ...

ವಲ್ಲಭಾಚಾರ್ಯರು ೧೮೬೨ರಲ್ಲ ಕಮಲಪುರದ ಅಮಲ್ದಾರರಾಗಿದ್ದರು. ಆ ಕಾಲದಲ್ಲಿ ಜನಗಳಿಗೆ ಕುಂಪಣಿ ಸರಕಾರದಲ್ಲಿ ಹುದ್ದೆ ದೊರಕುವುದಕ್ಕೆ ಅಷ್ಟೊಂದು ತೊಂದರ ಇರಲಿಲ್ಲ. ಜನಗಳಲ್ಲಿ ಸಾಕಷ್ಟು ಅನುಕೂಲತೆ ಇದ್ದಿತ್ತು; ಹೊಟ್ಟೆ ತುಂಬಾ ಉಂಡು ಕೂತುಕೊಳ್ಳಬಹುದಾದ...

ಆಕೆ ತಾಪತ್ರಯಗಳನ್ನು ತಾಳಲಾರದೆ ಪರಿಹಾರಕ್ಕಾಗಿ ಒಬ್ಬ ಜ್ಯೋತಿಷಿಯ ಬಳಿ ಹೋದಳು. ಅವಳ ಜಾತಕವನ್ನು ನೋಡಿ “ನಿನ್ನ ಗಂಡನಿಗೆ ಎರಡನೇಯ ಮದುವೆಯ ಯೋಗವಿದೆ” ಎಂದ. ಪರಿಹಾರಕ್ಕೆ ಬಂದ ಅವಳಿಗೆ ಪ್ರಪಾತದಲ್ಲಿ ಬಿದ್ದಂತಾಯಿತು. ಅವಳು ಖಿನ್ನ ಮ...

ಹೆಣ್ಣು ನಾಯಿ ಆಗಲೇ ಕೊಂದರು ಮರಿಗಳಿನ್ನೂ ಉಳಿದಿವೆ – ಜನಪ್ರಿಯ ಗೀತೆ ‘ವಿವಾ ಪೆಟ್ರೋನಿಲೋ ಫ್ಲೋರೆಸ್! ಪೆಟ್ರೋನಿಲೋ ಘ್ಲೋರೆಸ್‍ಗೆ ಜಯವಾಗಲಿ’ ಕೂಗಿನ ದನಿ ಆಳ ಕಮರಿಯ ಗೋಡೆಗಳಿಗೆ ಬಡಿದು ಪ್ರತಿದನಿಸುತ್ತಾ ನಾವಿದ್ದ ಮೇಲಿನ ತುದಿ ತಲುಪಿತು....

ಕಲ್ಯಾಣಿ ಮೊದಲು ನಾಗೇಶನ ಅವಸ್ಥೆ ಕಂಡು ಗಾಬರಿಯಾದಳು. ಯಾವ ಮುಚ್ಚುಮರೆಯೂ ಇಲ್ಲದೇ ಅವನು ತನ್ನೀ ಅವಸ್ಥೆಯ ಕಾರಣವನ್ನು ಹೇಳಿದಾಗ ಅವಳಿಗೆ ಸಿಟ್ಟು ತಡೆಯಲಾಗಲಿಲ್ಲ. ಆ ಸಿಟ್ಟನ್ನು ಹೊರಗೆಡಹಲೆಂಬಂತೆ ಅವನನ್ನು ತನ್ನ ಬೂಟುಗಾಲಿನಿಂದ ಬಲವಾಗಿ ಒದ್ದಳು....

ಕಣ್ಣೀರ ಹನಿ ಹನಿಹನಿಸಿ ಬರೆಯುತ್ತಿತ್ತು ಗಲ್ಲದ ಪುಟದ ತುಂಬ ಕರುಳು ಕಲುಕುವ ಕಾವ್ಯ, ಕತೆ, ಕಾದಂಬರಿ. “ಇದನ್ನು ಓದಿಕೋ ಜಗತ್ತೇ?” ಎಂದು ಬೇಡಿಕೊಳ್ಳುತ್ತಿತ್ತು. ಜಗತ್ತು ಮೌನದಲ್ಲಿ ಹೆಪ್ಪುಗಟ್ಟಿತ್ತು. ಕಣ್ಣೀರ ಹನಿ ದ್ರವಿಸಿ ಹರಿದ...

ಪಡು ಬೈಲಲ್ಲಿ ಒಮ್ಮಿಂದೊಮ್ಮೆ ದೊಡ್ಡ ಬೊಬ್ಬೆ ಎದ್ದಿತು. ‘ಪಿಜಿನ ಪೂಜಾರಿ ಬಿದ್ದ! ಮರದಿಂದ ಬಿದ್ದ!’ ಎಂದು. ಉಳುತ್ತಿದ್ದ ಬೊಗ್ಗು ಕೋಣಗಳನ್ನು ನಿಲ್ಲಿಸದೆ ಓಡಿದ; ನೀರು ಮೊಗೆಯುತ್ತಿದ ಜಾರು ಮುಳುಗಿಸಿದ ಮರಿಗೆಯನ್ನು ಅಲ್ಲೇ ಬಿಟ್ಟೋಡಿದ; ಗದ್ದೆಯ ...

ನಾಗೇಶ ಯಾರೂ ಇಲ್ಲದಾಗ ಕರುಣಾಜನಕ ದನಿಯಲ್ಲಿ ತನಗೆ ಹರಿ ಮಾಡಿದ ಅವಮಾನವನ್ನು ವಿವರಿಸಿದ್ದ. ಅದು ಅವಮಾನವಲ್ಲವೆಂದು ಅಂತಹ ಪರಿಸ್ಥಿತಿಗಳಲ್ಲಿ ಹಾಗೇ ಮಾಡಬೇಕಾಗುತ್ತದೆ ಎಂಬುವುದನ್ನು ವಿವರಿಸುತ್ತಾ ಇನ್ನೂ ಅವನು ಏನೇನು ಕಲಿಯಬೇಕೆಂಬುವುದನ್ನು ಹೇಳಿದ...

ಸುಖಿಃ-ದುಃಖಿ ಎರಡು ಜಗದ ಭುಜದಮೇಲೆ ಕೈ ಹಾಕಿಕೊಂಡು ನಡೆಯುತ್ತಿದ್ದವು. ಜಗದ ಬಲ ಭುಜದಲ್ಲಿ ಸುಖಿಃ ಗೆಳಯ ನಿದ್ದ. ಎಡ ಭುಜಕ್ಕೆ ಇದ್ದ ದುಃಖಿ ಗೆಳಯ ಜೋಲು ಮುಖ ಹಾಕಿದ್ದ. ಜಗತ್ತು ಸುಖಿ ಗೆಳೆಯನೊಡನೆ ನಗುತ್ತಲೇಯಿದ್ದ. ದುಃಖಿ ಗೆಳೆಯ ತನ್ನ ಸರದಿಗಾಗ...

ಮನೆಯಿಂದ ಅಣ್ಣ ಕಾಗದ ಬರೆದಿದ್ದರು: ‘ಇಲ್ಲೆಲ್ಲ ಸಿಡುಬಿನ ಗಲಾಟೆ ಬಹಳ ಜೋರಾಗಿದೆ. ಈ ರಜೆಯಲ್ಲಿ ಮನೆಗೆ ಬರಬೇಡ, ಅಲ್ಲೇ ಇರು. ಕ್ರಿಸ್‌ಮಸ್‌ ರಜಾ ಸಿಕ್ಕಿದಾಗ ಬಂದು ಕರೆದುಕೊಂಡು ಬರುತ್ತೇನೆ.’ ಬಹಳ ದಿನಗಳಿಂದ ಬಯಸಿ ಹಂಬಲಿಸಿದ ರಜೆಗೆ ಒಂದೇ ವಾರ ಬ...

1...7071727374...137

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....