ಕಿವೀಗೆ ರಿಂಗು ಕೊಡಿಸಣ್ಣ
ಕಾಲಿಗೆ ಉಂಗುರ ಇಡಿಸಣ್ಣ
ಕೈಗೆ ಬಳೇನ ತೊಡಿಸಣ್ಣ
ತಟ್ಟೆಗೆ ತಿಂಡಿ ಬಡಿಸಣ್ಣ
ಹಾಕಣ್ಣಾ ಹಾಕಣ್ಣಾ
ಹತ್ತೇ ಜಿಲೇಬಿ ಸಾಕಣ್ಣಾ

ಕೈಗೆ ಗೋಲಿ ಬರಬೇಕು
ಫುಟ್‌ಬಾಲ್ ಕಾಲಿಗೆ ಸಿಗಬೇಕು
ಬಲೂನು ಗಾಳಿಗೆ ಬಿಡಬೇಕು
ಬಾಯಿಗೆ ಜಿಲೇಬಿ ಇಡಬೇಕು
ಬರಬೇಕು ಬರಬೇಕು
ಬರೋರು ತಿಂಡಿ ತರಬೇಕು.

ಒಳ್ಳೇ ಸ್ಕೂಲು ಸಿಗಲಪ್ಪ
ಒಳ್ಳೇ ಮೇಡಂ ಬರಲಪ್ಪ
ಪಾಠ ಚೆನ್ನಾಗ್ ಹೇಳ್ಲಪ್ಪ
ಪ್ರೀತಿ ಮಾತನ್ ಆಡ್ಲಪ್ಪ
ಆಗ್ಲಪ್ಪಾ ಆಗ್ಲಪ್ಪಾ
ಫಸ್ಟ್‌ಕ್ಲಾಸ್ ಪಾಸು ಆಗ್ಲಪ್ಪಾ
*****