ನಮ್ ಸ್ಕೂಲಂಥ ಒಳ್ಳೇ ಸ್ಕೂಲು
ಇಲ್ಲ ಎಲ್ಲೂನೂ
ಇಲ್ವೇ ಇಲ್ಲ ಇಂಥ ಮಿಸ್
ಲಂಡನ್ನಲ್ಲೂನೂ!

ಬೆಳಗಾದರೆ ಸಾಕು ಸ್ಕೂಲಿಗೋಡುವ ಆಸೆ
ಠಾಕುಠೀಕು ಯೂನಿಫಾರಂ ಹಾಕುವ ಆಸೆ
ಸ್ಕೂಲಿನ್ ಹೊರಗೆ ಕೇಕೆ ಹಾಕಿ ಕುಣಿಯುವ ಆಸೆ
ಅದಕ್ಕೆ ಸ್ಕೂಲಿಗೆ ಓಡ್ತೀವಿ ತಿನ್ನದೆ ದೋಸೆ!

ಸ್ಕೂಲಿನಲ್ಲಿ ನಮಗಾಗೇ ಕಾಯುವ ಮಿಸ್ಸು
ನೋಡಿದ್ ಕೂಡ್ಲೇ ಬಂದ್ಯಾ ಮರೀ ಅನ್ನುವ ಮಿಸ್ಸು
ಅಮ್ಮನ್ ಹಾಗೆ ಕೆನ್ನೆ ಸವರಿ ನಗಿಸುವ ಮಿಸ್ಸು
ಮಿಸ್ ಇಲ್ದೆ ಹೋದ್ರೆ ಸ್ಕೂಲಿನ್ ಕಳೆಯೇ ಮಿಸ್ಸು!

ಮಿಸ್ ಮಿಸ್ ಬನ್ನಿ
ಬಾ ಚಿನ್ನ ಅನ್ನಿ,
ನಿಮಗಾಗೇ ತಂದಿದೀನಿ
ಈ ಸ್ವೀಟು ತಿನ್ನಿ.
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)