ಭತ್ತದ ಕಣಜದೊಳಗೆ ನುಸಿ
ಈಜಾಡಿ ತಿಂದು ತೇಗಿ ಸಿಪ್ಪೆ ಬೀಸಾಡಿದಂತೆ
ಸೋಮು,
ನೀನೂ ಅಕ್ಷರದ ಕಣಜದೊಳಗೆ ಈಜಾಡು
ಬಿಡದೇ ಅಕ್ಷರ ಅಕ್ಷರ ತಿನ್ನು
ತೇಗಾಡುವಷ್ಟು ಓದು ಅರಗಿಸಿಕೋ
ಹೊಸ ಹೊಸ ಆಯಾಮಗಳ, ಸಮನ್ವಯಗಳ
ಸಂವೇದನೆಗೆ ಸ್ಪಂದಿಸು,
ಕಾಲಡಿಯಲ್ಲಿಯೇ ವಿಜ್ಞಾನ ತಂತ್ರಜ್ಞಾನಗಳ
ಸಂವೇದನೆಗಳಿಗೆ ಮಿತಿ ಇಲ್ಲ
ಕೊರಡು ಕೊನರುವದು
ಕಲ್ಲು ಕವಿತೆ ಹಾಡುವುದು
ಮುಳ್ಳು ಹೂವಾಗಿ ಅರಳುವುದು
ಭಾವನೆಗೆ ಬೇಲಿ ಬೇಡ
ನದಿಗೆ ಒಡ್ಡು ಬೇಡ
ಆಕಾಶಕ್ಕೆ ಏಣಿ ಬೇಡ
ಸಮುದ್ರಕ್ಕೆ ಸೇತುವೆ ಬೇಡವೇ ಬೇಡ.
(ಸಾಕ್ಷರತಾ ಕವನ)
*****