ದೇವರ ಕರುಣೆ

ಸುಖಪಡುವ ಕಾಲದಲಿ ನಿದ್ರೆಯಾತಕೊ ಗೆಳೆಯ
ನಿನ್ನ ಗೆಳತಿಯ ಮರೆತು ಯಾಕೆ ಹೋದೆ
ಬೇಲಿ ಬನಗಳ ಆಚೆ ನೂರು ಕೆರೆಗಳ ಆಚೆ
ಅಡಗಿರುವ ಸುಂದರಿಯ ಯಾಕೆ ಮರೆತೆ

ಓ ಗೆಳೆಯ ಬಾ ಇಲ್ಲಿ ಈ ಮಳೆಯ ನಾಡಿನಲಿ
ಆ ಹಳೆಯ ಜಂಗುಗಳ ನೀ ತೊಳೆದು ಬಾ
ಈ ಹಸಿರ ಹೊಳೆಯಲ್ಲಿ ಈ ಹೂವು ಗಾಳಿಯಲಿ
ಈ ಸುಖದ ಸೆರೆಯಲ್ಲಿ ನೀ ಉಳಿದು ಬಾ

ನಂಬು ಇಲ್ಲಿದೆ ಬೆಲ್ಲ ತುಂಬಿ ಹೋಗಿದೆ ಗಲ್ಲ
ಹಾಡು ಹಕ್ಕಿಯ ಬಿಂಕ ತೇರು ನೋಡು
ಚಳಿಯುಂಡ ಬಿಸಿಲಲ್ಲಿ ಬಿಸಿಲುಂಡ ಗಾಳಿಯಲಿ
ನಿನ್ನ ತೊಟ್ಟಿಲ ನೀನು ತೂಗಿ ನೋಡು

ಈ ಬಿಸಿಲು ಬಿಸಿಲಲ್ಲ ಈ ಚಳಿಯು ಚಳಿಯಲ್ಲ
ಯಾವ ಜನುಮದ ಪುಣ್ಯ ಅಳೆದು ನೋಡು
ರಾತ್ರಿ ಚುಕ್ಕಿಯ ಹಗಲು ಹಕ್ಕಿಯ ಯಾತ್ರಿ
ಯಾವ ದೇವರ ಕರುಣೆ ತಿಳಿದು ನೋಡು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಭ್ರಮ ವಿಷಾದಗಳು ಹದಗೊಂಡ ಪೇಜಾವರ ಸದಾಶಿವರಾಯರ ಕಾವ್ಯ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…