ಖೇಲ್ ಐಸುರ ಮೊಹರಮ್ ತೀರಿತು || ಪ || ಐಸುರ ತೀರಿತು ಮೊಹರಮ್ ಸಾಗಿತು ಮೀರಿದ ಕರ್ಬಲ ದಾರಿಯೊಳಗ ಖೇಲ್ || ೧ || ಬಣ್ಣದ ಲಾಡಿ ಕಣ್ಣಿಲೆ ನೋಡಿ ಪುಣ್ಯಪಾಪಗಳೆರಡಿಲ್ಲದಲಾವಿ ಖೇಲ್ || ೨ || ಸತ್ಯಕ್ಕೆ ಶರಣರು ಮರ್ತ್ಯಕ್ಕೆ ಮಹಿಮರು ಗುರ್ತತೋರಿಸಿ ಹತ್...

ನಿನ್ನ ಕಣ್ಣ ಹೂದೋಟದಲ್ಲಿ ನಾ ದುಂಬಿಯಾಗಿ ಬರುವೆ ನಿನ್ನ ಹಗಲ ಹಾಡುಗಳ ಹೂವುಗಳ ನಗುವ ನೋಡಲಿರುವೆ ನಿನ್ನ ತೋಟದಾಚೆ ನನಗು ತೋರದಾಚೆ ಸುಗ್ಗಿಯಾಟದಲಿ ಹಿಗ್ಗಿ ನಲಿವ ಕಿನ್ನರರ ಕೂಡಲೆಂದು ಒಲವಿನಾಟದಲಿ ನಲಿವಿನಾಟದಲಿ ನೋವು ತೀರಲೆಂದು ನಿನ್ನ ಬೇಡಿಕೆದಾ...

ಭವಸಯ್ಯಾಡಿದ್ದೇನೋ ಮೊಹರಮ್ಮಕೆ ಅಲಾವಿಯಾಡಿದ್ದೇನೋ || ಪ || ಭವ ಎಂಬ ಭವಸಯ್ಯ ಅರುವಿನ ಅಲಾವಿ ಮೂರು ಕೂಡಿದಲ್ಲೆ ಮೊಹರಮ್ಮ ಮಾಡಿದ್ದೆ || ೧ || ದುಷ್ಟ ಯಜೀದನು ಸುಖಸು ಜಾತಿ ಮುಸಲ್ಮಾನನು ಝೇರೆಭಾರ ಘಟಪಟ ಕತ್ತಲ ರಾತ್ರಿ ಝಟಪಟ ಘಟವೇರಿ ದರದಪವಾಯಿತು...

  ಜನವರಿ ಅಥವಾ ಮೇ ತಿಂಗಳಿನ ಮಧ್ಯಭಾಗದಲ್ಲಿ ಆತ ನಮ್ಮ ಸಾರಾಯಿ ಗಡಂಗಿಗೆ ವೆಂಡರ್ ಆಗಿ ಬಂದ. ಅಷ್ಟೊತ್ತಿಗಾಗಲೇ ಛೋಟ ಡಾನ್‌ಗಳೆನ್ನಿಸಿಕೊಂಡವರ ತಲೆ ತೆಗೆದು ಬಂದಿದ್ದ. ಅವನ ಮುಖದ ಮೇಲೆ ನೊಣಗಳು ಹಾಯುತ್ತಿರಲಿಲ್ಲ; ಆದರೆ ಹೂ‌ಎಲೆ ತೊಟ್ಟುಗಳು ...

ನನ್ನ ಕೈಗಡಿಯಾರದ ಹಸಿರು ಹೂತೋಟದಲ್ಲಿ ದಿವಸಗಳ ಮೊಗ್ಗುಗಳು ಅರಳುತ್ತವೆ ಸೆಕೆಂಡು ನಿಮಿಷ ಗಂಟೆಗಳ ದುಂಬಿಗಳು ಸುತ್ತು ಮುತ್ತು ಮಧುರ ಆಘಾತಕ್ಕೆ ಪದವಾಗಿ ಹಿತವಾಗಿ ಲೆಕ್ಕಕ್ಕೆ ಸಿಕ್ಕದ ನಾನಾ ಬಣ್ಣದ ಹಕ್ಕಿಗಳು ಬಂದು ಹೂವುಗಳ ಅಡಿಗೆ ತಲೆಮರೆಸಿ ಹಾಡಲ...

ಸಾಕಾಗದೆ ಇನ್ನ್ಯಾಕ ಐಸುರಭೋ ||ಪ|| ನಾಲ್ಕು ಲೋಕಪತಿ ಮರ್ತ್ಯಜ ಸುತರಿಗೆ ಬೇಕಿಲ್ಲದೆ ವಾಕರಿಸಿತು ಮೊಹರಮ್ ||೧|| ಹಿಂದು ಮುಸಲ್ಮಾನ ಹದಿನೆಂಟು ಜಾತಿಗೆ ಕುಂದನಿಡಿಸಿ ಕುಣಿದಾಡುವ ಮೊಹರಮ್ || ೨ || ರೂಢಿಪ ಶಿಶುನಾಳಧೀಶಗ ಸಲ್ಲದ ಖೋಡಿ ರಿವಾಯಿತ ಹಾಡ...

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...