Home / ಬಾಲ ಚಿಲುಮೆ

ಬಾಲ ಚಿಲುಮೆ

ಯಾರೀ ಚಿಣ್ಣ ಕೇದಗೆ ಬಣ್ಣ ಘಮ ಘಮ ಬಂಗಾರ ಸಣ್ಣ! ನಕ್ಕರೆ ಬಿಚ್ಚಿದಂತೆಲ್ಲೂ ಬೆಳಕಿನ ಪತ್ತಲವನ್ನ! ಹಕ್ಕಿಯ ಕಂಠ, ಕಾರಂಜಿ ಸೊಂಟ ರಂಭೆ ಊರ್ವಶಿಯರ ನೆಂಟ ಹೊದಿಕೆಯ ಒದೆದು, ಹೂಗಾಲ ಎಳೆದು ಬಡಿಯುವ ಹನುಮನ ಬಂಟ! ಮಿದುಬಾಯಿ ಹಚ್ಚಿ, ಎದೆ ಹಿಗ್ಗ ಕಚ್ಚಿ ...

ಮಲಗೆನ್ನ ಮುದ್ದುಮರಿ ಚಿನ್ನ ನಿದ್ದೆ ನೇವರಿಸುತಿದೆ ಕಣ್ಣ ನಡುರಾತ್ರಿ ದಾಟುತಿದೆ ಗಡಿಯ ಇರುಳು ಬಿಚ್ಚಿದೆ ಕಪ್ಪು ಜಡೆಯ ಲೋಕವೇ ಮಲಗಿರಲು ಹೊದ್ದು ಆಟ ಸುರುಮಾಡುವರೆ ಮುದ್ದು? ಕಣ್ಣೆ ಇದು, ಕಾಂತಿಯಾ ಚಿಲುಮೆ ಹುಣ್ಣಿಮೆಗು ಇಲ್ಲ ಈ ಹಿರಿಮೆ ನಿನ್ನ ಕ...

ಬಂದಾನೊ ದೇವರೇ ಬಂದಾನೋ-ಬಂದಾನೋ ಬಂದಾನೊ ಸ್ವಾಮಿ ಬಂದಾನೋ-ಬಂದಾನೋ ಉಡುಪಿಯ ಕೃಷ್ಣನೆ ಬಂದಾನೋ – ಬಂದಾನೋ ಕೈಯಲ್ಲಿ ಕಡೆಗೋಲ ಹಿಡಿದ್ಯಾನೋ – ಹಿಡಿದ್ಯಾನೋ ಸೊಂಟಕೆ ಉಡಿದಾರ ತೊಟ್ಯಾನೋ – ತೊಟ್ಯಾನೋ ಕಾಲಿಗೆ ಕಿರುಗೆಜ್ಜೆ ಕಟ್ಯಾ...

ಬಾರೋ ಬಾರೋ ಮಳೆರಾಯ – ಮಳೆರಾಯ ಬಾಳೇ ತೋಟಕೆ ನೀರಿಲ್ಲಾ – ನೀರಿಲ್ಲಾ ಹುಯ್ಯೋ ಹುಯ್ಯೋ ಮಳೆರಾಯಾ – ಮಳೆರಾಯಾ ಹೂವಿನ ತೋಟಕೆ ನೀರಿಲ್ಲಾ – ನೀರಿಲ್ಲಾ ತೋರೋ ತೋರೋ ಮಳೆರಾಯಾ – ಮಳೆರಾಯಾ ತೆಂಗು ಅಡಿಕೆ ತಣಿದಿಲ್ಲಾ...

ತೋಳ್ ತೋಳ್ ತೋಳೆ ತೋಳ್ ಅಮ್ಮನ್ ತೋಳೆ ತೋಳನಾಡಿಸಿ ಬರುವಾಗ ಮಾಳಮಡ್ಡಿ ಮರದಲ್ಲಿ ಕೋತಿ ರಾಗ ಹಾಕ್ತಿತ್ತು ಓತಿಕೇತ ನೋಡ್ತಿತ್ತು ಕಾಗೆ ಕ್ರಾಕ್ರಾ ಅಂತಿತ್ತು ಗುಬ್ಬಿ ಚಿಂವ್ ಚಿಂವ್ ಗುಡುತಿತ್ತು ಸಿಂಹದ ಮದುವೇಗ್ ಹೋಗಿದ್ದ ಕರಡಿ ಕೂಡ ಬಂದಿತ್ತು ಅಜ್...

ಅಲ್ಲಿ ನೋಡು, ಇಲ್ಲಿ ನೋಡು, ಸಂಪಿಗೆ ಮರದಲ್ಲಿ ಗುಂಪು ನೋಡು ಯಾವ ಗುಂಪು? ಕಾಗೆ ಗುಂಪು ಯಾವ ಕಾಗೆ? ಕಪ್ಪು ಕಾಗೆ ಯಾವ ಕಪ್ಪು? ಸಾದುಗಪ್ಪು ಯಾವ ಸಾದು ಹಣೆಯ ಸಾದು ಯಾರ ಹಣೆ ನಮ್ ಪುಟಾಣಿಯ ಹಣೆ ನಮ್ ಬಂಗಾರಿಯ ಹಣೆ *****...

ಅರುಣೋದಯವು ಮುಗಿದು ಮರಿಸೂರ್ಯ ಹೊರಬಂದ ಥರಥರಾವರಿ ಅವನ ಸೌಂದರ್‍ಯ-ಚಿನ್ನದ ಹರಿವಾಣದಂತೆ ಹೊಳೆಯುವನು ಎತ್ತಿ ಬಡಿವನು ಕಂದ ಹತ್ತಿದಿಂಬಿಗೆ ಕಾಲ ಉಕ್ಕಿ ಬೀಸುವನು ತೋಳನು – ಗಾಳಿಯಲಿ ಹಕ್ಕಿ ಹಾರುವುದು ಬಾನಲ್ಲಿ! ಬಣ್ಣ ಬಣ್ಣದ ಟೋಪಿ ತನ್ನ ತಲ...

ಆನಿ ಬಂತಾನಿ ಯವೂರಾನಿ? ಸಿದ್ಧಾಪುರದಾನಿ ಇಲ್ಲಿಗ್ಯಾಕ್ ಬಂತು? ಹಾದಿ ತಪ್ಪಿ ಬಂತು ಹಾದಿ ಯಾಕೆ ತಪ್ಪಿತು? ಕಬ್ಬಿನಾಸೆ ಎಳೆಯಿತು ಬಾಲ ಬೀಸಿಕೊಂಡು ಊರ ನಡುವೆ ಬಂದು ಬಿಟ್ಟಿತು? ಪುಟ್ಟ ಪುಟ್ಟ ಕಣ್ಣು ಮುಖವೊ ತಟ್ಟೆ ಹೊನ್ನು ಮುಕ್ಕಿ ಬಿಡಬೇಕೆನಿಸುವಂ...

ಬನ್ನಿ ಓ ತಾರೆಗಳೆ ನೆಲಕಿಳಿದು ಬನ್ನಿ ಆಗಸದ ಕಾಂತಿಯನು ಭೂಮಿಗೂ ತನ್ನಿ, ಕೋಟಿ ಮೈಲಿಗಳಾಚೆ ಹೊಳೆವ ತೇಜಗಳೆ ಬಂದು ನಮ್ಮನು ಹರಸಿ ಕಾಂತಿಗೋಳಗಳೆ. ಸೂರ್ಯ ಚಂದಿರ ಮುಗಿಲ ಜೊತೆ ಬಾಳುವವರೆ ಗಾಳಿ ಉಯ್ಯಾಲೆಯಲಿ ತೂಗಿಕೊಳುವವರೆ, ಎಂದೂ ಆರದೆ ಉರಿವ ನಂದಾದ...

1...2324252627...33

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....