
ಸಂಭ್ರಮದಲಿ ಬೆಳಕ್ಕಿ ಸಾಲು ರೆಕ್ಕೆ ಬಿಚ್ಚಿ ಬಾನು ತುಂಬ ಹಾರಾಡಿ ತಣಿ ತಣಿದು ಊರ ಹೊಲಗದ್ದೆಗಳ ಸ್ಪರ್ಶಿಸಿ ಬೆಟ್ಟದ ಮೇಲೆ ನೆರಳು ಹಾಯಿಸಿದವು. ಎಲ್ಲಾ ಜೀವಿಗಳ ನಿಟ್ಟುಸಿರು ಹೊತ್ತ ಮೋಡಗಳು ಮಳೆ ಬೀಜ ಬಿತ್ತಿವೆ ಆಷಾಢದ ಸಂಭ್ರಮ ಸಜ್ಜಾಗಿದೆ ಗಡಿಯಾರ...
ಹಗಲ ಹೊನ್ನಿನ ಕಿರಣರಾಸಿಯ ಬೆಳಕು ಕತ್ತಲ ಮಡಿಲಲಿ ಮಲಗಿ ನಿದ್ರಿಸೆ ಸಂಜೆರಾಗದ ಜೋಗುಳದ ಸವಿನುಡಿಯಲಿ, ಗಾಳಿ ತೂರಿದೆ ಮೇಘಮಾಲೆಯ ಮುಗಿಲ ಮಂಟಪ ಗೆಜ್ಜೆಗೆ ಮಾಲೆಯಾಗಿದೆ ನಿಶೆಯ ಒಲವಿನ ರವಿಯ ನೀರವ ಸೆಜ್ಜೆಗೆ! ಹೊನ್ನ ಹೊರಗನು ತೊರೆದು ಭೂಮಿಯು ಬಣ್ಣ ಬ...
ದಾರಿ ತೋರಿದವ- ನಭಿಮನ್ಯುವಲ್ಲ ಅಖ್ತರ್ ಹುಸೇನ ಈತ ಒಳ ನುಗ್ಗಿದಂತೆ ಹೊರ ಬರಬಲ್ಲ- ನಾದರೂ ಬೇಕೆಂದೆ ಒಳಗೇ ಉಳಿದಿರುವನು ಎಷ್ಟೋ ಕಾಲದಿಂದ ಸಂದಿಗೊಂದಿಯ ಹಾದು ಕತ್ತಲಿಗೆಡವಿ ಗೋಡೆಗಳ ತಡವಿ ಅಂತೂ ಹೊರಬಂದೆವು ಬಚಾವೆಂದು ನೋಡಿದರೆ ಅಲ್ಲಿ ಮತ್ತವನೆ ಅಖ...
ಲೆಕ್ಕ ಹಾಕಿಲ್ಲ ಎಷ್ಟು? ಲೆಕ್ಕಕ್ಕೆ ಸಿಗದವುಗಳೆಷ್ಟೋ? ಹೆತ್ತ ಕಂದಮ್ಮಗಳನ್ನೆ ಹೆಣ್ಣೆಂದು ಜರೆದು ಹೆರಳು ಹಿಡಿದು ಕುಟುಕಿದ ಹೆಂಬೇಡಿಗಳೆಷ್ಟು? ಮುಗ್ಧ ಪ್ರೇಮದ ಗೀತೆಗೆ ಮದಿರೆ ಹಾಡನು ಕೂಡಿಸಿ ಮಂಚಕ್ಕೆ ಎಳೆದು ಮಾನ ಪ್ರಾಣ ಮರ್ಧಿಸಿದ ನಯವಂಚಕರೆಷ್...
ಬರಲಿಲ್ಲ ನನ್ನವ ಬರಲಿಲ್ಲ ಏಕವ್ವ ಬರದೇ ಕಾಡುವನೇಕೆ ಬರಿದಾಗಿದೆ ಎನ್ನ ಮನವು ಅರಿಯನೇಕೆ ಅವ || ಸೊಬಗಿಲ್ಲ ಗೆಲುವಿಲ್ಲ ಒಲವಿಲ್ಲ ನೆಲವಿಲ್ಲ ಕಣ್ತುಂಬಿ ನಿಂದು ಸೆರೆಯಾಗಿದೆ ಮನ ಕಾಣದಿಹನೇಕೆ ಅವ || ಕನಸಲ್ಲಿ ನನಸಲ್ಲಿ ವಿರಹದಾ ನೋವಲ್ಲಿ ಸರಸ ಸಲ್ಲಾ...
ಬಂದೇ ಬರುವುವು ಬಂಗಾರದ ಹೊಂಗಿರಣದ ನಾಳೆಗಳು, ಬಣ್ಣ ಬಣ್ಣದಾ ಬದುಕನು ಬರೆಯಲು ತೆರೆದಿದೆ ಹಾಳೆಗಳು. ಎಲ್ಲೆಲ್ಲೂ ಹೊಗೆಯಾಡಿದೆ ನೋವೇ ಅಳುಕದಿರಲಿ ಮನವು, ಕಲಕದೆ ಬಾಳು ತಿಳಿವುದೆ ಹೇಳು ಜಗದ ದುಃಖ ನೋವು? ನಾಳೆಯ ಬಾಳಿನ ಸವಿಯನು ಕನಸದ ಜೀವವಿಲ್ಲ ಜಗದ...
ಹೈದರ್‌ಗುಡದಲ್ಲೊಬ್ಬ ಹೈದನಿದ್ದನು ನೋಡು ಹಲವು ವರ್ಷಗಳ ಕಾಲ ಮಾತಿಲ್ಲ ಕತೆಯಿಲ್ಲ ಯಾರೇನ ಕೇಳಿದರು ಮೌನವೇ ಉತ್ತರವು ಕೊನೆಗೊಬ್ಬ ಬೈರಾಗಿ ಆ ದಾರಿ ಬಂದವನು ಕೊಟ್ಟನು ಹಿಡಿ ರಾಗಿ ಏನಾಶ್ಚರ್ಯ! ಬಾಲಕನು ಒಮ್ಮೆಲೇ ಮಾತಾಡತೊಡಗಿದನು ಏನು ವ್ಯಾಕರಣ ಶುದ್...













