
ನಿನ್ನ ಕನಸುಗಳಲ್ಲಿ ಮುಳುಗಿಹೋದೆನು ನಾನು ಎತ್ತಿ ಕಾಪಾಡುವರು ಯಾರು? ಸವೆನೆನಪಿನಾಳದಲಿ ಹುಗಿಮ ಹೋಗಿರುವೆನು ಅಗೆದು ತೆಗೆಯುವರಿಲ್ಲವೇನು? ನಿನ್ನ ಬಯಕೆಯ ಗಾಳಿ ಹಾರಿಸಿತು ನನ್ನ ಹಿಡಿದು ನಿಲ್ಲಿಸುವವರು ಯಾರು? ಕ್ರೂರ ವಿರಹಾಗ್ನಿಯಲಿ ಬೇಯುತಲೆ ಇರು...
ಕಪ್ಪು ಬಣ್ಣದ ಕೃಷ್ಣ ಎಷ್ಟು ಚಂದವೊ ನೀನು! ಕಪ್ಪಿನ ಮಹಿಮೆಯ ತಿಳಿದೆ ಈಗ ಮುಗಿಲಾಳ ಕಡಲಾಳ ಎಲ್ಲ ಕಪ್ಪಲ್ಲವೆ ರತ್ನಗಳಲಿರುವಂತೆ ನೀಲರಾಗ? ಕಪ್ಪ ಮೋಡಗಳೆಲ್ಲ ಒಟ್ಟಾಗಿ ಕೂಡಿವೆ ದಟ್ಟೈಸಿ ನಡುವೆ ಮಿಂಚೆದ್ದಿದೆ, ಕಪ್ಪ ಕೋಗಿಲೆ ದನಿ ಪಂಚಮದಿ ಹೊಮ್ಮಿದೆ...
ನಿನ್ನ ಬರವನೇ ಕಾಯ್ದು ಇರುವೆ ಇರವೆಲ್ಲ ಕಾಯ್ವ ಚಿಂತೆ ಬರದೆ ನೀನು ಬರಡಾದೆ ನಾನು ಬಾಗಿಲನು ತೆರೆದೆ ನಿಂತೆ ಬಣ್ಣ ಬಣ್ಣ ವೇಷಗಳ ತೊಟ್ಟು ಬಯಲಾಟ ಬೊಂಬೆಯಂತೆ ಬಣ್ಣಿಸಿದ್ದೆ ನಾ ಹಿಂದೆ ಅಂತೆಯೇ ಎಲ್ಲ ಅಂತೆ ಕಂತೆ ಜಟೆಕಿರೀಟದಲಿ ನಾಲ್ಕು ಕೈಗಳಲಿ ವ...
ಏತಕೆ ಆಟ ಆಡುವಿ ಭಕ್ತನ ವೇಷ ಹೂಡುವಿ? ಮೈಯ ಮೋಹದ ಕಾಮೀ ಬೆಕ್ಕು ಗುರುಗುಡುತಿದೆ ಒಳಗೆ ಬಿಚ್ಚಿದೆ ಉಗುರ, ಎತ್ತಿದೆ ಪಂಜ ವಿರಾಗಿ ವೇಷ ಹೊರಗೆ ಲೋಭ ಮೋಹಗಳ ಚಿರತೆ, ತೋಳ ತಲೆಯ ಬೋನಿನೊಳಗೆ ಆದರ ಫಳಫಳ ಗೋಪೀ ಚಂದನ ತೋಳಿಗೆ ಎದೆ ಹಣೆಗೆ ಜಪಮಣಿ ಮಾಲೆಯ ನ...
ನನ್ನ ಹಿಂದೆಯೇ ಈ ಗೋಪಿಯರು ಸದಾ ತಿರುಗುವುದು ಯಾಕಮ್ಮಾ? ಬೇಡ ಎಂದರೂ ಕೈಹಿಡಿಳೆದು ಗಲ್ಲ ಸವರುವರು ಸರಿಯಾಮ್ಮಾ? ನಾಚಿಕೆ ಇಲ್ಲದೆ ಹೆಣ್ಣುಗಳಮ್ಮಾ ಬಾಚಿ ತಬ್ಬುವರು ಮೈಯನ್ನು, ಕಣ್ಣಿಗೆ ಕಣ್ಣು ಸೇರಿಸಿ ನಗುವರು ಮೆಲ್ಲಗೆ ಕೆನ್ನೆಯ ಹಿಂಡುವರು. ಸಾಕು...
ಶ್ರಮ ಜೀವನಕೆ ಜಯವೆನ್ನಿ ಶ್ರಮಿಕರಿಗೆಲ್ಲಾ ಜಯವೆನ್ನಿ ಶ್ರಮವೇ ಜೀವನಕಾಧಾರ ಶ್ರಮದಿಂದಲೇ ಜೀವನಸಾರ ಶ್ರಮವೇ ಬದುಕಿನ ಬೇರು ಶ್ರಮವಿಲ್ಲದೆ ಬದುಕೇ ನಿಸ್ಸಾರ ಮಣ್ಣಿನ ಕಣಕಣದೆಲ್ಲಿಡೆ ಮಿಡಿಯುತ ಹೂವೂ ಹಣ್ಣು ನಿತ್ಯಾ ನಿಸರ್ಗವೆಲ್ಲಾ ಚೆಲುವಿನ ತವರು ಶ...
ಬೆಳಗಾಗಿದೆ ಮೆಲೇಳು ಕೃಷ್ಣಾ ಬಿಸಿಲಿಣುಕಿದೆ ಮೇಲೇಳು ತೆರೆದಿದೆ ಮನೆಗಳ ಬಾಗಿಲು – ಹಸು ಕರು ಆಂಭಾ ಎನುತಿದೆ ಏಳು ಕೇಳಿಸದೇನೋ ಮೊಸರನು ಕಡೆಯುವ ಗೋಪೀ ಕೈಬಳೆ ಸದ್ದು, ಆಗಲೆ ಬಾಗಿಲ ಬಳಿಯಲಿ ಗೆಳೆಯರು ಆಟಕೆ ಹೋಗಲು ಕದ್ದು! ಮರಗಿಡಬಳ್ಳಿ ಓಲಾಡ...













