
ಈ ಮಹಾದೇವನ ಸ್ತೋತ್ರವ ಮಾಡುವದಕ್ಕೆ ಜಿಹ್ವೆ ಮೆಟ್ಟದು. ಆ ಮಹಾದೇವನ ಸ್ತೋತ್ರವ ಕೇಳುವದಕ್ಕೆ ಕರ್ಣ ಮೆಟ್ಟದು. ಮುಟ್ಟಿ ಪೂಜಿಸಿಹೆನೆಂದರೆ, ಹಸ್ತ ಕೆಟ್ಟದು. ನೋಡಿಹೆನೆಂದರೆ ನೋಟಕ್ಕೆ ಅಗೋಚರ, ಅಪ್ರಮಾಣ. ಇಂತು ನಿಶ್ಚಿಂತ ನಿರಾಳ ಬಯಲ ದೇಹ ಎನ್ನಲ್ಲಿ...
ಭತ್ತದ ಕಣಜದೊಳಗೆ ನುಸಿ ಈಜಾಡಿ ತಿಂದು ತೇಗಿ ಸಿಪ್ಪೆ ಬೀಸಾಡಿದಂತೆ ಸೋಮು, ನೀನೂ ಅಕ್ಷರದ ಕಣಜದೊಳಗೆ ಈಜಾಡು ಬಿಡದೇ ಅಕ್ಷರ ಅಕ್ಷರ ತಿನ್ನು ತೇಗಾಡುವಷ್ಟು ಓದು ಅರಗಿಸಿಕೋ ಹೊಸ ಹೊಸ ಆಯಾಮಗಳ, ಸಮನ್ವಯಗಳ ಸಂವೇದನೆಗೆ ಸ್ಪಂದಿಸು, ಕಾಲಡಿಯಲ್ಲಿಯೇ ವಿಜ್...
ನಮ್ಮ ಮನೆಯ ಮುಂದಿನ ಚಂದ್ರನಂಥಾ ಸೋಡಿಯಂ ವಿದ್ಯುತ್ ಲಾಂದ್ರ ಇದ್ದಕ್ಕಿದ್ದಂತೆ ವೋಲ್ಟೇಜ್ ಹೀರಿ ನಿಜವಾದ ಚಂದ್ರನಾಗಲು ಹೋಗಿ ಬಡ್ ಎಂದು ಒಡೆದು ಚಪ್ಪನ್ ಚೂರಾಯಿತು. ಪಾಪ ಅದು ಚಂದ್ರನಾಗಲಿಲ್ಲ, ಆದರೇನಂತೆ ಅದರ ಗಾಜ ಚೂರುಗಳು ಬೀದಿಯಲ್ಲಿ ಚಲ್ಲಾಪಿ...
೧ ಸಣ್ಣಪುಟ್ಟ ಓಣಿಗಳನ್ನೂ ಬೀದಿಗಳನ್ನೂ ಈ ಪೇಟೆಯ ಒಳಹೊರಕ್ಕೆ ಹೊಕ್ಕು ಹೊರಟು ಅಚಾನಕ ನಿಮ್ಮ ಕೈಬಿಡುವ ಹಾದಿಗಳನ್ನೂ ಹೋಲಿಸಬಹುದು ಕ್ಲಿಷ್ಟವಾದೊಂದು ನರಮಂಡಲಕ್ಕೆ ಅದರಿದರ ಮಿದುಳು ಯಾವುದೋ ನಾನು ಕಾಣೆ ತಾಲೂಕಾಪೀಸೆ, ನಗರಸಭಾಕಛೇರಿಯೆ, ಜೈಲೆ, ರೈಲು...
ಅಯ್ಯ ನರರೊಳು ಹುಟ್ಟಿ, ಮರಹಿನೊಳಗೆ ಬಿದ್ದು, ಒಳತಂದು ಮಹಾಶರಣರೊಳು ಎನ್ನ ನಿಲಿಸಿ ಕುರುಹ ತೋರಿದರು. ಗುರುವೆಂಬುದನರುಹಿದರು. ಜಂಗಮವೆಂಬುದನರುಹಿದರು. ಅವರ ನೆಲೆವಿಡಿದು ಮನವ ನಿಲಿಸದೆ, ಕಾಯಜೀವವೆಂಬುದನರಿದೆ. ಭವಬಂಧನವ ಹರಿದೆ. ಮನವ ನಿರ್ಮಳವ ಮ...
“ಕಣ್ಣುಗಳು ಮಾರಾಟಕ್ಕಿವೆ ಹೃದಯ ಮಾರಾಟಕ್ಕಿದೆ ಕೈ ಕಾಲು ಕಿಡ್ನಿ ರಕ್ತ ಎಲ್ಲ ಮಾರಾಟಕ್ಕಿವೆ” ಹೇಳಿ ಅವುಗಳೆಲ್ಲದರಿಂದ ಉದ್ಭುವಿಸುವ ಭಾವನೆಗಳೂ ಮಾರಾಟಕ್ಕಿವೆಯೆ? ಪ್ರಯೋಗಶಾಲೆ, ಶೀತಾಗಾರಗಳೆಲ್ಲ ಕೊಡು ಕೊಳ್ಳುವವರ ಸಂತೆಗಳು ಹಾ! ಇವೆ...













