ನಂ ದೇವ್ರು ಮುನಿಯ

ಕೈ ಮುಗದು ಕರ್‍ಪೂರ ಅಚ್ಚಿ
ಕಾಸ್ಕೊಟ್ಟು ತಂಗನಕಾಯ್ ಚಚ್ಚಿ
ಅಡ್ಬಿದ್ರೆ ಕಲ್ಲೆಲ್ಲ ದೇವ್ರೆ!
ಇಲ್ದಿದ್ರೆ-‘ಜಾಕರ್ರ್ ಆವ್ರೆ!’ ೧

‘ಮುನ್ಯಣ್ಣ!’ ಅಂದ್ಕೊಂಡಿ ಬಂದಿ
ಝಲ್ ಝಲ್ನೆ ರೂಪಾಯ್ಗೋಳ್ ತಂದಿ
ಸುರಿತಿದ್ರೆ ಕೊಡತೌನೆ ಯೆಂಡ!
ಇಲ್ದಿದ್ರೆ ತರತೌನೆ ದಂಡ! ೨

ಮುನಿಯಂಗು ಆ ದೇವರ್‍ಗೂನೆ
ಯೆತ್ವಾಸಾನ್ ಏನೇಳ್ ನೋಡಾನೆ!
ಕಾಯ್ ಕೊಟ್ರೆ ದೇವು ಪರ್‍ಚಂಡ!
ಕಾಸ್ ಕೊಟ್ರೆ ಮುನಿಯನ್ದು ಯೆಂಡ! ೩

ದೇವ್ರನಕ ಕೊಡಲಿ ಕೊಡದಿರ್‍ಲಿ
ಮಾಡ್ತಾರೆ ಔನ್ಗೆ ನಂಸ್ಕಾರ;
ಮುನ್ಯ ಯೆಚ್ಚಳ್ತೆ ಬುಡದಿರ್‍ಲಿ
ಮಾಡ್ತಾರೆ ಔನ್ಗೆ ಸಂಸ್ಕಾರ! ೪

ಮುನಿಯಣ್ಣ! ನೀ ನಮಗೆ ದೇವ್ರು!
ನಾವನಕ ದಿನಾ ಬರಾವ್ರು!
ಕೊಡದಿದ್ರೆ ಯೆಚ್ಚಳತೆ ಯೆಂಡ-
ನಾವ್ ಕೊಡೊ ದುಡ್ ನಿಂಗೆ ದಂಡ! ೫
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರತ್ನಾಕರ
Next post ಪದ್ಯಗದ್ಯಗಳ ರಾಷ್ಟ್ರೀಯತೆ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…