ತೇರು ಬಂತು, ದಾರಿ

೧ ಗಾಲಿ ಉರುಳಿದಂತೆ-ಕಾಡಿನ ಗಾಳಿ ಹೊರಳಿದಂತೆ- ಬಾನ ದೇಗುಲದ ಬೆಳ್ಳಿ ಗೋಪುರದ ಘಂಟೆ ಮೊಳಗಿದಂತೆ, ಹಾಲು ಕಂಚಿನ ಹೊನ್ನ ಮಿಂಚಿನ ಘಂಟೆ ಮೊಳಗಿದಂತೆ, ಊರ ದಾರಿಯಲಿ ಹೂವ ತೇರಿನಲಿ ಕೃಷ್ಣ ಬರುವನಂತೆ! ೨ ಎತ್ತಿ...

ನರ್ತಕಿ ಬಂದಳು

ನರ್ತಕಿ ಬಂದಳು ಛಲ್‌ಝಲ್ ನಾದದಿ ಠಮ ಢಮ ತಾಳಕೆ ಕುಣಿಯುತ್ತ ಪಾತರಗಿತ್ತಿಯ ಆ ಕುಣಿತ. ಪಾರ್ಥ ಸುಭದ್ರೆಯ ರಾಧಾಕೃಷ್ಣರ- ನೊಬ್ಬಳೆ ತಾನೆಂದೆಣಿಸುತ್ತ ರಂಗಸ್ಥಳದಲಿ ತಿರುಗುತ್ತ. ತುಟಿಯಿಂದುರುಳುವ ಹಾಡಿನ ತನಿರಸ ಮೌಕ್ತಿಕ ಮಣಿಯಂತುರುಳುವುದು; ತಾಳದ ಓಜೆಗೆ...

ಲಿಂಗಮ್ಮನ ವಚನಗಳು – ೯

ಆಸೆಯುಳ್ಳನ್ನಕ್ಕ ರೋಷ ಬಿಡದು. ಕಾಮವುಳ್ಳನ್ನಕ್ಕ ಕಳವಳ ಬಿಡದು. ಕಾಯಗುಣವುಳ್ಳನ್ನಕ್ಕ ಜೀವನ ಬುದ್ಧಿ ಬಿಡದು. ಭಾವವುಳ್ಳನ್ನಕ್ಕ ಬಯಕೆ ಸವೆಯದು. ನಡೆಯುಳ್ಳನ್ನಕ್ಕ ನುಡಿಗೆಡದು. ಇವೆಲ್ಲವು ಮುಂದಾಗಿರ್ದ್ದು ಹಿಂದನರಿದೆನೆಂಬ ಸಂದೇಹಿಗಳಿರಾ ನೀವು ಕೇಳಿರೋ. ನಮ್ಮ ಶರಣರು ಹಿಂದೆ ಹೀಗೆ...

ಪ್ಯಾರಿ ನಗರ

ಫ್ರೆಂಚ್ ಕ್ರಾಂತಿಯ ಅರುಸೊತ್ತಿಗೆಗಳ ವೈಭವದ ದಾಖಲೆಗಳ ಸ್ತಂಭಗಳಡಿಯಲಿ ಭೀಭತ್ಸ ರಕ್ತದ ವಾಸನೆಯ ಗೊರಲಿಗಳು ಶತ ಶತಮಾನಕ್ಕೂ ಕಥೆಗಳನ್ನು ಹೇಳುತ್ತಲೇ ಇವೆ. ಚಕ್ರವರ್ತಿಗಳ ದರ್ಪ, ಅರಮನೆ ಓಪೆರಾ, ಕಾನಕಾರ್ಡ್ ಚೌಕ ನೋಡುತ್ತಿದ್ದಂತೆಯೇ ಐಫಲ್ ಟವರ್‌ದ ತುತ್ತ...

ಹೊಸ ಹರಯದಲಿ ಹೂವು

ಹೊಸ ಹರಯದಲಿ ಹೂವು ಅರಳುತ್ತ ಮೊಗೆಮೊಗೆದು ಮಾಧುರ್ಯವನು ಬೀರಿ ಹಿಗ್ಗಿನಲಿ ಕುಣಿಯುತಿರೆ ದೂರದಿಂ ಹಾರುತ್ತ ದುಂಬಿ ಅದರೆಡೆ ನಡೆದು ತನ್ನಿಚ್ಛೆ ಝೇಂಕರಿಸಿ ಹೂಂಕರಿಸಿ ಹೂವಿನೆಡೆ ದಿಟ್ಟಿಸುತ ಸುತ್ತೆಲ್ಲ ಸುತ್ತಿ ಸುಳಿದಾಡುವೊಲು, ಸಾವ ಛಾಯೆಯು ಬಂದು...

ಅಭಯ ಮಂಗಲ

ಜೀವಜಂಗುಳಿಯು ಇಷ್ಟು ಹೊತ್ತಿನವರೆಗೆ ಎಲ್ಲವನ್ನೂ ಕೇಳಿಕೊಂಡು, ಸೈವೆರದಾಗಿ ಸಂಗಮಶರಣನನ್ನು, ಮಹಾಜನನಿಯನ್ನೂ ಕಣ್ತುಂಬ ಮನ ತುಂಬ ನೋಡಿ ನೋಡಿ, " ಧನ್ಯ! ಧನ್ಯ!! " ಎಂದು ಉದ್ಗರಿಸಿತು. ತಾನು ಕೇಳಿದ ವಿಚಾರಗಳಲ್ಲಿ ಒಂದೊ೦ದನ್ನು ನೆನೆಯುತ್ತ ಕ್ಷಣಹೊತ್ತು...
ಆನೆ ಬಂತು ಆನೆ ಬಂತು

ಆನೆ ಬಂತು ಆನೆ ಬಂತು

ಆನೆ ಬಂತು ಆನೆ ಬಂತು ಬನ್ನಿ ಎಲ್ಲರೂ ಬುಟ್ಟಿ ತುಂಬ ಕಬ್ಬು ಬೆಲ್ಲ ತನ್ನಿ ಎಲ್ಲರೂ ಆನೆ ಹೊಟ್ಟೆ ಲಾರಿ ಹಾಗೆ ಭಾಳ ದೊಡ್ಡದು ಕಣ್ಣು ಮಾತ್ರ ಗೋಲೀ ಹಾಗೆ ತುಂಬ ಸಣ್ಣದು ಒಂದೊಂದ್...

ನಗೆ ಡಂಗುರ-೧೬೧

ವೈದ್ಯರು: "ಹೇಗಿದ್ದಾರಮ್ಮಾನಿಮ್ಮಯಜಮಾನರು?" ಆಕೆ: "ಡಾಕ್ಟರ್, ನನಗೆ ಬೆವರೇ ಬರುತ್ತಿಲ್ಲ ಆಂತಾ ಇದ್ದಾರೆ." ವೈದ್ಯರು: "ಬೆವರು ಬರೋದು ಬಲು ಸುಲಭ; ಅವರು ಹೀಗೆ ಮಾಡಲಿ. ಇವತ್ತು ಅವರಿಗೆ ಔಷಧಿ ಕೊಡಬೇಡಿ. ಬದಲಿಗೆ ಈ ಬಿಲ್ಲುಕೊಡಿ ಸಾಕು...

ಚತುರ್ಯುಗಗಳು

"ಸಾಮಾನ್ಯ ಜೀವನವನ್ನು ಸಾಗಿಸುವದಕ್ಕೇ ಜೀವಿಗಳೆಲ್ಲರೂ ಭಾರ ತಾಳಲಾರದೆ ಬಾಗಿ, ಬಸವಳಿದು ಏದುತ್ತಿರುವಾಗ ನಿಚ್ಚಶಿವರಾತ್ರಿಯಂಥ ಉಚ್ಚ ಜೀವನಕ್ಕೆ ಕೈಯೊಡ್ಡುವದು ಎಲ್ಲರಿಗೂ  ಸಾಧ್ಯವೇ? ಅದು ಸಾಮಾನ್ಯರ ತುತ್ತಲ್ಲ. ಅದನ್ನು ಸಾಮಾನ್ಯರು ಆಶಿಸುವದು ಸಹ ಹಾಸ್ಯಾಸ್ಪದವೇ ಎಂದು ತೋರುತ್ತದೆ....

ಗಾಣದ ಕಬ್ಬು

ಗದ್ದೆಯಿಂದ ರಸವ ತುಂಬಿ ಕಟ್ಟುಬಂತು ಗಾಣಕೆ ಗಾಣ ಅದರ ರಸವ ಹಿಂಡಿ ಒಗೆಯಿತತ್ತ ದೂರಕೆ ಮರದ ಮಡಿಲಿನಿಂದ ಹಣ್ಣ ನರನು ತಾನು ಪಡೆವನು ಬಹಳ ರುಚಿ ಎಂದು ಹೀರಿ ಹಿಪ್ಪೆ ಮಾಡಿ ಒಗೆವನು ಕೆಲವು...