“ಕಣ್ಣುಗಳು ಮಾರಾಟಕ್ಕಿವೆ
ಹೃದಯ ಮಾರಾಟಕ್ಕಿದೆ
ಕೈ ಕಾಲು ಕಿಡ್ನಿ ರಕ್ತ ಎಲ್ಲ ಮಾರಾಟಕ್ಕಿವೆ”
ಹೇಳಿ ಅವುಗಳೆಲ್ಲದರಿಂದ
ಉದ್ಭುವಿಸುವ ಭಾವನೆಗಳೂ ಮಾರಾಟಕ್ಕಿವೆಯೆ?
ಪ್ರಯೋಗಶಾಲೆ, ಶೀತಾಗಾರಗಳೆಲ್ಲ
ಕೊಡು ಕೊಳ್ಳುವವರ
ಸಂತೆಗಳು
ಹಾ! ಇವೆಲ್ಲ ಬಡಜನರ ಬಜಾರುಗಳಲ್ಲ
ಶ್ರೀಮಂತ five star
shoping centreಗಳು
ನಿಮಗೇನಾದರೂ ಬೇಕೇ ಇಲ್ಲಿ?
ನೀವೇನಾದರೂ ಮಾರುತ್ತೀರಾ ಇಲ್ಲಿ?
ಎಚ್ಚರಿಕೆ,
ಎಲ್ಲದಕ್ಕೂ? fix rate
ನೀವು ಕಠೋರ ಇದ್ದರೆ ಮಾತ್ರ
‘ನಿಮ್ಮದೆಲ್ಲ’ ಬೇರೆಯವರಿಗೆ ಕೊಡಿ
ಒಂದಿಷ್ಟಾದರೂ ಭಾವನೆಗಳು ಮೃದುವಾದಾವು;
ನೀವೇ ಮೃದು ಭಾವಜೀವಿಗಳಿದ್ದರೆ
ಬೇರಯವರದ್ದೇನೂ ಕೊಂಡುಕೊಳ್ಳಿಬೇಡಿರಿ
ಏಕೆಂದರೆ ಅವರ ಕೆಟ್ಟ ಕಣ್ಣು
ರಕ್ತ ಏನೆಲ್ಲ ನಿಮ್ಮ ಹೃದಯದೊಳಗೆ ಹೊಕ್ಕು
ಅತ್ತಿತ್ತ ಝಾಲಾಡಿಸಿದರೆ
ನಿಮ್ಮ ಸ್ಥಿತಿ ಖಂಡಿತಾ ತ್ರಿಶಂಕು
ವಿಚಾರಿಸಿ
ಕೊಡು, ಕೊಳ್ಳಿರಿ!
*****