ಕವಿತೆ

ಕಿವೀಗೆ ರಿಂಗು ಕೊಡಿಸಣ್ಣ ಕಾಲಿಗೆ ಉಂಗುರ ಇಡಿಸಣ್ಣ ಕೈಗೆ ಬಳೇನ ತೊಡಿಸಣ್ಣ ತಟ್ಟೆಗೆ ತಿಂಡಿ ಬಡಿಸಣ್ಣ ಹಾಕಣ್ಣಾ ಹಾಕಣ್ಣಾ ಹತ್ತೇ ಜಿಲೇಬಿ ಸಾಕಣ್ಣಾ ಕೈಗೆ ಗೋಲಿ ಬರಬೇಕು ಫುಟ್‌ಬಾಲ್ ಕಾಲಿಗೆ ಸಿಗಬೇಕು ಬಲೂನು ಗಾಳಿಗೆ ಬಿಡಬೇಕು ಬಾಯಿಗೆ ಜಿಲೇಬಿ ಇಡ...

“ಮನೆಗೆ ಮಾತ್ರ ಕಿಟಕಿ ಇದೆ ನಮಗೆ ಕಿಟಕಿ ಇಲ್ಲ” “ನಮಗೂ ಕೂಡ ಕಿಟಕಿ ಇದೆ ನಿನಗದು ತಿಳಿದಿಲ್ಲ” “ನಮಗೆ ಕಿಟಕಿ ಎಲ್ಲಿ ಇದೆ?” “ಮನಸಿನಾಳದಲ್ಲಿ, ನೋಡಲಿಕ್ಕೆ ಬರದ ಹಾಗೆ ಎದೆಯ ಗೂಡಿನಲ್ಲಿ” ...

ಹುಲಿಯಣ್ಣಾ ಹುಲಿಯಣ್ಣಾ ಕಾಡಿಗೆ ನೀನೇ ಹಿರಿಯಣ್ಣ! ಆದರು ನೀನು ಕಾಡಲ್ಲೇ ಇರು ಊರಿನೊಳಗೆ ಬರಬೇಡಣ್ಣ! ಹುಲಿಯಣ್ಣಾ ಹುಲಿಯಣ್ಣಾ ಎಂಥಾ ಮೀಸೆ ನಿನಗಣ್ಣ! ಎಂಥಾ ಬಾಯಿ ಎಂಥಾ ಹಲ್ಲು ಎಂಥಾ ಗರ್ಜನೆ ನಿನದಣ್ಣ! ಹುಲಿಯಣ್ಣಾ ಹುಲಿಯಣ್ಣಾ ಫಳ ಫಳ ಗಾಜಿನ ಕಣ್ಣ...

ಅಮ್ಮನಿಗಿಂತಾ ದೇವರು ಇಲ್ಲ ಅಪ್ಪನಿಗಿಂತಾ ದೊಡ್ಡೋರಿಲ್ಲ ಟೀಚರ್‌ಗಿಂತಾ ಒಳ್ಳೇವ್ರಿಲ್ಲ ಅಲ್ವೇನೇಮ್ಮಾ? ನಾವು ಒಳ್ಳೇವ್ರಾಗ್ಲಿ ಅಂತ ವಿದ್ಯೆ ಬುದ್ದಿ ಬರ್‍ಲಿ ಅಂತ ಎಷ್ಟೊಂದ್ ಕಷ್ಟ ಪಡ್ತಾರಲ್ವೇ ಅಪ್ಪ ಅಮ್ಮ? ಬೆಳಿಗ್ಗೆ ಬೇಗ ಎದ್ಬಿಟ್ಟು ಪಾಠ ಎಲ್ಲ...

ಗೇರ್‍ ಗೇರ್‍ ಮಂಗಣ್ಣ ಕಡ್ಲೇಕಾಯ್ ನುಂಗಣ್ಣ ಕೊಂಬೆಯಿಂದ ಕೊಂಬೆಗೆ ಹೈಜಂಪ್ ಮಾಡೋ ಹನುಮಣ್ಣ! ಆಟಕ್ ಕರಕೋ ನನ್ನೂನೂ ಲಾಗ ಹಾಕ್ತೀನ್ ನಾನೂನೂ, ಜೀಬಿನ ತುಂಬ ತಿಂಡೀನ ತಂದೀದೀನಿ ನಿನಗೂನೂ! ಬೇರೆ ಕೋತಿ ಬೆನ್ನಿಂದ ಹೇನು ಹೆಕ್ಕೋದ್ ಯಾಕಪ್ಪ? ಹೆಕ್ಕಿ ಅ...

ಜಾತಿ ಗೀತಿ ಎಂಬುದೆಲ್ಲ ಸುಳ್ಳು, ಕಂದ ಸುಳ್ಳು. ಮೇಲು ಕೀಳು ಎಂಬ ಮಾತು ವಿಷ ಸವರಿದ ಮುಳ್ಳು. ನೀತಿ ನಡತೆ ಹೃದಯ ಇರುವ ಮಾನವನೇ ಹಿರಿಯ, ನಂಬಬೇಡ ಭೇದದ ವಿಷ ಕುಡಿಸುವಂಥ ನರಿಯ! ಸುತ್ತ ಇರುವ ಸಸ್ಯ ಪ್ರಾಣಿ ನಮ್ಮಂತೇ ಅಂದುಕೊ ನಮ್ಮ ಹಾಗೆ ಅವಕೂ ಸಹ ಜ...

“ಗಿಡ, ಮರ, ಪ್ರಾಣಿ ಎಲ್ಲ ನಮ್ಹಾಗೇನಮ್ಮಾ? ಹೊಡದ್ರೆ ಬೈದ್ರೆ ಅವಕ್ಕೂ ನೋವು ಆಗತ್ತೇನಮ್ಮ?” “ಹೌದು ಮರಿ, ಮರ ಗಿಡ ಎಲ್ಲಾ ನಮ್ಮಂತೇ ಪ್ರಾಣೀನ್ ಕೂಡ ನೋಡ್ಕೋಬೇಕು ಮನೇ ಮಕ್ಳಂತೆ.” “ಮತ್ಯಾಕ್ ಅವು ನಮ್ಹಾಗೇನೇ ಮ...

ಟಾಮೀ ಟಾಮೀ ನಮ್ಮನೆ ನಾಯಿ ಚುರುಕು ಅಂದರೆ ಚುರುಕು, ಆದರೆ ಸದಾ ಬೊಗಳುತ್ತಿರುವುದು ಅದರ ಬಾಯೇ ಹರಕು! ತಿಂಡಿ ಎಂದರೆ ಕಿವಿಯನು ಎತ್ತಿ ಬಾಲ ಕುಣಿಸುವುದು, ವಾಸನೆ ಬಂದರೆ ಅಡಿಗೇ ಮನೆಗೇ ಸೀದಾ ನುಗ್ಗುವುದು! ಅಜ್ಜಿ ಮಡಿಯಲಿ ಬಂದರೊ ಟಾಮಿ ಓಡಿ ಮುಟ್ಟು...

“ಒಂದು ಎಲ್ಲಕ್ಕಿಂತ ಮೊದಲು ಬರತ್ತೆ ಅಲ್ವೇನೋ? ಆಮೇಲ್ ಎರಡು ಮೂರು ನಾಲ್ಕು ಐದು, ಸರಿಯೇನೋ? ಹೇಳ್ಲ ಈಗ ಒಟ್ಟಾಗ್ ಮತ್ತೆ ಕಲಿತದ್ದೆಲ್ಲಾನೂ? ಒಂದು ಎರಡು ಮೂರು ನಾಲ್ಕು ಐದು-ಮುಂದೇನು?” “ಐದು ಆದ್ಮೇಲೆ ಹೇಳ್ಬೇಕಾದ್ದು ಆರು ಏ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...