ನಂಜೀ ಗುಮಾನಿ

ನಾನ್ ಇನ್ನಾರ್‍ಗೋ ನೋಡ್ದೇಂತ್ ಯೋಳಿ
ಇಲ್ದಿದ್ ಅತ್ತೀನ್ ಇಂಜಿ
ಸಿಕದಿದ್ ಬಿತ್ತಾನ್ ಎತ್ತೋಕ್ ನೋಡಿ
ರಾಂಗ್ ಮಾಡ್ಬಾರ್‍ದು ನಂಜಿ. ೧

ನಿದ್ದೇಲ್ ಇಡ್ದಿ ನನ್ನ ಎಬ್ಬಿಸ್ತ
‘ನಿನ್ ಎಸರೇನ್?’ ಅಂತನ್ನು-
‘ಪುಟ್ನಂಜಿ’ ಅಂತನ್ದೆ ಓದ್ರೆ
ಮಾತಿನ್ ಮೆಯ್ಗೆ ತೊನ್ನು! ೨

ಪಕ್ಕದ ಮುತ್ತಿನ್ ಕಂಬದ ಮುಂದಾ
ಇಲ್ದಿದ್ ಯೆಂಚಿಕಡ್ಡಿ!
ನಿನಗದನೂನೆ ನಾನೇಳಾನೆ!
ಯಾಕಿಂಗಾದೆ ಮಡ್ಡಿ? ೩

‘ಬಲಗೈ ಇದ್ದೂ ಇಲ್ದಂಗೇನೆ!’
ಅಂತ್ ಯೋಳ್ದಂದೆ ಎಡಚ-
ಪ್ರೀತೀ ಪಟ್ಗೆ ಸಿಕ್ಕೊಂಡೋರ್‍ಗೆ
ಗ್ನಾನಿದ್ರೂನೆ ಪಡಚ! ೪

ಆಳ್ ಗುಮಾನಿ ಅಂದ್ರೆ-ಆವ್ತಿ
ಅನಾಮತ್ತಾಗ್ ಎಲ್ಲ!
ನಂಗೇ ನಾವೇ ಮುರಕೋಬಾರ್‍ದು
ಅಗಿಯಾಕ್ ಇರೋ ಅಲ್ಲ! ೫

ಈಚೆ ಪಕ್ದಾಗ್ ಅಕ್ಸ್ರಾನೂನೆ
ಆಚೆ ಮನಸನ್ ಬುಳ್ದೆ
ರೂಪಾಯ್ಗ್ ಇದ್ದಂಗ್ ಗುಮಾನಿಗೂನೆ
ಆಚೆ ಈಚೆ ಎಳ್ಡೆ! ೬

ಈ ಗುಮಾನೀನೇ ನಾವ್ ಪ್ರೀತೀಗ್
ಕಟ್ಟೋ ಚಕ್ಕರ್ ಬಡ್ಡಿ!
ಈ ಗುಮಾನೀನೇ ನಂ ಪ್ರೀತೀನ್
ಅಳೆಯೋಕ್ ಅಳತೆ ಕಡ್ಡಿ! ೭
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಬ್ಬಾಳಿಕೆಗೆ – ೧

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…