
ಮರಳಿ ಯತ್ನವ ಮಾಡು! ಮರಳಿ ಯತ್ನವ ಮಾಡು! ತೊರೆಯದಿರು ಮೊದಲು ಕೈ ಗೂಡದಿರಲು. ಹಿರಿದು ಧೈರ್ಯವ ಹಾಳು! ತೊರೆಯದಿರು, ತೊರೆಯದಿರು! ಮರಳಿ ಯತ್ನವ ಮಾಡು, ಸಿದ್ಧಿಸುವುದು. ಒಂದು ಸಲ ಕೆಟ್ಟುಹೋ ಯ್ತೆಂದು ನೀ ಅಂಜದಿರು ಕುಂದಿಲ್ಲ. ಕೈಗೂಡ -ದನಿತರಿಂದ ನ...
ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ ಬಗೆ ಬಗೆಯ ಬೇಡರಿಂದಲಿ ದೂರವಾಗು. ಹೊತ್ತನ್ನು ತಿಂಬ ಸೋಮಾರಿತನ ಬೇಡ! ಮತ್ತು ಹಿಡಿಸುತ ಮೈ ಕೊಲುವ ಕಳ್ಳು ಬೇಡ! ಕತ್ತು ಕೊಯ್ಕರ ಕೂಡೆ ನಂಟುಬೇಡತನ! ಉತ್ತಮೋತ್ತಮರಲ್ಲಿ ನಿನ್ನ ಹಗೆ ಬೇಡ! ಎತ್ತಿದ್ದ ಸಾಲ...
ಬಣ್ಣ ಬಣ್ಣದಾ ಚಿಟ್ಟೆ ಸುಂದರ ಅದರ ಬಟ್ಟೆ ಹಿಡಿಯಲು ಓಡಿಬಿಟ್ಟೆ ಅಯ್ಯೋ ಬಿದ್ದು ಕೆಟ್ಟೆ ಕಾಮನ ಬಿಲ್ಲಿನ ಬಣ್ಣ ತಣಿಸಿತು ನನ್ನ ಕಣ್ಣ ಬರೆದವರಾರು ಚಿತ್ರ ಹೇಳು ನನ್ನ ಹತ್ರ ಹೂವಿನ ತೋಟಕೆ ಹಾರಿ ಹೂವಿನ ತೇರನ್ನೇರಿ ಕುಣಿವ ನಿನ್ನ ರೆಕ್ಕೆ ನೋಡಿ ನಾನ...
ಆಡಿನಾ ಮರೀ, ಆಡ ಬಾರೆಲೆ! ಓಡ ಬೇಡೆಲೆ, ನೋಡಿ ನನ್ನನು! ಅರಳಿ ಎಲೆಯನೂ, ಹಲಸಿನೆಲೆಯನೂ, ಹುರುಳಿ ಕಡಲೆಯಾ, ಕಲಸಿ ಕೊಡುವೆನು. ಮಾತನಾಡದೇ, ನನ್ನ ನೋಡದೆ, ಏತಕ್ಹೋಗುವೆ? ಆಡಿನಾ ಮಗೂ! ***** (ಕವಿಶಿಷ್ಯ)...
ಚದುರಿ ಹೋದ ಮುತ್ತುಗಳು ಒಟ್ಟುಗೂಡಿವೆ ಒಂದೆ ಬಣ್ಣ ಅಂಗಿತೊಟ್ಟು ಶಾಲೆಗ್ಹೊರಟಿವೆ ಬಾಡಿಹೋದ ಮೊಗದಲೀಗ ನಗೆಯು ಉಕ್ಕಿದೆ ಪಾಠಕಲಿಯುವತ್ತ ಅವರ ಮನವು ಹೊರಳಿದೆ ಕೂಲಿಯಿಂದ ಮುಕ್ತರಾಗಿ ಬಂದುಬಿಟ್ಟರು ಆಟಪಾಠ ಎಲ್ಲವನ್ನು ಕಲಿತು ನಲಿದರು ಶಾಲೆ ಬಯಲಲೀಗ ಅ...
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ವಿಜಯನಗರ ಸಾಮ್ರಾಜ್ಯ ಆರಂಭದಲ್ಲೇ ಉತ್ತರ ಭಾರತದ ಕಳಿಂಗ ದೇಶದವರೆಗೂ ಸಿದ್ಧಿ ಪ್ರಸಿದ್ಧಿ ಹೊಂದಿತ್ತು! ವಿಜಯನಗರ ಸಾಮ್ರಾಜ್ಯವನ್ನು ತೌಳವ ನರಸನಾಯಕ ಅಳುತ್ತಿದ್ದ. “ಅಧಾರ್ಮಿಕರಾದ ಮಹಾರಾಜರು ಎಂದೂ ಶ...
ಬೆಂಗಳೂರೆಂಬ ಪಟ್ಟಣದಲ್ಲಿದ್ದ ರಾಜಕುಮಾರ ಬಡಿಗೇರ, ಜಯಪ್ಪ, ಶಂಕರ್ ಗುಡಿಮನಿ- ಮೂವರು ಸೇರಿ ತಮ್ಮಳ್ಳಿಗೆ ಮಕರ ಸಂಕ್ರಾಂತಿ ಹಬ್ಬಕ್ಕೆ ಕಾರಿನಲ್ಲಿ ತೆರಳಿದರು. ಹಳ್ಳಿಯಲ್ಲಿ ಬಾಲ್ಯದ ಗೆಳೆಯ ಲಕ್ಷ್ಮಣ ಪಾತ್ರೋಟನೊಂದಿಗೆ ಹೊಲ, ಗದ್ದೆ, ತೋಟ, ಹಳ್ಳ, ...
ದೇವರ ದೇವನು ಮಹಾವಿಷ್ಣುವು ದಶಾವತಾರವ ತಾಳಿದನು ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ ಲೋಕಕಲ್ಯಾಣವ ಮಾಡಿದನು- ಹಿಂದಿನಿಂದಲೂ ಕೇಳುತಲಿರುವೆವು ದಶಾವತಾರದ ಕಥೆಯನ್ನು ಇಂದು ಬೇರೆಯೇ ರೀತಿಯೊಳರಿಯುವ ಕಥೆಯಲಿ ಅಡಗಿದ ತತ್ವವನು! ಮೊದಲಿಗೆ ಪ್ರಳಯವು ಘಟ...
ವ್ಯಾಸಮಠದ ಶ್ರೀವ್ಯಾಸರಾಯರು ಪರೀಕ್ಷೆ ಮಾಡಲು ಶಿಷ್ಯರನು ನೀಡಿದರೆಲ್ಲರಿಗೆರಡೆರಡಂತೆ ಮಾಗಿದ ಬಾಳೆಯ ಹಣ್ಣನ್ನು ’ತಿಂದು ಬನ್ನಿರಿ ಬಾಳೆಯ ಹಣ್ಣನು ಯಾರೂ ಇಲ್ಲದ ಜಾಗದಲಿ’ -ಎಂದು ಕಳುಹಿದರು ಎಲ್ಲ ಶಿಷ್ಯರನು ಒಂದಿನ ಸಂಜೆಯ ವೇಳೆಯಲಿ ಅರ್ಧಗಂಟೆಯಲಿ ಎ...













