
ರಾಮನಿಲ್ಲದ ನಾಡಿನಲ್ಲಿ ರಾಮ ಬಾಣದ ಆರ್ಭಟ ಜುಟ್ಟು ಗಡ್ಡಗಳ ಕಾಳಗದಲ್ಲಿ ರಕ್ತದೋಕುಳಿ ಚೆಲ್ಲಾಟ ರಾಮನಿದ್ದನೋ ಇಲ್ಲವೋ ಮಸೀದಿಯಂತೂ ಬಿದ್ದಿದೆ ಮಂದಿರ ಮೇಲೇಳದಿದ್ದರೂ ಸಿಂಹಾಸನ ದಕ್ಕಿದೆ ಜುಟ್ಟುಗಳ ಆಚೆಗೂ ಜುಟ್ಟುಗಳು ಬೆಳೆದಿದೆ ಗಡ್ಡಗಳ ಆಚೆಗೂ ಗಡ್...
ಮೊಂಜಾವಿನಂದದಿ ಬೆಳಕಾಗಿ ಮೂಡಣದಾ ಇಬ್ಬನಿ ಹನಿಗಳೇ ಮಣಿಮುತ್ತಾಗಿ ಸಿಂಗರಿಸೆ ತಾಯೆ ಹಸಿರ ಹೊನಲಿಗೆ ತಳಿರು ತೋರಣ ನಾಚಿ ತಾಯ ಗುಡಿ ಬಾಗಿಲತೆರೆಯೆ ಮುತ್ತೈದೆಯರು ಪಂಚಮುಖಿ ಆರತಿ ಎತ್ತಿ ನುಡಿದಿಹರು ಚವತಿ ಚುಕ್ಕೆಗಳ ಹರಸಿ || ಸಪ್ತವರ್‍ಣಗಳಿಂದ ಮೂರ್...
ಯೆಂಡ ಯೆಡ್ತಿ ಕನ್ನಡ್ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ! ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ- ತಕ್ಕೊ! ಪದಗೊಳ್ ಬಾಣ! ೧ ಬಗವಂತ್ ಏನ ಬೂಮೀಗ್ ಇಳದು ನನ್ ತಾಕ್ ಬಂದಾಂತ್ ಅನ್ನು; ಪರ್ ಗಿರೀಕ್ಸೆ ಮಾಡ್ತಾನ್ ಔನು- ಬಕ್ತನ್ ಮೇಲ್ ಔನ್ ಕಣ್ಣು! ೨ ‘...
ಅಷ್ಟಷಟ್ಟದಿಯಲ್ಲಿ ಉಯ್ಯಾಲೆಯಾಡುತಿದೆ ಕೌತುಕದ ಬಗೆ; ಹಾಗೆ ಇದು, ಹೀಗೆ ಇದು, ಎನುತ ಜೀಕುಜೀಕಿನ ವಿಲಾಸದಲಿ ತನ್ಮಯವಾಗಿ, ಸಂಶಯವೆ ಸಿಂಗಾರವಡೆದು ಸ್ವಚ್ಛಂದದಲಿ ಬೀರಿದುದೆ ನೋಟ, ಹಾರಿದುದೆ ಹುಬ್ಬೆನುವಂತೆ ಕುಣಿಸುತಿದೆ ಅಂಗಾಂಗ; ಹೃದ್ಯ ಚಿತ್ತತರಂಗ...
ಹಾರಿಬಂತೋಂದು ಹಕ್ಕಿ ಸಂಜೆಯಲಿ ಮೈದಪ್ಪಿ ಒಳಗೆ ಹಾರಿಬಂತೊಂದು ಹಕ್ಕಿ. ಹೊರ ಹೋಗಲರಿಯದೆ ತನ್ನವರ ಕಾಣದೆ ಬಂದ ಬಗಯರಿಯದೆ ಅತ್ತಿತ್ತ ನೋಡುತಿದೆ ಭಯದಿಂದ ನಡುಗುತಿದೆ. ಇವರಾರೊ ಹೊಸಬರು ತನ್ನನಿವರರಿಯರು ಮೊದಲಿವರು ಕಾಣರು ಬಂಧನದಿ ಬದುಕುವರು ತನ್ನ ಸೆ...
ಜಾಣ ಕುಂಬುರನ ಮನಿ ಯಾವ ಕಡಿಗಽದ ಕಪ್ಪುರದ ತಿಪ್ಪಿ ಎಡಽ ಬಲಽ| ಸೋ ||೧|| ಕಪ್ಪುರದ ತಿಪ್ಪಿ ಎಡ ಬಲ ಮಾಡಿಕೊಡು| ಜಾಣ ಕುಂಬಾರನಽ ಮನಿಽಗ್ವ್ಹಾದಽ| ಸೋ ||೨|| ಮುಂಜಾಳಿ ಕುಂಬಾರಣ್ಣಾ ಮಸರ ಬೋನುಂಡಾನ| ಹಾರ್‍ಯಾರಿ ಕೆಸರ ತುಳಽದಾನಽ| ಸೋ ||೩|| ಹಾರಿ ಹ...
ಹೊಲೆಯನಾರೂರ ಹೊರಗಿರುವವನೆ ಗೆಳೆಯ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ||ಪಲ್ಲ|| ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ| ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುನವ ಹೊಲೆಯ ||೧|| ...
(ವಿಸ್ತೃತ ಕವನ) ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು || ಆಕಾಶವು ಅತ್ತಿದೆ ಧರೆ ಧಗಧಗ ಉರಿದಿದೆ ಪಂಚಭೂತ ನಮ್ಮ ನೋಡಿ ನೇಣುಗಂಬ ಹುಡುಕಿದೆ ಉಳಿಯಲಿಲ್ಲಿ ಎಲ್ಲ ಎಲ್ಲ ಬದುಕಲಿ ನಮ್ಮ ಸಾವು ನೋಡಿ ...













