
ಕೆಲವು ವರ್ಷಗಳ ಮೊದಲು ನಾನು ಸನಾದಲ್ಲಿದ್ದಾಗ ಯುನಿವರ್ಸಿಟಿಯವರು ನನಗೆ ಅಪಾರ್ಟ್ಮೆಂಟೊಂದರ ನಾಲ್ಕನೆಯ ಮಹಡಿಯಲ್ಲಿ ಫ್ಲಾಟ್ ಕೊಟ್ಟಿದ್ದರು. ಇದೇ ಅತಿ ಮೇಲಿನ ಮಹಡಿ ಕೂಡಾ. ನನ್ನ ಫ್ಲಾಟಿಗೆ ಒಂದು ಸಣ್ಣ ಬಾಲ್ಕನಿಯಿತ್ತು. ಅನತಿ ದೂರದಲ್ಲೊಂದು ಶಾಲೆ;...
ಬೆಳಗಾವಿಯ ಹವ್ಯಾಸಿ ಕಲಾಪ್ರೇಮಿಗಳು ಸೇರಿ ರಂಗ ಕಲೆಯ ಹವ್ಯಾಸ ಸುಸಂಸ್ಕೃತ ಸಮಾಜವನ್ನು ನಿರ್ಮಿಸಲು ನಾಟಕ ಕಲೆ ಬಳಕೆಯಾಗಬೇಕೆನ್ನುವ ಹಂಬಲದೊಂದಿಗೆ ಸಂಸ್ಕೃತಿ ಕಲೆಗಳ ಬಗ್ಗೆ ಅಭಿರುಚಿ ಮೂಡಿಸುವ ಮಹಾ ಉದ್ದೇಶದೊಂದಿಗೆ ನೂತನವಾಗಿ ಹುಟ್ಟಿದದೆ ‘ಕಲಾರಂಗ...
ತನ್ನ ಕೋಳಿಯ ಕೂಗಿನಿಂದಲೇ ಸೂರ್ಯ ಹುಟ್ಟೋದು, ತನ್ನ ಬೆಂಕಿಯಿಂದಲೇ ಹಳ್ಳಿಯ ಜನರು ಆಡುಗೆ ಮಾಡೋದು ಎಂದು ನಂಬಿಕೊಂಡು ಜಂಭ ಮಾಡಿದ ಮುದುಕಿಯ ಗರ್ವಭಂಗವಾದ ಕಥೆ ನಮ್ಮ ಜನಪದರು ಕಟ್ಟಿದ ಅಪರೂಪದ ಕಥೆಗಳಲ್ಲಿ ಒಂದು. ಇವತ್ತಿಗೂ ಕೂಡ ಈ ಕಥೆ ಆಪ್ತವಾಗುವುದ...
‘ದೇವರು ಪಗಡೆಯಾಡುವುದಿಲ್ಲ’ (God doesn’t play at dice) ಎನ್ನುವುದು ಐನ್‌ಸ್ಟೈನ್‌ನ ಒಂದು ಸುಪ್ರಸಿದ್ಧ ಮಾತು. ಅಲ್ಬರ್ಟ್ ಐನ್‌ಸ್ಟೈನ್ ಇಪ್ಪತ್ತನೆಯ ಶತಮಾನದ ಜಗತ್ತಿನ ಅತಿ ದೊಡ್ಡ ಭೌತಶಾಸ್ತ್ರಜ್ಞ ಹಾಗೂ ಶಾಂತಿದೂತ- ಭೌತವಿಜ್ಞಾನದಲ್...
“ಕ್ರೈಸ್ತರು ಮಹಮದೀಯರನ್ನು ದ್ವೇಷಿಸುವಷ್ಟು ಮತ್ತಾರನ್ನು ದ್ವೇಷಿಸುವುದಿಲ್ಲ” ಎನ್ನುವ ವಿವೇಕಾನಂದರ ಈ ಮಾತು ನನ್ನನ್ನು ಗಾಢವಾಗಿ ಕಲಕಿತು. ಏಕೆ ಹೀಗೆ ಎಂದು ಚಿಂತಿಸತೊಡಗಿದೆ. ನಾನು ಕ್ರೈಸ್ತ ಪಾದ್ರಿಗಳೊಂದಿಗೆ ಇರುವ ಸಂದರ್ಭಗಳಲ್ಲ...
ಇದು ಅಲ್ಲಮನ ಮಾತು. ನಮ್ಮ ಜನ ಆಚಾರದ ಬಗ್ಗೆ ಮಾತಾಡುತ್ತಾರೆ. ರೀತಿ ಅನ್ನುತ್ತಾರೆ. ರಿವಾಜು ಅನ್ನುತ್ತಾರೆ. ಪದ್ದತಿ ಅನ್ನುತ್ತಾರೆ. ಆದರೆ ದಿನ ನಿತ್ಯದ ಆಡು ಮಾತಿನಲ್ಲಿ ಸಂಸ್ಕೃತಿ ಅನ್ನುವ ಮಾತನ್ನು ಬಳಸುವುದಿಲ್ಲ. ಸಂಸ್ಕೃತಿ ಅನ್ನುವುದು ಸಂಸ್ಕ...
ಪ್ರಥಮ ಪ್ರಣಯದ ಸುಖಾಗಮನದಿಂದ ಆನಂದಪರವಶವಾಗುವಂತೆ, ನಮ್ಮೂರಿಗೆ ವಿದ್ಯುದ್ದೀಪಗಳು ಬರುವುವೆಂಬುದನ್ನು ಕೇಳಿದ ಕೂಡಲೇ ಊರಿಗೆ ಊರೇ ಒಂದು ವಿಧದ ಸಂತೋಷಾತಿರೇಕದಿಂಷ ಕುಣಿದಾಡಿತು, ಆ ಉನ್ಮಾದದ ಕುಣಿದಾಟದಲ್ಲಿ ಎಲ್ಲೆಲ್ಲಿ ಏನೇನು ಜಾರಿಹೋಗಿ ಯಾರಿಗೆ ಎ...
ಮಕ್ಕಳಿಗೆ ಎಂಥಾ ಕತೆಗಳು ಬೇಕು? ಅಜ್ಜಿಕತೆಗಳು ಬೇಕು. ಅಜ್ಜಿಯಂದಿರೇ ಹೇಳಿದರೆ ಉತ್ತಮ. ಆದರೆ ಅಂಥ ಅಜ್ಜಿಯಂದಿರು ಈಗ ಇಲ್ಲ. ಅಥವಾ ಸದ್ಯವೇ ಇಲ್ಲದಾಗುತ್ತಾರೆ. ಯಾಕೆಂದರೆ ಮುಂದಿನ ಕಾಲದ ಅಜ್ಜಿಯಂದಿರಿಗೆ ಅಜ್ಜಿಕತೆಗಳು ಗೊತ್ತಿರುವುದಿಲ್ಲ! ಆದ್ದರಿ...
ಮಾತು ಕಟ್ಟಿದರೆ ಮನುಷ್ಯ ‘ಫಿಸಿಕಲ್’ (ಬಲಪ್ರದರ್ಶಕ) ಆಗುತ್ತಾನೆ ಎಂಬ ಒಂದು ಅಭಿಪ್ರಾಯವಿದೆ. ‘ಫಿಸಿಕಲ್’ ಆಗುವುದೆಂದರೆ. ‘ದೈಹಿಕ’ವಾಗುವುದು, ಬಲ ತೋರಿಸುವುದು, ಬಲ ಪ್ರಯೋಗಿಸುವುದು ಇತ್ಯಾದಿ. ಮಾತು ಹಲವು ಕಾರಣಗಳಿಂದಾಗಿ ಕಟ್ಟಬಹುದು. ಮಾತೇ ಮೊಂ...























