ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ
ನಾಗಲಿಂಗಯೋಗಿ ತಾನು ತಿರುಗುವುದ್ಯಾತಕೆ ||ಪ||

ದುರಿತಭವದ ಯೋಗದಿಂದ ವಾದವ್ಯಾತಕೆ
ವಾದದಿಂದ ಸಿದ್ಧಯೋಗ ಮಾಡುವುದ್ಯಾತಕೆ ||೧||

ನಾಗಲಿಂಗಯೋಗಿ ತಾನು ತಿರುಗುವುದ್ಯಾತಕೆ
ಬಗಳಾಮುಖಿಯ ಮಗನಕೂಡ ರಗಳಿಯಾತಕೆ ||೨||

ಹಸಿವು ತೃಷಿಯಗಳನು ಬಯಸುದ್ಯಾತಕೆ
ಶಿಶುನಾಳಧೀಶನ ಮರಿತು ಕುಸಿಯುದ್ಯಾತಕೆ ||೩||

****