ಗದ್ದೆಯಿಂದ ರಸವ ತುಂಬಿ
ಕಟ್ಟುಬಂತು ಗಾಣಕೆ
ಗಾಣ ಅದರ ರಸವ ಹಿಂಡಿ
ಒಗೆಯಿತತ್ತ ದೂರಕೆ

ಮರದ ಮಡಿಲಿನಿಂದ ಹಣ್ಣ
ನರನು ತಾನು ಪಡೆವನು
ಬಹಳ ರುಚಿ ಎಂದು ಹೀರಿ
ಹಿಪ್ಪೆ ಮಾಡಿ ಒಗೆವನು

ಕೆಲವು ಹೊತ್ತು ತಲೆಯ ಮೇಲೆ
ಸಿಂಗರಿಸುತ ಇದ್ದಿತು
ಬಾಡಿ ಹೋದ ಮೇಲೆ ಹೂವು
ಬೀಸಿ ಒಗೆಯೆ ಬಿದ್ದಿತು

ಇಷ್ಟೆ ತಮ್ಮ ನೀನು ಕೂಡ
ಕೊನೆಗೆ ಪಡೆವ ದುಸ್ಥಿತಿ
ಸೃಷ್ಟಿ ತನ್ನ ಆಟಕಾಗಿ
ಕುಣಿಸಿ ಒಗೆವ ಮೂರುತಿ
***