ಕವಿತೆ

ಎಷ್ಟೊಂದಿವೆ ವಜ್ರದ ಬೊಟ್ಟು ಅಟ್ಟಲ ಮೇಲೆ ಎತ್ತಿಟ್ಟು ಹೋಗಿದ್ದಾರೆ ಹೊರಗೆಲ್ಲೋ ಕೈಗೆ ಸಿಗುವಂತಿಲ್ವಲ್ಲೋ! ಅವಕ್ಕೆ ಹಗಲು ಆಗೋಲ್ಲ ರಾತ್ರಿಯಲ್ಲೇ ಮಾತೆಲ್ಲ ಮೈಯನು ಕುಲುಕಿ ನಗುತಾವೆ ಕಂಬನಿ ಚೆಲ್ಲಿ ಅಳುತಾವೆ. ನಾ ಯಾರೆಂದು ಗೊತ್ತಾಯ್ತ? ಅಥವಾ ಬುದ...

ಅಮ್ಮ ತಬ್ಕೊಂಡ್ ಕೊಡೋ ಮುತ್ತು ಜಾಮೂನಪ್ಪ ಜಾಮೂನು, ಮಿಸ್ಸು ಹೇಳೋ ಕಥೆಗಳ ಮುಂದೆ ತುಂಬಾ ಸಪ್ಪೆ ಬೆಲ್ಲಾನೂ! ಬುದ್ಧಿ ಮಾತನ್ ಒದ್ದು ಹೇಳೋದ್ ಅಪ್ಪ ಅಲ್ದೆ ಯಾರು? ಆಗಿದ್ಹಂಗಿರುತ್ತೆ ಒಂದೊಂದ್ ಮಾತೂ ಹಾಗಲಕಾಯಿ ಚೂರು! ಮಕ್ಳು ಅಂದ್ರೆ ಅಜ್ಜೀಗ್ ಮುದ...

ನಮ್ಮ ಮನೆಯ ಪುಟ್ಟ ಬೆಕ್ಕು ಬಿರ್ಜು ಅದರ ಹೆಸರು ಭಾಳ ಇಷ್ಟ ಬಿರ್ಜೂಗೆ ಗಟ್ಟಿ ಹಾಲು ಮೊಸರು. ಬಿರ್ಜುಗಿದೆ ಗಾಜುಗಣ್ಣು ಗೋಲಿಯಂತೆ ಫಳ ಫಳ, ಅದರ ಬಣ್ಣ ಸೇಬಿನ್ಹಣ್ಣು ರೇಶ್ಮೆಯಂತೆ ಥಳ ಥಳ, ಮಲಗಿದ್ದರೆ ಪುಟ್ಟ ಹುಲಿ ಓಡುತಿದ್ರೆ ಚೂಪು ಇಲಿ ರಾತ್ರಿ ಇ...

ನಮ್ ಸ್ಕೂಲಂಥ ಒಳ್ಳೇ ಸ್ಕೂಲು ಇಲ್ಲ ಎಲ್ಲೂನೂ ಇಲ್ವೇ ಇಲ್ಲ ಇಂಥ ಮಿಸ್ ಲಂಡನ್ನಲ್ಲೂನೂ! ಬೆಳಗಾದರೆ ಸಾಕು ಸ್ಕೂಲಿಗೋಡುವ ಆಸೆ ಠಾಕುಠೀಕು ಯೂನಿಫಾರಂ ಹಾಕುವ ಆಸೆ ಸ್ಕೂಲಿನ್ ಹೊರಗೆ ಕೇಕೆ ಹಾಕಿ ಕುಣಿಯುವ ಆಸೆ ಅದಕ್ಕೆ ಸ್ಕೂಲಿಗೆ ಓಡ್ತೀವಿ ತಿನ್ನದೆ ದ...

ನೆಲ: ನಿನ್ ಬೇರನ್ನ ಹೊಟೇಲಿಟ್ಟು ಕಾಪಾಡ್ತೀನಿ ನಾನು, ಆದ್ರೂ ನನ್ಮೇಲ್ ಒಣಗಿದ ಹೂವು ಎಲೆ ಚೆಲ್ತೀ ನೀನು! ಮರ: ಬಿಸಿಲಲ್ಲಿ ನೀ ಕಾಯದ ಹಾಗೆ ಬೇಯದ ಹಾಗೆ ದಿನವೂ ತಂಪಾಗಿರೋ ನೆರಳನ್ನೂ ಸಹ ಚೆಲ್ತೀನಲ್ಲ ನಾನು? ಮೋಡ: ಮಳೆಗಾಲ್ದಲ್ಲಿ ನೀರನ್ ಸುರಿಸಿ ಒ...

ಎಲ್ಲರಿಗಿಂತ ಎತ್ತರ ಯಾರು? ಕಾಡಿನ ಆನೆ! ಎಲ್ಲರಿಗಿಂತ ಚಿಕ್ಕೋರ್‍ ಯಾರು? ಗೂಡಿನ ಇರುವೆ? ಎಷ್ಟು ತಿಂದರೂ ತುಂಬದು ಯಾವುದು? ತೋಳನ ಹೊಟ್ಟೆ! ಏನನ್ ಕಂಡ್ರೆ ಮೈ ಕೈ ನಡುಕ ಹುಲಿ ಮೈ ಪಟ್ಟೆ! ಭಾರೀ ಜೋರಾಗ್ ಓಡೋದ್ ಯಾರು? ಜಿಂಕೆ ಅಲ್ವಾ? ತಿಂಡೀನಲ್ಲೇ...

ಬಾರೋ ಗುಂಡ ಕೂಳಿಗೆ ದಂಡ ಅನ್ನಿಸಿಕೊಂಡವನೇ ಅಂಡಾಬಂಡ ಆಟ ಆಡಿ ಎಲ್ಲರ ಗೆಲ್ಲೋನೇ. ಕೋತಿ ಹಾಗೆ ಹಲ್ ಹಲ್ ಕಿರಿದು ಪರಚಕ್ ಬರೋವ್ನೇ ಬೊಗಸೆ ತುಂಬ ಮಣ್ ತುಂಬ್ಕೊಂಡು ಎರಚಿ ಓಡೋವ್ನೇ. ರಸ್ತೇಲ್ಹೋಗೋ ಎಮ್ಮೇ ಮೇಲೆ ಸವಾರಿ ಮಾಡೋವ್ನೇ ಕತ್ತೇ ಬಾಲ ಎಳೆಯೋಕ...

“ರಾತ್ರಿ ಹಗಲು ಎರಡೂನೂ ಒಂದರ ಹಿಂದೆ ಮತ್ತೊಂದು ಬರ್‍ತಾನೇ ಇರ್‍ತಾವೆ, ಯಾತಕ್ ಆ ಥರ ಮಾಡ್ತಾವೆ?” “ರಾತ್ರಿ ಹಗಲು ಮಾತ್ರಾನೇ ಆ ಥರ ಸುತ್ತೋದಲ್ಲಣ್ಣ, ಇಡೀ ಜಗತ್ತೇ ಆ ರೀತಿ ಸುತ್ತು ಹಾಕ್ತಾ ಇದೆಯಣ್ಣ! ಬೇಸಿಗೆಯಾಯ್ತೋ ಮಳೆಗಾ...

ಛುಕ್ಕು ಛುಕ್ಕು ರೈಲು ಬಂತು ಸೀಟಿ ಊದುತ, ಸಿಗರೇಟ್ ಸೇದೋ ಹಾಗೆ ಕೊಳವೀಲ್ ಹೊಗೇ ಬಿಡುತ್ತ! ಎದೇ ತುಂಬ ನಿಗೀ ನಿಗೀ ಕೆಂಡ ಇಟ್ಕೊಂಡು ಸಾವಿರಾರು ಜನಾನ್ ತನ್ನ ಹೊಟ್ಟೇಗ್ಹಾಕ್ಕೊಂಡು! ರೈಲು ಹೋಗ್ತಾ ಇದ್ರೆ ಊರಿಗ್ ಊರೇ ಸುತ್ತುತ್ತೆ ಮರ ಗಿಡ ಬೆಟ್ಟ ಎ...

ಡೊಳ್ಳೂಹೊಟ್ಟೆ ಗುಂಡನ ಮನೆ ಭಾಳ ಹತ್ರ ಸ್ಕೂಲಿಗೆ, ಆದರೂನು ದಿನಾ ಅವನು ತುಂಬ ಲೇಟು ಕ್ಲಾಸಿಗೆ. ಹಂಡೆಯಂಥ ಹೊಟ್ಟೆ ಹೊತ್ತು ಬಲು ನಿಧಾನ ನಡೆವನು, ಗಂಟೆಗೊಂದು ಹೆಜ್ಜೆಯಿಟ್ಟು ಕಷ್ಟಪಟ್ಟು ಬರುವನು. ಮಗ್ಗಿ ಬರೆಯೊ ಗುಂಡ ಅಂದ್ರೆ ಬಗ್ಗಲಾರೆ ಎನುವನು,...

1...2324252627...31

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...