ಶಾಲೆಗೆ ಹೋಗೋ ಜಾಣ ಮರಿ
ರವಿವಾರ ತಾತಾ ಬಿಡುವರಿ

ಮೊಬೈಲ್ ತಂದು ತೋರಿಸುವೆ
ನಿಮಗೆ ಪಾಠವ ಮಾಡುವೆ

ಕಿವಿಗೊಟ್ಟು ಕೇಳಿ ನಾ ಹೇಳುವುದ
ಪ್ರಪಂಚವೆ ಅಂಗೈಲಿ ಇರುವುದ

ಮೊಬೈಲ್ ಕಂಪ್ಯುಟರ್ ಗೊತ್ತಿರಬೇಕು
ಇಲ್ಲದಿರೆ ಗಮಾರೆಂದು ಕರೆಯುವರು

ಬಣ್ಣದ ಅಂಡ್ರಾಯ್ಡ್ ಸೆಟ್ಟ ನೋಡು
ಪಾಟಿಯ ಸುತ್ತಲ ಕಟ್ಟಿನ ಗೂಡು

ಒಂದು ಎರಡು ಒತ್ತು ಬಿರಡೆ
ಮೂರು ನಾಲ್ಕು ಆಯ್ತು ಚಾಲೂ

ಐದು ಆರು ಏನೇನಿಲ್ಲ ಮೇರು
ಏಳು ಎಂಟು ಪ್ರಪಂಚದ ನಂಟು

ಒಂಭತ್ತು ಹತ್ತು ತೆರೆಯು ಬಿತ್ತು
ಬ್ಯಾಟರಿ ಚಾರ್ಜ್ ಮುಗಿದ್ಹೋಗಿತ್ತು!
*****
೨೭.೦೯.೨೦೧೫